ಹರ್ಷ ಮೆಲಂಟಾ ಅವರೇ ಇದನ್ನೆಲ್ಲಾ ಯಾಕೆ ಮಾಡಿರಬಾರದು -ಉಮಾಪತಿ ಪ್ರಶ್ನೆ

ಹರ್ಷ ಮೆಲಂಟಾ ಅವರೇ ಇದನ್ನೆಲ್ಲಾ ಯಾಕೆ ಮಾಡಿರಬಾರದು -ಉಮಾಪತಿ ಪ್ರಶ್ನೆ

ಬೆಂಗಳೂರು: ಹರ್ಷ ಮೆಲಂಟಾ ಅವರೇ ಯಾಕೆ ಇದನ್ನೆಲ್ಲಾ ಮಾಡಿರಬಾರದು ಅಂತಾ ನಿರ್ಮಾಪಕ ಉಮಾಪತಿ ಅವರು ಪ್ರಶ್ನೆ ಮಾಡಿದ್ದಾರೆ.

ನಟ ದರ್ಶನ್ ಹೆಸರಲ್ಲಿ ಶ್ಯೂರಿಟಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು.. ಅರುಣಾ ಕುಮಾರಿ ನನಗೆ ಏಪ್ರಿಲ್​ನಿಂದ ಪರಿಚಯ. ಸೀಜ್ ಆಗಿರೋ ಲೋನ್ ವಿಚಾರವಾಗಿ ಮಾತಾಡ್ತಿರ್ತಾರೆ. ಮೇ 3ನೇ ವಾರದಲ್ಲಿ ದರ್ಶನ್ ಸರ್ ವಿಚಾರವಾಗಿ ಕೇಳ್ತಾರೆ. ಅವರು ಶ್ಯೂರಿಟಿ ಹಾಕಿದ್ದಾರಾ ಎಂದು ಕೇಳ್ತಾರೆ.

ಆಗ ನಾನು ದರ್ಶನ್ ಸರ್​ಗೆ ಕಾಲ್ ಮಾಡಿ ಕೇಳಿದೆ. ದರ್ಶನ್ ಸರ್​ನ ಪದೇ ಪದೇ ರಿಕ್ವೆಸ್ಟ್ ಮಾಡಿದ್ದೀನಿ. ನನ್ನ ಜೊತೆ ಫಾಲೋವಪ್​​ನಲ್ಲೇ ಇದ್ದರು. ಆಡಿಯೋ ಚಾಟ್​ನಲ್ಲಿ ಅಶ್ಲೀಲವಾಗಿ ಮಾತನಾಡಿಲ್ಲ. ನಾನ್ ಫೇಸ್ ಮಾಡಲು ರೆಡಿ ಇದ್ದೀನಿ. ಅಷ್ಟೂ ಚಾಟ್​​ನಲ್ಲಿ ಅಶ್ಲೀಲ ಪದ ಉಪಯೋಗಿಸಿಲ್ಲ. ಇದನ್ನ ಘಂಟಾಘೋಷವಾಗಿ ಹೇಳ್ತೀನಿ.

ದರ್ಶನ್ ಸರ್ ನನ್ನ ಬಗ್ಗೆ ಏನೂ ಹೇಳಿಲ್ಲ. ಆದರೆ ಅವರ ಸ್ನೇಹಿತರು ಆರೋಪ ಮಾಡಿದ್ದಾರೆ. ಅವರಿಗೆಲ್ಲಾ ನಾನು ಉತ್ತರ ನೀಡಬೇಕಿದೆ. ಹರ್ಷ ಅವರೇ ಇದನ್ನ ಮಾಡಿರಬಹುದಲ್ವಾ? ಆದರೆ ದರ್ಶನ್ ಅವ್ರು ನನ್ನ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ನಂಗೂ ಅವ್ರನ್ನ ಕಳೆದ್ಕೊಳ್ಳೋಕೆ ಇಷ್ಟ ಇಲ್ಲ ಎಂದರು.

The post ಹರ್ಷ ಮೆಲಂಟಾ ಅವರೇ ಇದನ್ನೆಲ್ಲಾ ಯಾಕೆ ಮಾಡಿರಬಾರದು -ಉಮಾಪತಿ ಪ್ರಶ್ನೆ appeared first on News First Kannada.

Source: newsfirstlive.com

Source link