ಮತ್ತೆ ಪುಟಿದೇಳಲು BCCI ಮಾದರಿ: ದ್ರಾವಿಡ್​ರಂತೆ ಯಶಸ್ಸು ಸಾಧಿಸ್ತಾರಾ ಲಂಕಾದ ಈ ಜಂಟಲ್​​​ಮನ್?

ಮತ್ತೆ ಪುಟಿದೇಳಲು BCCI ಮಾದರಿ: ದ್ರಾವಿಡ್​ರಂತೆ ಯಶಸ್ಸು ಸಾಧಿಸ್ತಾರಾ ಲಂಕಾದ ಈ ಜಂಟಲ್​​​ಮನ್?

ಅಧಃಪತನದತ್ತ ಸಾಗ್ತಿರುವ ಶ್ರೀಲಂಕಾ ತಂಡಕ್ಕೆ, ಹೊಸ ರೂಪರೇಷೆ ನೀಡಲು ಲಂಕಾ ಕ್ರಿಕೆಟ್​ ಬೋರ್ಡ್ ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ಬೋರ್ಡ್​ ಮಾದರಿಯನ್ನ ಅನುಸರಿಸಿ, ಸಕ್ಸಸ್ ಕಾಣಲು ಮುಂದಾಗಿದೆ.

ಶ್ರೀಲಂಕಾ ತಂಡ ವಿಶ್ವ ಕ್ರಿಕೆಟ್​ ಇತಿಹಾಸದಲ್ಲಿ ಯಶಸ್ವಿ ತಂಡಗಳಲ್ಲೊಂದು! ಸಿಂಹಳೀಯರ ಘರ್ಜನೆಗೆ ಬಲಾಢ್ಯ ತಂಡಗಳೇ, ಮಣ್ಣು ಮುಕ್ಕಿದ ಉದಾಹರಣೆಗಳಿವೆ. ಜಯಸೂರ್ಯ, ಜಯವರ್ಧನೆ, ಸಂಗಾಕ್ಕಾರ, ಮುರಳೀಧರನ್​ರಂಥ ಶ್ರೇಷ್ಠ ಆಟಗಾರರನ್ನ ನೀಡಿದಂಥ ಶ್ರೀಲಂಕಾ ತಂಡ, ಇಂದು ಕ್ರಿಕೆಟ್ ಶಿಶು ತಂಡಗಳಿಂತ, ಕಡೆಯಾಗಿದೆ. ಹೀಗಾಗಿ ಅಧೋಗತಿಗೆ ತಲುಪಿರುವ ಶ್ರೀಲಂಕಾ ತಂಡಕ್ಕೆ, ಮರುಜೀವ ನೀಡಲು ಲಂಕಾ ಕ್ರಿಕೆಟ್ ಬೋರ್ಡ್ ಬಿಸಿಸಿಐ ನಡೆ ಅನುಸರಿಸ್ತಿದೆ.

blank

ಬಿಸಿಸಿಐ ಮಾದರಿ
ಬಿಸಿಸಿಐ ನಡೆ ಅನುಸರಿಸುತ್ತಿರೋ ಲಂಕಾ ಬೋರ್ಡ್​, ಮಹತ್ವದ ಬದಲವಣೆ ಮಾಡುತ್ತಿದೆ. ಮುಖ್ಯವಾಗಿ ಲಂಕಾ ಅಂಡರ್-19, ಎ ತಂಡದ ಸಲಹೆಗಾರರಾಗಿ ಮಹೇಲಾ ಜಯವರ್ಧನೆ, ಕೋಚ್ ಆಗಿ ಅವಿಷ್ಕಾ ಗುನವರ್ಧನೆರನ್ನ ನೇಮಿಸುತ್ತದೆ. ಶ್ರೀಲಂಕಾ ಹಿರಿಯ ತಂಡದ ಮುಖ್ಯ ಕೋಚ್​ ಮಿಕ್ಕಿ ಅರ್ಥರ್​ಗೆ ಗೇಟ್​ ಪಾಸ್ ನೀಡಿ, ರೋಶನ್ ಮಹಾನಾಮ ನೇಮಿಸಲು ಲಂಕಾ ಬೋರ್ಡ್​, ಮುಂದಾಗಿದೆ. ಹಾಗೇ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಸ್ಥಾನಕ್ಕೆ, ಲೋಕಲ್ ಕೋಚ್ ನೇಮಿಸಲು ಚಿಂತಿಸುತ್ತಿದೆ.

ದ್ರಾವಿಡ್​ರಂತೆ ಮಹೇಲಾ ಜಯವರ್ಧನೆಗೆ ಹೆಚ್ಚಿನ ಜವಾಬ್ದಾರಿ
ರಾಹುಲ್ ದ್ರಾವಿಡ್ ಮತ್ತು ಮಹೇಲಾ ಜಯವರ್ಧನೆ, ಜಂಟಲ್​ಮೆನ್ ಪ್ಲೇಯರ್ಸ್. ಪ್ರತಿಭಾನ್ವೇಷಣೆಯಲ್ಲಿ ಇವರಿಬ್ಬರು ದ್ರೋಣಾಚಾರ್ಯರೇ. ಅಂಡರ್-19, ಭಾರತ-ಎ ತಂಡದ ಕೋಚ್, ಎನ್​ಸಿಎ ನಿರ್ದೇಶಕರಾಗಿ ಟೀಮ್ ಇಂಡಿಯಾ ಬೆಂಚ್​ ಸ್ಟ್ರೆಂಥ್ ಹೆಚ್ಚಿಸಿರುವ ಘನತೆ, ದ್ರಾವಿಡ್​ಗೆ ಸೇರುತ್ತೆ. ಈಗ ದ್ರಾವಿಡ್​ರಂತೆ ಲಂಕಾ ಕ್ರಿಕೆಟ್​ ಅಭಿವೃದ್ದಿಗಾಗಿ, ಮಹೇಲಾ ಜಯವರ್ಧನೆಗೆ ಅಂಡರ್​​-19, ಲಂಕಾ ‘ಎ’ ತಂಡದ ಸಲಹೆಗಾರರಾಗಿ ನೇಮಿಸಲು ಮುಂದಾಗಿದೆ.

blank

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಯಶಸ್ಸು ಸಾಧಿಸಿರುವ ಜಯವರ್ಧನೆ, ಟೀಮ್ ಇಂಡಿಯಾಕ್ಕೆ ಹೊಸ ಪ್ರತಿಭೆಗಳನ್ನ ಪರಿಚಯಿಸಿದ್ದಾರೆ. ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ರಾಹುಲ್ ಚಹರ್ ಟೀಮ್ ಇಂಡಿಯಾ ಆಯ್ಕೆಯ ಹಿಂದೆ, ಮಹೇಲಾ ಪ್ರಮುಖಪಾತ್ರ ಇದೆ. ಹೀಗಾಗಿ ಲಂಕಾ ಕ್ರಿಕೆಟ್​ ತಂಡವನ್ನ ಕೆಳಮಟ್ಟದಿಂದ ಬೆಳಸಲು ಜಯವರ್ಧನೆ, ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

The post ಮತ್ತೆ ಪುಟಿದೇಳಲು BCCI ಮಾದರಿ: ದ್ರಾವಿಡ್​ರಂತೆ ಯಶಸ್ಸು ಸಾಧಿಸ್ತಾರಾ ಲಂಕಾದ ಈ ಜಂಟಲ್​​​ಮನ್? appeared first on News First Kannada.

Source: newsfirstlive.com

Source link