1983ರ ವಿಶ್ವಕಪ್ ಗೆಲುವಿನ​ ಹೀರೋ ​ಯಶ್​​ಪಾಲ್ ಶರ್ಮಾ ನಿಧನ; ಕಂಬನಿ ಮಿಡಿದ ಗಣ್ಯರು

1983ರ ವಿಶ್ವಕಪ್ ಗೆಲುವಿನ​ ಹೀರೋ ​ಯಶ್​​ಪಾಲ್ ಶರ್ಮಾ ನಿಧನ; ಕಂಬನಿ ಮಿಡಿದ ಗಣ್ಯರು

ನವದೆಹಲಿ: ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್​​ ವಿಜೇತ ತಂಡದ ಸದಸ್ಯ ಯಶ್​​ಪಾಲ್ ಶರ್ಮಾ (66) ಅವರು ವಿಧಿವಶರಾಗಿದ್ದಾರೆ. ಪಂಜಾಬ್‌ನ ಲುಧಿಯಾನ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಯಶ್​ಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಅಂತಾ ವರದಿಯಾಗಿದೆ.

ಇಂದು ಬೆಳಗ್ಗೆ 7:40ರ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 19ರ ದಶಕದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್​ಮನ್ ಆಗಿದ್ದ ಯಶ್​ಪಾಲ್ ಅವರು ಪತ್ನಿ ರೇಣುಶರ್ಮಾ, ಪುತ್ರಿಯರಾದ ಪೂಜಾ, ಪ್ರೀತಿ ಹಾಗೂ ಓರ್ವ ಪುತ್ರ ಚಿರಾಗ್ ಶರ್ಮಾರನ್ನ ಅಗಲಿದ್ದಾರೆ.

ಇನ್ನು.. 1983 ವಿಶ್ವಕಪ್ ಹಿರೋ ಯಶ್​ಪಾಲ್​ ನಿಧನಕ್ಕೆ ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಭಾರತ ಪರ 37 ಟೆಸ್ಟ್ ಪಂದ್ಯಗಳನ್ನಾಡಿರುವ ಶರ್ಮಾ 33.45ರ ಸರಾಸರಿಯಲ್ಲಿ 1606 ರನ್ ಗಳಿಸಿದ್ದಾರೆ. 140 ಬೆಸ್ಟ್ ಸ್ಕೋರ್ ಆಗಿದೆ. ಏಕದಿನ ಕ್ರಿಕೆಟ್‌ನಲ್ಲಿ 42 ಪಂದ್ಯಗಳಿಂದ 28.48 ಸರಾಸರಿಯಲ್ಲಿ 883 ರನ್ ಗಳಿಸಿದ್ದಾರೆ.

blank

1983ರ ವಿಶ್ವಕಪ್‌ನಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಯಶ್​ಪಾಲ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​​ ಗೆಲುವಿಗೆ ಕಾರಣರಾಗಿದ್ದರು. ತಂಡ ಆರಂಭಿಕ ಅಘಾತ ಅನುಭವಿಸಿದ್ದಾಗ ಮಹಿಂದರ್​ ಅಮರ್​ನಾಥ್​ ಜೊತೆ 92 ರನ್​ಗಳ ಜೊತೆಯಾಟ ಆಡಿದ್ದ ಯಶ್​​ಪಾಲ್ ಶರ್ಮಾ, 61 ರನ್​ ಸಿಡಿಸಿ ಸೈಮಿಫೈನಲ್​​ ಗೆಲುವಿಗೆ ಕಾರಣರಾಗಿದ್ದರು.

ಈ ಇನ್ನಿಂಗ್ಸ್​ ಇಂದಿಗೂ ಅಭಿಮಾನಿಗಳಲ್ಲಿ ಅಚ್ಚಳಿಯದೇ ಉಳಿದಿದೆ. ಇನ್ನು ಕ್ರಿಕೆಟ್​ಗೆ ನಿವೃತ್ತಿ ಬಳಿಕ ಪಂಜಾಬ್, ಹರಿಯಾಣ ಪರ ಸೇವೆ ಸಲ್ಲಿಸಿದ್ದ ಯಶ್​ಪಾಲ್ ಶರ್ಮಾ, ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ್ದರು.

The post 1983ರ ವಿಶ್ವಕಪ್ ಗೆಲುವಿನ​ ಹೀರೋ ​ಯಶ್​​ಪಾಲ್ ಶರ್ಮಾ ನಿಧನ; ಕಂಬನಿ ಮಿಡಿದ ಗಣ್ಯರು appeared first on News First Kannada.

Source: newsfirstlive.com

Source link