ರೋಲ್ಸ್​ ರಾಯ್​​ ಎಂಟ್ರಿ ಟ್ಯಾಕ್ಸ್​​​​ ಕಟ್ಟದೇ ಕೋರ್ಟ್ ​​ಮೆಟ್ಟಿಲೇರಿದ್ದ ವಿಜಯ್; ಛೀಮಾರಿ ಹಾಕಿದ ಹೈ ಕೋರ್ಟ್

ರೋಲ್ಸ್​ ರಾಯ್​​ ಎಂಟ್ರಿ ಟ್ಯಾಕ್ಸ್​​​​ ಕಟ್ಟದೇ ಕೋರ್ಟ್ ​​ಮೆಟ್ಟಿಲೇರಿದ್ದ ವಿಜಯ್; ಛೀಮಾರಿ ಹಾಕಿದ ಹೈ ಕೋರ್ಟ್

ಚೆನ್ನೈ: ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತಾರೆ.. ಆದ್ರೆ ಅಡಕೆಗಾಗಿ ಆನೆ ಮಾನ ಕಳೆದುಕೊಂಡಿದ್ದು ಎಲ್ಲಾದ್ರೂ ನೋಡಿದ್ದೀರಾ? ಅಂತದ್ದೇ ಒಂದು ಘಟನೆ ಸದ್ಯ ನಡೆದಿದ್ದು, ತಮಿಳು ಜನಪ್ರಿಯ ನಟ ವಿಜಯ್​ ತಲಪತಿಗೆ ಮದ್ರಾಸ್ ಹೈ ಕೋರ್ಟ್​ ತೀವ್ರ ಛೀ ಮಾರಿ ಹಾಕಿದೆ. ಅಷ್ಟೇ ಅಲ್ಲ ಟ್ಯಾಕ್ಸ್​ ಕಟ್ಟೋದನ್ನ ತಪ್ಪಿಸಿಕೊಳ್ಳಲು ಯತ್ನಿಸುವುದು ರಾಷ್ಟ್ರವಿರೋಧಿ ಮನಸ್ಥಿತಿ ತೋರಿಸುತ್ತೆ ಅಂತಾ ಅತ್ಯಂತ ಕಠಿಣ ಪದ ಬಳಸಿದೆ. ಅಷ್ಟಕ್ಕೂ ಆಗಿದ್ದು ಏನೆಂದ್ರೆ 2012ರಲ್ಲಿ ವಿಜಯ್ ತಲಪತಿ ಇಂಗ್ಲೆಂಡ್​ನಿಂದ ರೋಲ್ಸ್​ ರಾಯ್ ಕಾರನ್ನು ಇಂಪೋರ್ಟ್​ ಮಾಡಿಕೊಂಡಿದ್ದರು. ಅದಕ್ಕೆ ನಿಯಮದಂತೆ ಎಂಟ್ರಿ ಟ್ಯಾಕ್ಸ್​ ನೀಡ ಬೇಕಿತ್ತು. ಅದೂ ಕೂಡ ಕೋಟಿ ಗಟ್ಟಲೇ ಹಣವಲ್ಲ.. ಬದಲಿಗೆ ಕೆಲವೇ ಲಕ್ಷ ರೂಪಾಯಿಗಳು. ಸಾಮಾನ್ಯವಾಗಿ 3 ಕೋಟಿ ರೂಪಾಯಿಗೂ ಅಧಿಕ ಬೆಲೆಯ ರೋಲ್ಸ್​​ ರಾಯ್ ​​ಕಾರು ಕೊಂಡು ಕೊಂಡ ವಿಜಯ್​ಗೆ ಕೆಲ ಲಕ್ಷ ಟ್ಯಾಕ್ಸ್​ ಅನ್ನು ಕಟ್ಟೋದು ದೊಡ್ಡ ವಿಚಾರ ಆಗಿರಲಿಲ್ಲ.

ಆದ್ರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ನಟ ವಿಜಯ್ ತನಗೆ ಅಷ್ಟು ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ಟೋಕೆ ಸಾಧ್ಯವಿಲ್ಲ ಅಂತಾ ಕೋರ್ಟ್​ ಮೆಟ್ಟಿಲೇರಿದ್ರು. ಹಲವು ವರ್ಷಗಳ ಕಾಲ ಈ ಪ್ರಕರಣ ಕೋರ್ಟ್​ನಲ್ಲಿತ್ತು. ಅದಕ್ಕೆ ಇಂದು ಇತಿಶ್ರೀ ಹಾಡಿರುವ ಮದ್ರಾಸ್ ಹೈಕೋರ್ಟ್​, ವಿಜಯ್​ಗೆ ತೀವ್ರ ಛೀಮಾರಿ ಹಾಕಿದೆ. ಜೊತೆಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

ಇದನ್ನೂ ಓದಿ: ತಮಿಳು ನಟ ವಿಜಯ್​​​ಗೆ ತಟ್ಟಿದ ಐಟಿ ಇಲಾಖೆ ಬಿಸಿ, ಸಿನಿಮಾ ಸೆಟ್​ನಿಂದಲೇ ವಿಚಾರಣೆಗೆ..!

ಹೌದು.. ತಮಿಳು ​ಜನಪ್ರಿಯ ನಟ ವಿಜಯ್​ ಕಾರಿಗೆ ಮದ್ರಾಸ್ ಹೈಕೋರ್ಟ್​ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. 2012ರಲ್ಲಿ ಇಂಗ್ಲೆಂಡ್​​ನಿಂದ ರೋಲ್ಸ್ ರಾಯ್ ಕಾರು ಖರೀದಿಸಿದ್ದ ಪ್ರಕರಣದಲ್ಲಿ ನಟ ವಿಜಯ್​​ಗೆ ದಂಡ ವಿಧಿಸಿರುವ ಕೋರ್ಟ್, ಎರಡು ವಾರದಲ್ಲಿ ಒಂದು ಲಕ್ಷ ರೂಪಾಯಿ ಕೊರೋನಾ ಪರಿಹಾರ ನಿಧಿಗೆ ನೀಡುವಂತೆ ಆದೇಶಿಸಿದೆ.

ತನ್ನ ರೋಲ್ಸ್ ರಾಯ್​​ಗೆ ತೆರಿಗೆ ವಿನಾಯಿತಿ ನೀಡುವಂತೆ ವಿಜಯ್​ ಚೆನ್ನೈ ಹೈಕೋರ್ಟ್​ ಮೊರೆ ಹೋಗಿದ್ದರು. ವಿಜಯ್​ ಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೈಕೋರ್ಟ್​ ಈಗ ಒಂದು ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಈ ಹಿಂದೆಯೂ ಹಲವರು ಬಾರಿ ನಟ ವಿಜಯ್​ ಕಾರಿಗೆ ದಂಡ ವಿಧಿಸಲಾಗಿದೆ. ಒಮ್ಮೆ ಬೆಂಗಳೂರಿನಲ್ಲೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ರೇಂಜ್ ರೋವರ್ ಕಾರಿಗೆ ಪೊಲೀಸರು ದಂಡ ವಿಧಿಸಿದ್ದರು. ನಟ ವಿಜಯ್ ತನ್ನ ರೇಂಜ್ ರೋವರ್ ಕಾರಿಗೆ ಟಿಂಟೆಡ್ ಗ್ಲಾಸ್ ಅಳವಡಿಸಿದ ಕಾರಣ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ‘ಇವರೇ ನನ್ನ ಬಾಲ್ಯದ ಕ್ರಶ್’​ ಅಂದ್ರು ಕರ್ನಾಟಕ ಕ್ರಶ್ ರಶ್ಮಿಕಾ..!

The post ರೋಲ್ಸ್​ ರಾಯ್​​ ಎಂಟ್ರಿ ಟ್ಯಾಕ್ಸ್​​​​ ಕಟ್ಟದೇ ಕೋರ್ಟ್ ​​ಮೆಟ್ಟಿಲೇರಿದ್ದ ವಿಜಯ್; ಛೀಮಾರಿ ಹಾಕಿದ ಹೈ ಕೋರ್ಟ್ appeared first on News First Kannada.

Source: newsfirstlive.com

Source link