ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ(ಕವನ) ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ.

ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.

ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.

blank

ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.

blank

ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ.

blank

ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ. ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್‍ರವರ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್‍ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.

blank

ದಿವ್ಯಾ ಅವರನ್ನು ಮನೆಯಲ್ಲಿ ಕವನ ಎಂದು ಕರೆಯುತ್ತಾರೆ. ಹೀಗಾಗಿ ಅರವಿಂದ್ ಶಾರ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ‘ಕೆ’ ಎಂದು ಕರೆಯುತ್ತಾರೆ. ಇದನ್ನೂ ಓದಿ:ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

The post ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ appeared first on Public TV.

Source: publictv.in

Source link