ಒಬ್ಬ ಹೆಣ್ಣಾದ ನನ್ನನ್ನು ಈ ಪ್ರಕರಣಕ್ಕೆ ಬಳಸಿಕೊಂಡರು -ಉಮಾಪತಿ ವಿರುದ್ಧ ಅರುಣಾಕುಮಾರಿ ಕಿಡಿ

ಒಬ್ಬ ಹೆಣ್ಣಾದ ನನ್ನನ್ನು ಈ ಪ್ರಕರಣಕ್ಕೆ ಬಳಸಿಕೊಂಡರು -ಉಮಾಪತಿ ವಿರುದ್ಧ ಅರುಣಾಕುಮಾರಿ ಕಿಡಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ₹ 25 ಕೋಟಿ ವಂಚನೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣಾಕುಮಾರಿ ಮಾಧ್ಯಮಗಳಿಗೆ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.

ನನ್ನ ಪಾಡಿಗೆ ನನಗೆ ಬದುಕಲು ಬಿಡಿ
ಈ ಪ್ರಕರಣದಿಂದ ನನಗೆ, ಕುಟುಂಬಕ್ಕೆ ನೋವಾಗಿದೆ. ದಯವಿಟ್ಟು ನನ್ನ ಪಾಡಿಗೆ ನಾನು ಬದುಕಲು ಬಿಡಿ. ಇವೆಲ್ಲಾ ಬೆಳವಣಿಗೆಯಿಂದ ಸಾಯಬೇಕು ಎನಿಸುತ್ತಿದೆ. ನಾನು ಬಹಳ ನೋವಿನಿಂದ ಮಾತನಾಡುತ್ತಿದ್ದೇನೆ. ಮಾರ್ಚ್​ 30ರಿಂದ ನನಗೂ ಅವರಿಗೂ ಸಂಪರ್ಕವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಸತ್ಯ ಹೊರಬರಲಿದೆ.

ಇದನ್ನೂ ಓದಿ: ಹರ್ಷ ಮೆಲಂಟಾ ಅವರೇ ಇದನ್ನೆಲ್ಲಾ ಯಾಕೆ ಮಾಡಿರಬಾರದು -ಉಮಾಪತಿ ಪ್ರಶ್ನೆ

ಪ್ರಕರಣದಲ್ಲಿ ಉಮಾಪತಿಗೆ ಯಾವ್ದೇ ಲಾಭ ಇಲ್ಲ. ಒಬ್ಬ ಹೆಣ್ಣಾದ ನನ್ನನ್ನು ಪ್ರಕರಣಕ್ಕೆ ಬಳಸಿಕೊಂಡರು. ಉಮಾಪತಿ ನೇರವಾಗಿ ಹರ್ಷ ಬಳಿ ಮಾತನಾಡಬೇಕಿತ್ತು. ಹರ್ಷನ ಬಳಿ ಮಾತನಾಡಲು ನನ್ನ ಏಕೆ ಬಳಸಿದ್ರು? ಇದರಲ್ಲಿ ನನ್ನನ್ನು ಮಧ್ಯೆ ಎಳೆತಂದಿದ್ದು ಏಕೆ ಹೇಳಿ? ಈ ವಿಚಾರದಲ್ಲಿ ನಾನು ಯಾರ ಬಳಿ ಹಣ ಪಡೆದಿಲ್ಲ.

ಲೋನ್​​ಗೆ ಅಪ್ಲೈ ಮಾಡಿಲ್ಲ, ಅಪ್ರೋಚ್ ಮಾಡಿರುವುದು. ಲೋನ್​ಗೆ ಅಪ್ರೋಚ್ ಮಾಡಿದ್ದಾಗಿ ನಾನು ಹೇಳಿದೆ. ಈ ಪ್ರಕರಣದಿಂದ ನಾನು ಡಿಪ್ರೆಷನ್​ಗೆ ಹೋಗಿದ್ದೇನೆ. ನನ್ನಂತಹ ಅಮಾಯಕೆಯನ್ನು ಬಳಸಿಕೊಂಡರು. ನನ್ನ ಜೀವನದ ಕಥೆ ಏನು ಎಂದು ಭಯವಾಗಿದೆ. ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ನನ್ನ ಪಾಡಿಗೆ ನಾನು ಬದುಕಲು ಬಿಟ್ಟುಬಿಡಿ ಎಂದು ವಿಡಿಯೋವನ್ನ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ:  ‘ದರ್ಶನ್ ಸರ್ ಸುತ್ತ ಇರೋರೆಲ್ಲಾ ಬುದ್ಧಿವಂತರೇ, ಪೊಲೀಸರನ್ನ ಕಂಟ್ರೋಲ್ ಮಾಡುವ ಕೆಪಾಸಿಟಿ ಇದೆ’

 

The post ಒಬ್ಬ ಹೆಣ್ಣಾದ ನನ್ನನ್ನು ಈ ಪ್ರಕರಣಕ್ಕೆ ಬಳಸಿಕೊಂಡರು -ಉಮಾಪತಿ ವಿರುದ್ಧ ಅರುಣಾಕುಮಾರಿ ಕಿಡಿ appeared first on News First Kannada.

Source: newsfirstlive.com

Source link