ಸಾಯೋವರೆಗೂ ನಂಗೆ ನಿರ್ಮಾಪಕ ಉಮಾಪತಿ ಗೆಳೆಯನೇ -ದರ್ಶನ್

ಸಾಯೋವರೆಗೂ ನಂಗೆ ನಿರ್ಮಾಪಕ ಉಮಾಪತಿ ಗೆಳೆಯನೇ -ದರ್ಶನ್

ಬೆಂಗಳೂರು: ಸಾಯೋವರೆಗೂ ನನಗೆ ನಿರ್ಮಾಪಕ ಉಮಾಪತಿ ಗೆಳೆಯನೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ತಮ್ಮ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ದರ್ಶನ್.. ಇಂದು ವಿಡಿಯೋ ಬಿಟ್ಟಿರುವ ಆರೋಪಿ ಮಹಿಳೆ ನನ್ನ ಮೇಲೆ ಆರೋಪ ಮಾಡಿದ್ದಾಳೆ. ಅವರು ತಮಗೂ ಪರ್ಸನಲ್​​ ಲೈಫ್ ಇದೆ ಎಂದಿದ್ದಾರೆ. ಅವರಿಗೆ ನಾನು ಹೇಳ್ತೀನಿ.. ನಿಮ್ಮದು ಒಬ್ಬರಿಗೆ ಮಾತ್ರನಾ ಪರ್ಸನಲ್ ಲೈಫ್ ಇರೋದು? ನಮಗೆ ಇಲ್ವಾ? ನಮಗೆ ಫ್ಯಾಮಿಲಿ ಇಲ್ವಾ ಎಂದು ಪ್ರಶ್ನೆ ಮಾಡಿದರು.

ಒಬ್ಬ ಮಹಿಳೆಗೆ ಎಲ್ಲಿಂದ ಧೈರ್ಯ ಬಂತು?
ಒಂದು ಹೆಣ್ಣಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು ಅನ್ನೋದು ನನ್ನ ಪ್ರಶ್ನೆಯಾಗಿದೆ. ಉಮಾಪತಿ ಅವರನ್ನ ಬಳಸಿಕೊಂಡರೂ ಅಂತಾ ಅವರು ಹೇಳಿದಂತೆ ನಾವು ಒಪ್ಪಿಕೊಳ್ಳೋಣ? ಆದರೆ ಇವರು ಹೇಗೆ ಇದಕ್ಕೆಲ್ಲಾ ಒಪ್ಪಿಕೊಂಡರು? ಒಂದು ಹೆಣ್ಣಿಗೆ ಇಷ್ಟೆಲ್ಲಾ ಧೈರ್ಯ ಹೇಗೆ ಬಂತು? ಎಂದು ಪ್ರಶ್ನಿಸಿದರು.

ಉಮಾಪತಿಯಾಗಲಿ, ನಾನಾಗಲಿ ಕೈಕಟ್ಟಿಕುಳಿತುಕೊಂಡಿಲ್ಲ. ನನಗೆ ಉಮಾಪತಿ ಯಾವತ್ತಿದ್ದರೂ ಸ್ನೇಹಿತನೇ. ಸಾಯೋವರೆಗೂ ಸ್ನೇಹಿತನೇ. ಇದೆಲ್ಲಾ ಸಿಲ್ಲಿ ಮ್ಯಾಟರ್​. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಾಗಬೇಕು ಎಂದರು.

The post ಸಾಯೋವರೆಗೂ ನಂಗೆ ನಿರ್ಮಾಪಕ ಉಮಾಪತಿ ಗೆಳೆಯನೇ -ದರ್ಶನ್ appeared first on News First Kannada.

Source: newsfirstlive.com

Source link