KRS ಸುರಕ್ಷತೆಗಾಗಿ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಗೆ ಬ್ರೇಕ್ ಹಾಕಲು ಕ್ರಮ- ಮಂಡ್ಯ ಉಸ್ತುವಾರಿ ಸಚಿವ

KRS ಸುರಕ್ಷತೆಗಾಗಿ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಗೆ ಬ್ರೇಕ್ ಹಾಕಲು ಕ್ರಮ- ಮಂಡ್ಯ ಉಸ್ತುವಾರಿ ಸಚಿವ

ಮಂಡ್ಯ: ಕೆಆರ್‌ಎಸ್‌‌ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಬೇಬಿ ಬೆಟ್ಟದಲ್ಲಿನ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿನ ಕಲ್ಲು ಗಣಿಗಾರಿಕೆ ಇತ್ತೀಚೆಗೆ ತೀವ್ರ ಸದ್ದು ಮಾಡುತ್ತಿದ್ದು ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧ ಮಾಡಲು ಅವಕಾಶವಿದೆ. ಈ ಕುರಿತು ಗಣಿ ಸಚಿವ ಮುರಗೇಶ್​ ನಿರಾಣಿ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೂ ಮನವರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಇಷ್ಟು ದಿನ ಟ್ರಯಲ್ ಬ್ಲಾಸ್ಟ್ ನಡೆಸೋದು ಮತ್ತೆ ಅವಕಾಶ ಕೊಡೋದು, ಇಷ್ಟೇ ನಡೆದಿದೆ. ಡ್ಯಾಂ ಭದ್ರತೆ ಚರ್ಚೆ ವಿಚಾರ ಬಂದಾಗ ಏನ್ ಮಾಡೋದು? ಸಕ್ರಮ ಗಣಿಗಾರಿಕೆ ಕುರಿತು ಯಾವುದೇ ತಕರಾರಿಲ್ಲ ಎಂದ ಅವರು ಜಿಲ್ಲೆಯಲ್ಲಿ 8 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ. ಕಂದಾಯ, ಗಣಿ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಡ್ಯಾಂ ಪರಿಶೀಲನೆ ನಡೆಸಲಾಗಿದೆ. ವರದಿ ಪ್ರಕಾರ ಡ್ಯಾಂಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

The post KRS ಸುರಕ್ಷತೆಗಾಗಿ ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಗೆ ಬ್ರೇಕ್ ಹಾಕಲು ಕ್ರಮ- ಮಂಡ್ಯ ಉಸ್ತುವಾರಿ ಸಚಿವ appeared first on News First Kannada.

Source: newsfirstlive.com

Source link