ಕಾನೂನು ಹೋರಾಟದಿಂದ ಹಿಂದೆ ಸರಿದ ಉಮಾಪತಿ; ಕೇಸ್​ ಇತ್ಯರ್ಥಕ್ಕೆ ದರ್ಶನ್​​ ಮಾತುಕತೆ?

ಕಾನೂನು ಹೋರಾಟದಿಂದ ಹಿಂದೆ ಸರಿದ ಉಮಾಪತಿ; ಕೇಸ್​ ಇತ್ಯರ್ಥಕ್ಕೆ ದರ್ಶನ್​​ ಮಾತುಕತೆ?

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆಗೆ ಯತ್ನ ಆರೋಪ ಪ್ರಕರಣಕ್ಕೆ ತೆರೆ ಬೀಳುವ ಮುನ್ಸೂಚನೆ ಸಿಕ್ಕಿದೆ.

ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಅವರು ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಿರ್ಮಾಪಕ ಉಮಾಪತಿ ಅವರಿಗೆ ದರ್ಶನ್ ಕಾಲ್ ಮಾಡಿ ಮಾತುಕತೆ ನಡೆಸಿದ್ದಾರೆ. ನಮ್ಮ ನಡುವೆ ಈ ವಿವಾದ ಬೇಡ ನಿರ್ಮಾಪಕರೇ, ನಮ್ಮ ಮಧ್ಯೆ ಬಂದಿರುವ ಆ ಲೇಡಿಯನ್ನು ಕರೆಸಿ ವಾರ್ನ್ ಮಾಡೋಣ. ನಮ್ಮ ನಡುವೆ ವೈಮನಸ್ಸು ಮೂಡಿದೆ ಅಂತ ಹೊರಗೆ ಮೆಸೇಜ್ ಹೋಗ್ತಿದೆ.

ಆದ್ದರಿಂದ ಈ ಪ್ರಕರಣ ಇಲ್ಲಿಗೆ ಮುಗಿಸಿಬಿಡೋಣ ಎಂದು ಉಮಾಪತಿಗೆ ದರ್ಶನ್ ಹೇಳಿದ್ದಾರೆ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ದರ್ಶನ್ ಕಾಲ್ ಮಾಡಿ ಮಾತನಾಡಿರುವ ಹಿನ್ನೆಲೆಯಲ್ಲಿ ಉಮಾಪತಿ ಕಾನೂನು ಹೋರಾಟದಿಂದ ಹಿಂದೆ ಸರಿದಿದ್ದಾರೆ ಅಂತಾ ಹೇಳಲಾಗಿದೆ.

ಕೆಲವು ಹೊತ್ತಿನ ಹಿಂದೆ ಉಮಾಪತಿ ಅವರು ಕಾನೂನು ಹೋರಾಟವನ್ನ ಮುಂದುವರಿಸಲು ವಕೀಲರ ಭೇಟಿಗೆ ನಿರ್ಧರಿಸಿದ್ದರು. ದರ್ಶನ್ ಅವರು ಮಾತನಾಡಿದ ಬೆನ್ನಲ್ಲೇ ಕಾನೂನು ಹೋರಾಟದಿಂದ ಹಿಂದೆ ಸರಿದಿದ್ದಾರೆ ಅಂತಾ ಹೇಳಲಾಗಿದೆ.

The post ಕಾನೂನು ಹೋರಾಟದಿಂದ ಹಿಂದೆ ಸರಿದ ಉಮಾಪತಿ; ಕೇಸ್​ ಇತ್ಯರ್ಥಕ್ಕೆ ದರ್ಶನ್​​ ಮಾತುಕತೆ? appeared first on News First Kannada.

Source: newsfirstlive.com

Source link