ಜನಸಂಖ್ಯಾ ಸ್ಫೋಟಕ್ಕೆ ಅಮೀರ್ ಖಾನ್​ರಂಥ ಜನರೇ ಹೊಣೆಗಾರರು -ಬಿಜೆಪಿ ಸಂಸದ

ಜನಸಂಖ್ಯಾ ಸ್ಫೋಟಕ್ಕೆ ಅಮೀರ್ ಖಾನ್​ರಂಥ ಜನರೇ ಹೊಣೆಗಾರರು -ಬಿಜೆಪಿ ಸಂಸದ

ನವದೆಹಲಿ: ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ನಟ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

blank

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೀರ್ ಖಾನ್ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ಅವರನ್ನು ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ಅಮೀರ್ ಖಾನ್ ಮತ್ತು ಕಿರಣ್ ರಾವ್ ಹೇಳಿಕೆ ಬಿಡುಗಡೆ ಮಾಡಿ ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದರು.

The post ಜನಸಂಖ್ಯಾ ಸ್ಫೋಟಕ್ಕೆ ಅಮೀರ್ ಖಾನ್​ರಂಥ ಜನರೇ ಹೊಣೆಗಾರರು -ಬಿಜೆಪಿ ಸಂಸದ appeared first on News First Kannada.

Source: newsfirstlive.com

Source link