ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

ಬೆಂಗಳೂರು: 25 ಕೋಟಿ ರಗಳೆ ಪ್ರಕರಣವನ್ನು ಮಾತನಾಡಿ ಕೊನೆಗೊಳಿಸಲು ದರ್ಶನ್ ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ನಾವು ಮಂಗಳ ಹಾಡಿದ್ದೇವೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಇದು ನಿಲ್ಲುವ ಕೇಸ್ ಅಲ್ಲ. ಯಾರನ್ನೂ ಅರೆಸ್ಟ್ ಮಾಡುವುದಿಲ್ಲ. ಇದು ಮುಗಿದ ಕೇಸ್ ಆಗಿದ್ದು, ನಾನು ನಿರ್ಮಾಪಕರನ್ನು ಬಿಟ್ಟು ಕೊಡಲ್ಲ. ನಮ್ಮದೆಲ್ಲಾ ಮುಗಿದಿದೆ ಇನ್ನೇನು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

ಇದನ್ನು ಬಿಟ್ಟು ಬಿಡಿ. ನಾವು ಉಮಾಪತಿ ಜೊತೆಗೆ ಮಾತನಾಡುತ್ತೇವೆ. ಉಮಾಪತಿಯನ್ನು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅರುಣಾ ಅವರು ಹೇಳಿದ್ದಾರೆ. ನಾವು ನಾವೇ ಮಾತನಾಡಿ ಈ ವಿಚಾರವನ್ನು ಬಗೆ ಹರಿಸಿಕೊಳ್ಳುತ್ತೇವೆ. ನಾವು ಮಂಗಳ ಹಾಡಿದ್ದೇವೆ. ಉಮಾಪತಿಯವರು ಫುಲ್‍ಸ್ಟಾಪ್ ಹಾಕಿದ್ದಾರೆ ಎಂದರು.

ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣಾ ಕುಮಾರಿ, ದರ್ಶನ್ ಸ್ನೇಹಿತರ ಮಧ್ಯೆ ಜಗಳ ತರಲು ಉಮಾಪತಿಯವರು ನನ್ನನ್ನು ಬಳಸಿಕೊಂಡಿದ್ದಾರೆ. ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದೊಂದು ಸಣ್ಣ ವಿಷಯ. ಈ ಪ್ರಕರಣದಿಂದ ನನಗೆ ಅವಮಾನ ಆಗುತ್ತಿದೆ. ನನ್ನನ್ನು ಬಳಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿ ಉಮಾಪತಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು.

The post ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್ appeared first on Public TV.

Source: publictv.in

Source link