ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಮಂಗಳೂರು: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಇಂದು ಬೆಳಗ್ಗೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶೀನಪ್ಪ ರೈ ಅವರು, ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ತಂದೆಯಿಂದ ಯಕ್ಷಗಾನ ಕಲಿತು ಹೆಚ್ಚಿನ ತರಬೇತಿಯನ್ನು ಕುಂಬಳೆ ಕಣ್ಣನ್ ಅವರಿಂದ ಕಲಿತಿದ್ದರು.

ಇರಾ ಶ್ರೀ ಸೋಮನಾಥೇಶ್ವರ ಮೇಳದಲ್ಲಿ ತನ್ನ 13ನೇ ವರ್ಷ ವಯಸ್ಸಿನಲ್ಲಿ ತಿರುಗಾಟ ಆರಂಭಿಸಿದ ಬಳಿಕ ಬಳಿಕ ವೇಣೂರು, ಸೌಕೂರು, ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.

ಶೀನಪ್ಪ ರೈ ಅವರಿಗೆ ರಕ್ತಾಬೀಜಾಸುರ, ಶಿಶುಪಾಲ, ಹಿರಣ್ಯಾಕ್ಷನಂತಹ ಪಾತ್ರಗಳು ಖ್ಯಾತಿಯನ್ನು ತಂದುಕೊಟ್ಟಿತ್ತು. 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿತ್ತು.

The post ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ appeared first on Public TV.

Source: publictv.in

Source link