‘ದರ್ಶನ್ ಸರ್ ಸುತ್ತ ಇರೋರೆಲ್ಲಾ ಬುದ್ಧಿವಂತರೇ, ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ’

‘ದರ್ಶನ್ ಸರ್ ಸುತ್ತ ಇರೋರೆಲ್ಲಾ ಬುದ್ಧಿವಂತರೇ, ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ’

ಬೆಂಗಳೂರು: ದರ್ಶನ್ ಸರ್ ಸುತ್ತ ಇರುವವರೆಲ್ಲಾ ಬುದ್ಧಿವಂತರೇ ಇದ್ದಾರೆ, ಮೈಸೂರು ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ ಅಂತಾ ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

ನಾನು ಯಾರನ್ನೂ ಕಳೆದುಕೊಳ್ಳಲು ಇಷ್ಟಪಡಲ್ಲ
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ನನ್ನ ನಡೆ ನುಡಿ ಲೈಫ್ ಸ್ಟೈಲ್​ ಕೆಲವರಿಗೆ ಸಹಿಸಲು ಆಗ್ತಿಲ್ಲ. ಆದರೆ ನಾನು ಇದಕ್ಕೆ ಕೇರ್ ಮಾಡಲ್ಲ. ನಾನು ಈ ವಿಚಾರದಿಂದ ದರ್ಶನ್ ಸರ್ ರಾಕೇಶ್, ಹರ್ಷ ಯಾರನ್ನು ಕಳೆದು ಕೊಳ್ಳಲು‌ ಇಷ್ಟಪಡಲ್ಲ. ಈ ಪ್ರಕರಣ ಮೈಸೂರಲ್ಲಿ ತನಿಖೆ ಅಗಲಿ ಎಂದು ರಾಕೇಶ್ ಪಾಪಣ್ಣ ದರ್ಶನ್ ಅವರ ಮೇಲೆ ಒತ್ತಡ ಹಾಕಿದ್ದಾರೆ. ದರ್ಶನ್ ಸರ್ ಸುತ್ತ ಇರುವವರೆಲ್ಲ ಬುದ್ಧಿವಂತರು. ಮೈಸೂರು ಪೊಲೀಸರನ್ನು ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ ಎಂದರು.

ನನ್ನ ಟಾರ್ಗೆಟ್​ ಮಾಡ್ತಿದ್ದಾರೆ
ನೀವು ಮಲ್ಲೇಶ್ ಯಾರು ಅನ್ನೋದನ್ನ ಪತ್ತೆ ಹಚ್ಚಿ. ಅರುಣಾಕುಮಾರಿ ಎಲ್ಲಾ ವಿಚಾರವನ್ನೂ ಹರ್ಷ ಮೆಲಂಟಾ ಹತ್ತಿರ ಯಾಕೆ ಹೇಳ್ತಾಳೆ. ದರ್ಶನ್ ಸರ್ ಹತ್ತಿರ ಯಾಕೆ ಹೇಳಲ್ಲ? ಅಲ್ಲದೇ ಹರ್ಷ ಅವರೇ ದೂರು ನೀಡುವಾಗ ಯಾಕೆ ಬೇರೆ ನಂಬರ್ ಕೊಟ್ಟರು. 25 ಕೋಟಿ ರೂಪಾಯಿ ವಂಚನೆ ಮಾಡಿದ ಲೇಡಿಯನ್ನು ಯಾಕೆ ಹೊರಗೆ ಬಿಟ್ರಿ? ಸಾಕ್ಷ್ಯ ನಾಶ ಆಗಲ್ವ. ಇದೆಲ್ಲ ಗಮನಿಸಿದ್ರೆ ಇಲ್ಲಿ ಬೇರೆ ಏನೋ ನಡೆಯುತ್ತಿದೆ ಅನ್ನೋದು ತಿಳಿಯುತ್ತೆ.

ಅರುಣಾಕುಮಾರಿ ಜಯನಗರ ಸ್ಟೇಷನ್​ನಲ್ಲಿ ದರ್ಶನ್ ಸರ್​ಗೆ ಎಲ್ಲ ಹೇಳಿದ್ದೀನಿ ಅಂತ ಹೇಳಿದ್ರು. ಆದರೆ ಮೈಸೂರಿಗೆ ಹೋಗಿ ಎಲ್ಲವನ್ನೂ ಟ್ವಿಸ್ಟ್ ಮಾಡಿದ್ದಾಳೆ. ಒಂದು ಹೆಣ್ಣಿನ ಮೊಬೈಲ್ ಕಿತ್ತುಕೊಂಡಿದ್ದಾರೆ ಅಂದರೆ ಅರ್ಥ ಮಾಡಿಕೊಳ್ಳಿ. ಈ ಎಲ್ಲಾ ವಿಷಯ ಗಮನಿಸಿದ್ರೆ ಹರ್ಷ ನೇರವಾಗಿ ನನ್ನ ಟಾರ್ಗೆಟ್​ ಮಾಡ್ತಿದ್ದಾರೆ ಅನ್ನಿಸ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹರ್ಷ ಮೆಲಂಟಾ ಅವರೇ ಇದನ್ನೆಲ್ಲಾ ಯಾಕೆ ಮಾಡಿರಬಾರದು -ಉಮಾಪತಿ ಪ್ರಶ್ನೆ

The post ‘ದರ್ಶನ್ ಸರ್ ಸುತ್ತ ಇರೋರೆಲ್ಲಾ ಬುದ್ಧಿವಂತರೇ, ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ’ appeared first on News First Kannada.

Source: newsfirstlive.com

Source link