ಇಷ್ಟೆಲ್ಲಾ ಆದ್ರೂ ಉಮಾಪತಿ ಬಿಟ್ಟು ಕೊಡದೇ ‘ಹೀಗೆ’ ಹೇಳಿದ್ರು ದರ್ಶನ್; ದೊಡ್ಡತನ ಅಂದ್ರೆ ಇದೇ ಅಲ್ವಾ?

ಇಷ್ಟೆಲ್ಲಾ ಆದ್ರೂ ಉಮಾಪತಿ ಬಿಟ್ಟು ಕೊಡದೇ ‘ಹೀಗೆ’ ಹೇಳಿದ್ರು ದರ್ಶನ್; ದೊಡ್ಡತನ ಅಂದ್ರೆ ಇದೇ ಅಲ್ವಾ?

ಬೆಂಗಳೂರು: 25 ಕೋಟಿ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಫುಲ್​ ಬ್ಯಾಟಿಂಗ್​​ ಮಾಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ದರ್ಶನ್​​, ಇದು ಮಕ್ಕಳ ಆಟವೂ ಅಲ್ಲ; ಹಾಗಂತ ದೊಡ್ಡ ವಿಚಾರವೂ ಅಲ್ಲ. ನಾನು ಇದಕ್ಕೆ ಈಗಾಗಲೇ ಅಂತ್ಯ ಹಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ನನ್ನ ನಿರ್ಮಾಪಕರನ್ನು ಬಿಟ್ಟುಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

blank

ಇನ್ನು, ಮಹಿಳೆ ಅರುಣ್​ ಕುಮಾರಿ ಅವರನ್ನು ಉಮಾಪತಿ ಯಾಕೇ ಬಳಸಿಕೊಂಡರೋ ಗೊತ್ತಿಲ್ಲ. ನಾನು ಯಾರನ್ನು ಅರೆಸ್ಟ್​ ಮಾಡಿಸಲ್ಲ. ನಾನು ಉಮಾಪತಿ ಜೊತೆಯಲ್ಲಿ ಸಂಪರ್ಕದಲ್ಲಿದ್ದೇನೆ. ಈ ಕೇಸ್​ ಇಲ್ಲಿಗೆ ಬಿಟ್ಟುಬಿಡೋಣ. ಉಮಾಪತಿ ನನ್ನ ಆಧಾರ್​ ಕಾರ್ಡ್​ ಕೇಳಿದ್ರು, ಕೊಟ್ಟಿದ್ದೇನೆ. ಈಗ ಬಾಲ್​​​ ಉಮಾಪತಿ ಬಳಿ ಇದೆ ಎಂದರು ದರ್ಶನ್​​.

ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ ಇಪ್ಪತ್ತೈದು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಹೆಸರು ಕೇಳಿ ಬಂದಿತ್ತು. ಹೀಗೆಂದು ಸ್ವತಃ ನಟ ದರ್ಶನ್ ಅವರೇ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದ್ದರು. ಆದರೀಗ, ದಿಢೀರ್​​ ಉಮಾಪತಿ ಪರ ದರ್ಶನ್​ ಬ್ಯಾಟಿಂಗ್​ ಮಾಡಿದ್ದಾರೆ.

The post ಇಷ್ಟೆಲ್ಲಾ ಆದ್ರೂ ಉಮಾಪತಿ ಬಿಟ್ಟು ಕೊಡದೇ ‘ಹೀಗೆ’ ಹೇಳಿದ್ರು ದರ್ಶನ್; ದೊಡ್ಡತನ ಅಂದ್ರೆ ಇದೇ ಅಲ್ವಾ? appeared first on News First Kannada.

Source: newsfirstlive.com

Source link