T20 ಕಿಂಗ್​ ಕ್ರಿಸ್​ ಗೇಲ್​ಗೆ ಯಾರು ಇಲ್ಲ ಸಾಟಿ..!

T20 ಕಿಂಗ್​ ಕ್ರಿಸ್​ ಗೇಲ್​ಗೆ ಯಾರು ಇಲ್ಲ ಸಾಟಿ..!

ಕೆರಿಬಿಯನ್ ಕಿಂಗ್, ವಿಂಡೀಸ್ ಕ್ರಿಕೆಟ್​​ನ ದೈತ್ಯ ಸ್ಫೋಟಕ ಬ್ಯಾಟ್ಸ್​ಮನ್​​ ಕ್ರಿಸ್ ​ಗೇಲ್​ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ20​​ ಫಾರ್ಮೆಟ್​​ನಲ್ಲಿ ಯಾರೂ ಬರೆಯದ ಸಾಧನೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗೇಲ್, 14 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಕ್ರಿಸ್​ಗೇಲ್​, ಈ ಸಾಧನೆಯನ್ನ ಮಾಡಿದ್ರು. ಗೇಲ್ 22ರನ್​ ಗಳಿಸಿದ್ದಾಗ, ಈ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ಗೇಲ್, 4 ಬೌಂಡರಿ, 7 ಸಿಕ್ಸರ್​ಗಳ ನೆರವಿನಿಂದ 38 ಎಸೆತಗಳಲ್ಲಿ 67 ರನ್ ಕಲೆ ಹಾಕಿದ್ದಾರೆ.

ಕ್ರಿಸ್​ ಗೇಲ್​ 14,000 ರನ್​​ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡಿದ್ರೆ, ವಿಂಡೀಸ್​ನ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್​​​ಮನ್​ ಕಿರಾನ್​ ಪೊಲಾರ್ಡ್​​ 10,836 ರನ್​ ಕಲೆಹಾಕಿ, 2ನೇ ಸ್ಥಾನದಲ್ಲಿದ್ದಾರೆ. 10,741 ರನ್​​ ಗಳಿಸಿದ ಪಾಕಿಸ್ತಾನ ಶೋಯೆಬ್​​ ಮಲ್ಲಿಕ್​ಗೆ 3ನೇ ಸ್ಥಾನ, 10,017ರನ್​ ಕಲೆಹಾಕಿದ ಡೇವಿಡ್​ ವಾರ್ನರ್ 4ನೇ ಸ್ಥಾನ ಮತ್ತು ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್ ಕೊಹ್ಲಿ, 9,922ರನ್​ ಗಳಿಸಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

 

The post T20 ಕಿಂಗ್​ ಕ್ರಿಸ್​ ಗೇಲ್​ಗೆ ಯಾರು ಇಲ್ಲ ಸಾಟಿ..! appeared first on News First Kannada.

Source: newsfirstlive.com

Source link