ವೀಕೆಂಡ್​​ನಲ್ಲಿ ಮತ್ತೆ ನಂದಿ ಬೆಟ್ಟಕ್ಕೆ ‘ನೋ ಎಂಟ್ರಿ’ ಎಂದ ಜಿಲ್ಲಾಡಳಿತ

ವೀಕೆಂಡ್​​ನಲ್ಲಿ ಮತ್ತೆ ನಂದಿ ಬೆಟ್ಟಕ್ಕೆ ‘ನೋ ಎಂಟ್ರಿ’ ಎಂದ ಜಿಲ್ಲಾಡಳಿತ

ಚಿಕ್ಕಬಳ್ಳಾಪುರ: ಲಾಕ್​ಡೌನ್​ ಸಡಿಲಿಕೆಯಾಗಿದ್ದೆ ತಡ ನಾ ಮುಂದು ತಾ ಮುಂದು ಎಂದು ನಂದಿಬೆಟ್ಟಕ್ಕೆ ಪ್ರವಾಸಿಗರು ದೌಡಾಯಿಸಿದ್ದರು.

ಇದೀಗ ಕೊರೊನಾ ಆತಂಕ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪ್ರವಾಸಿಗರಿಗೆ ಶಾಕ್ ನೀಡಿದೆ. ಮತ್ತೆ ನಂದಿ ಬೆಟ್ಟಕ್ಕೆ ವೀಕೆಂಡ್​ನಲ್ಲಿ ಪ್ರವೇಶ ಇಲ್ಲ ಅಂತಾ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ-ಅನ್​ಲಾಕ್​ ಆಗಿದ್ದೇ ತಡ ಮನೆಯಲ್ಲಿದ್ದು ಬೇಜಾರಲ್ಲಿದ್ದ ಜನರು ನಸುಕಿನಿಂದಲೇ ನಂದಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರು.

ವೀಕೆಂಡ್​ನಲ್ಲಿ ನಂದಿ ಬೆಟ್ಟಕ್ಕೆ ಬರುವವರ ಸಂಖ್ಯೆ ಏಣಿಕೆಗೂ ಸಿಗುತ್ತಿಲ್ಲವಾಗಿದ್ದರಿಂದ ಕೊರೊನಾ ಹೆಚ್ಚಾಗುವ ಭೀತಿ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ನಿರ್ದೇಶನದಂತೆ ಅಪರ ಜಿಲ್ಲಾಧಿಕಾರಿ ಹೆಚ್ ಅಮರೇಶ್ ವಿಕೇಂಡ್​ ಲಾಕ್​ಡೌನ್​ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್

The post ವೀಕೆಂಡ್​​ನಲ್ಲಿ ಮತ್ತೆ ನಂದಿ ಬೆಟ್ಟಕ್ಕೆ ‘ನೋ ಎಂಟ್ರಿ’ ಎಂದ ಜಿಲ್ಲಾಡಳಿತ appeared first on News First Kannada.

Source: newsfirstlive.com

Source link