ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ

ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆಗೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಪ್ರಮುಖ ಆರೋಪಿ ಅರುಣಾಕುಮಾರಿ ಉಮಾಪತಿ ವಿರುದ್ಧ ಕಿಡಿಕಾರಿದ್ದಾರೆ.

ವಿಡಿಯೋ ಒಂದನ್ನ ಬಿಡುಗಡೆ ಮಾಡಿ ಕಿಡಿಕಾರಿರುವ ಅರುಣಾಕುಮಾರಿ.. ಈ ಪ್ರಕರಣದಲ್ಲಿ ನನ್ನನ್ನ ಉಮಾಪತಿ ಯಾಕೆ ಎಳೆದುಕೊಂಡು ಬಂದರೋ ಅಂತಾ ನಂಗೆ ಗೊತ್ತಾಗ್ತಿಲ್ಲ. ಇದರಲ್ಲಿ ಉಮಾಪತಿ ಅವರದ್ದು ತಪ್ಪು ಎಂದು ನಾನು ಹೇಳಲ್ಲ. ಆದರೆ ನನ್ನನ್ನ ಉಪಯೋಗಿಸಿಕೊಂಡಿದ್ದು ತಪ್ಪೇ ಎಂದು ಕಿಡಿಕಾರಿದ್ದಾರೆ.

ನಾನು ಫಾರ್ಮ್​ ಹೌಸ್​ಗೆ ಹೋಗಿದ್ದು ನಿಜ. ನಾನು ಅಲ್ಲಿಂದ ಏನಾದ್ರು ಕಿತ್ತುಕೊಂಡು ಬಂದಿದ್ದೀನಾ? ನಾನು ಲೋನ್ ಅಪ್ರೋಚ್ ಮಾಡಿರೋದು, ಲೋನ್​ಗೆ ಅಪ್ಲೈ ಮಾಡಿದ್ದು. ಇದರಿಂದ ನಾನು ತುಂಬಾ ಕುಗ್ಗಿಹೋಗಿದ್ದೇನೆ. ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಒಟ್ಟಾರೆ ಅವರು ಮಾಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ

The post ಉಮಾಪತಿ ಮಾಡಿದ್ದು ತಪ್ಪೇ, ನಾನು ತುಂಬಾ ಡಿಪ್ರೆಶನ್​ಗೆ ಹೋಗಿದ್ದೇನೆ -ಅರುಣಾಕುಮಾರಿ appeared first on News First Kannada.

Source: newsfirstlive.com

Source link