ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಮೋದಿ ಹೇಳಿದ ಮದ್ದು ಏನು?

ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಮೋದಿ ಹೇಳಿದ ಮದ್ದು ಏನು?

ನವದೆಹಲಿ: ಕಳೆದ ವಾರ ಶೇ.10 ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ವರದಿಯಾದ ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಈ ಸಭೆಯಲ್ಲಿ ತೀವ್ರಗೊಳ್ಳುತ್ತಿರುವ ಕೋವಿಡ್​​-19 ವೈರಸ್​​ ನಿಯಂತ್ರಣ ಮಾಡುವುದು ಹೇಗೆ? ಎಂಬುದರ ಕುರಿತು ಚರ್ಚಿಸಿದರು.

ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರೊಂದಿಗಿನ ಕೋವಿಡ್​​-19 ನಿಯಂತ್ರಣ ಉನ್ನತ ಮಟ್ಟ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಎಂಟು ರಾಜ್ಯದ ಮುಖ್ಯಮಂತ್ರಿಗಳಿಗೂ ಆಯಾ ಪ್ರದೇಶದಲ್ಲಿ ಕೋವಿಡ್​​​-19 ನಿಯಂತ್ರಿಸಲು ಸರ್ಕಾರ ಮಾಡಬೇಕಾದ ಅಗತ್ಯ ಸಲಹೆಗಳನ್ನು ನೀಡಿದರು.

ಕೋವಿಡ್​ ಪ್ರೋಟೋಕಾಲ್​​​ ಪಾಲಿಸಿ

ಇತ್ತೀಚೆಗೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಾವು ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಅತೀ ವೇಗವಾಗಿ ಹರಡುತ್ತಿರುವ ಕೋವಿಡ್​ ವೇರಿಯಂಟ್ ಪ್ರಕರಣಗಳ ಮೇಲೆ ಒಂದು ಕಣ್ಣಿಡಬೇಕು. ಇದಕ್ಕೊಂದು ಅಂತ್ಯ ಕಾಣಿಸಲು ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರದ ಕೋವಿಡ್​​-19 ಪ್ರೋಟೋಕಾಲ್​​ ಪಾಲಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕು ಎಂದರು ಪ್ರಧಾನಿ ಮೋದಿ.

ಲಸಿಕೆಯೊಂದೇ ಮದ್ದು

ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್​​ ಧರಿಸದೇ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ. ಇದುವೇ ಮೂರನೇ ಅಲೆಗೆ ಕಾರಣವಾಗಬಹುದು. ಎಲ್ಲರೂ ಕೇಂದ್ರದ ಕೋವಿಡ್​​ ಪ್ರೋಟೋಕಾಲ್​ ಪಾಲಿಸಬೇಕು. ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಜನರಿಗೆ ಲಸಿಕೆ ನೀಡುವುದೊಂದೇ ಪರಿಹಾರ ಎಂದು ತಿಳಿಸಿದರು.

The post ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಮೋದಿ ಹೇಳಿದ ಮದ್ದು ಏನು? appeared first on News First Kannada.

Source: newsfirstlive.com

Source link