ಬಿಗ್​​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆದ್ದಿದ್ಯಾರು? ಬಿದ್ದಿದ್ಯಾರು? -ಇಂಟರೆಸ್ಟಿಂಗ್ ಕಹಾನಿ

ಬಿಗ್​​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆದ್ದಿದ್ಯಾರು? ಬಿದ್ದಿದ್ಯಾರು? -ಇಂಟರೆಸ್ಟಿಂಗ್ ಕಹಾನಿ

ಮನೆಯ ಒಬ್ಬ ಸದಸ್ಯನನ್ನು ಈ ವಾರದ ನಾಮಿನೇಷನ್​ ಪ್ರಕ್ರಿಯೆಯಿಂದ ಉಳಿಸಲು ಮನೆಯಿಂದ ಹೊರ ನಡೆದಿದ್ದ ರಘು ಅವರಿಗೆ ಬಿಗ್​ ಬಾಸ್​ ಪವರ್​ ನೀಡಿದ್ದರು. ರಘು ಅವರು ಶಮಂತ್​ ಅವರನ್ನು ಸೇವ್​ ಮಾಡಿದ್ದರು. ಹಾಗಾಗಿ ಈ ವಾರ ಕ್ಯಾಪ್ಟನ್​ ಅರವಿಂದ್​ ಮತ್ತು ಶಮಂತ್​ ಅವರನ್ನು ಹೊರತುಪಡೆಸಿ ಬಿಗ್​ ಮನೆಯ ಸದಸ್ಯರೆಲ್ಲರೂ ಎಲಿಮಿನೇಷನ್​ಗೆ ನೇರವಾಗಿ ನಾಮಿನೇಟ್​ ಆಗಿದ್ದು, ನಾಮಿನೇಟ್​ನಿಂದ ಇಮ್ಯೂನಿಟಿ ಪಡೆಯಲು ಬಿಗ್​​ಬಾಸ್​ ಬಾಸ್ ದಂಡಯಾತ್ರೆ​ ಎಂಬ ಟಾಸ್ಕ್​ ನೀಡಿದ್ದರು.

 

ಬಿಗ್​ ಬಾಸ್​ ಎರಡು ತಂಡಗಳ ರಚನೆಮಾಡಿದ್ರು, ಒಂದು ಅರವಿಂದ್​ ಕೆಪಿ ನೇತೃತ್ವದ ‘ವಿಜಯ ಯಾತ್ರೆ’ ತಂಡ ಇನ್ನೊಂದು ಮಂಜು ಪಾವಗಡ ನೇತೃತ್ವದ ‘ನಿಂಗ್​ ಐತೆ ಇರು’ ತಂಡ​. ಅರವಿಂದ್​ ಅವರ ತಂಡದಲ್ಲಿ ಪ್ರಿಯಾಂಕಾ ತಿಮ್ಮೇಶ್​, ಪ್ರಾಶಾಂತ್​, ಶುಭಾ ಪೂಂಜಾ, ವೈಷ್ಣವಿ ಹಾಗೂ ಮಂಜು ಅವರ​ ತಂಡದಲ್ಲಿ ಚಕ್ರವರ್ತಿ ಚಂದ್ರಚೂಡ್​, ಶಮಂತ್​, ದಿವ್ಯಾ ಸುರೇಶ್​, ದಿವ್ಯಾ ಉರುಡುಗ ಇದ್ದರು.

ಗೆಲುವಿನ ದಂಡ ಪಡೆಯಲು ಮೊದಲು ನಡೆದಿದ್ದು ಭುಜಬಲದ ಟಾಸ್ಕ್​. ಇದರಲ್ಲಿ ಎರಡು ತಂಡ ಟಫ್​ ಫೈಟ್​ ನೀಡಿದ್ದವು. ಆದರೆ ಕೊನೆಯಲ್ಲಿ ವಿಜಯಯಾತ್ರೆ ತಂಡ ಗೆಲವು ಪಡೆದು ಒಂದು ಅಂಕ ಗಳಿಸಿತು.

blank

ನಂತರ ನಡೆದ ಹೀಗೂ ಉಂಟೆ ಟಾಸ್ಕ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಕ್ಕಿದ್ದು, ಸಾಕಷ್ಟು ಪೆಟ್ಟು ತಿಂದ್ರು. ಟಾಸ್ಕ್​ ಪ್ರಕಾರ ಜಾಕೆಟ್​ ಧರಿಸಿರುವ ತಂಡದ ಸದಸ್ಯನಿಗೆ ಎದುರಾಳಿ ತಂಡ ಸ್ಟಾರ್​ ಅಂಟಿಸಬೇಕು. ಈ ಕಾದಟದಲ್ಲಿ ಮಂಜು ಅವರ ತಂಡದಲ್ಲಿದ್ದ ದಿವ್ಯಾ ಉರುಡುಗ ಎದುರಾಳಿ ತಂಡದಿಂದ ತಪ್ಪಿಸಿಕೊಳ್ಳಲು ಹೋಗಿ ಗ್ಲಾಸ್​ ವಾಲ್​ಗೆ ಡಿಕ್ಕಿ ಹೊಡೆಯುತ್ತಾರೆ. ಇದ್ರಿಂದ ಅವರ ಹೊಟ್ಟೆ ಹಾಗೂ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ರಕ್ತ ಸ್ರಾವವಾಗುತ್ತಿರುವ ದೃಶ್ಯಗಳು ಕಂಡು ಬಂದವು.

blank

 

ಮೊದಲ ಇನ್ನಿಂಗ್ಸ್​ನಲ್ಲಿ ದಿವ್ಯಾ ಉರುಡುಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಈಗ ಮತ್ತೆ ಅದೇ ರೀತಿಯ ಟಾಸ್ಕ್​ ಆಡುವಾಗ ಗಾಯಗೊಂಡಿದ್ದು ಕೆಲ ಕಾಲ ಬಿಗ್​ ಮನೆಯಲ್ಲಿ ಆತಂಕದ ವಾತಾವರಣ ಮೂಡಿತ್ತು. ಆದರೆ ಅವರು ಟ್ರೀಟ್​ಮೆಂಟ್ ತೆಗೆದುಕೊಂಡಿದ್ದು, ಮತ್ತೆ ಮನೆಗೆ ವಾಪಸ್​ ಆಗಿದ್ದಾರೆ.

ಸೋಶಿಯಲ್​ ಮಿಡಿಯಾಗಳಲ್ಲಿ ದಿವ್ಯಾ ಗೆಟ್​ವೆಲ್​ ಸೂನ್​ ಎಂದು ದಿವ್ಯಾ ಪರ ಫ್ಯಾನ್ಸ್​ ಪ್ರಾರ್ಥನೆ ಮಾಡ್ತೀದ್ದಾರೆ. ಒಟ್ಟಿನಲ್ಲಿ ನಿನ್ನೆ ನಡೆದ ಟಾಸ್ಕ್​ಗಳಲ್ಲಿ ಎರಡು ಟೀಮ್​ಗಳು ಸಮನಾಗಿ ಅಂಕ ಪಡೆದು ಟೈ ಸ್ಥಾನದಲ್ಲಿವೆ. ಆಟ ಅಂದ್ಮೇಲೆ ಎಳು ಬಿಳು ಸಹಜ.

The post ಬಿಗ್​​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆದ್ದಿದ್ಯಾರು? ಬಿದ್ದಿದ್ಯಾರು? -ಇಂಟರೆಸ್ಟಿಂಗ್ ಕಹಾನಿ appeared first on News First Kannada.

Source: newsfirstlive.com

Source link