ಆಧಾರ್​ ಕಾರ್ಡ್​ ಕೊಟ್ಟಿದ್ದು ನಾನೇ, ನಾನಿದನ್ನ ಇಲ್ಲಿಗೆ ಬಿಡಲ್ಲ -ಉಮಾಪತಿ

ಆಧಾರ್​ ಕಾರ್ಡ್​ ಕೊಟ್ಟಿದ್ದು ನಾನೇ, ನಾನಿದನ್ನ ಇಲ್ಲಿಗೆ ಬಿಡಲ್ಲ -ಉಮಾಪತಿ

ಬೆಂಗಳೂರು: ನಟ ದರ್ಶನ್​ ಹೆಸರಲ್ಲಿ ವಂಚನೆಗೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ.. ದರ್ಶನ್​ ಅವರಿಗೆ ಕೇಳಿಯೇ ನಾನು ಆಧಾರ್​ ಕಾರ್ಡ್​ ನೀಡಿದ್ದೇನೆ ಎಂದಿದ್ದಾರೆ.

ಅಲ್ಲದೇ ನಾನು ಆರೋಪಿ ಅರುಣಾಕುಮಾರಿ ಜೊತೆ ಯಾವುದೇ ಅಶ್ಲೀಲ ಸಂಭಾಷಣೆ ನಡೆಸಿಲ್ಲ, ಈವರೆಗೂ ನನ್ನ ಮೇಲೆ ನಟ ದರ್ಶನ್​ ಆರೋಪ ಮಾಡಿಲ್ಲ. ಅವರ ಸ್ನೇಹಿತರು ನನ್ನ ಮೇಲೆ ಆರೋಪ ಮಾಡಿದ್ದು ಅವರಿಗೆ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ‘ದರ್ಶನ್ ಸರ್ ಸುತ್ತ ಇರೋರೆಲ್ಲಾ ಬುದ್ಧಿವಂತರೇ, ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ’

ಹರ್ಷಾ ಮೆಲಿಂಟಾ ಪೊಲೀಸ್​ ಠಾಣೆಯಲ್ಲಿ ರಾಂಗ್​ ನಂಬರ್​ ಕೊಟ್ಟಿದ್ದು ಯಾಕೆ? ಅವರನ್ನು ಠಾಣೆಗೆ ಕರೆದು ಈ ಕುರಿತು ವಿಚಾರ ಮಾಡಲು ಆಗಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಕುಟುಂದವರು ನನ್ನ ಜೊತೆ ಇದ್ದು ನಾ ಏನು ಸಿನಿಮಾ ಮಾಡಿ ಜೀವನ ನಡೆಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಮೈಸೂರು ಪೊಲೀಸರ ಮೇಲೆ ನಂಬಿಕೆಯಿದ್ದು ನಾನು ಇದನ್ನ ಇಲ್ಲಿಗೆ ಬಿಡಲ್ಲ ಎಂದಿದ್ದಾರೆ.

 

The post ಆಧಾರ್​ ಕಾರ್ಡ್​ ಕೊಟ್ಟಿದ್ದು ನಾನೇ, ನಾನಿದನ್ನ ಇಲ್ಲಿಗೆ ಬಿಡಲ್ಲ -ಉಮಾಪತಿ appeared first on News First Kannada.

Source: newsfirstlive.com

Source link