ದೇಶಿ ಕ್ರಿಕೆಟ್​ನಲ್ಲಿ ಅಭಿಮನ್ಯು ಬೊಂಬಾಟ್ ಆಟ; ಟೀಂ ಇಂಡಿಯಾಗೆ ಮತ್ತೊಂದು ತಲೆಬಿಸಿ

ದೇಶಿ ಕ್ರಿಕೆಟ್​ನಲ್ಲಿ ಅಭಿಮನ್ಯು ಬೊಂಬಾಟ್ ಆಟ; ಟೀಂ ಇಂಡಿಯಾಗೆ ಮತ್ತೊಂದು ತಲೆಬಿಸಿ

ಇಂಗ್ಲೆಂಡ್​ ಪ್ರವಾಸದಲ್ಲಿ ಓಪನಿಂಗ್​ ಸ್ಥಾನಕ್ಕೆ ಅಭಿಮನ್ಯು ಈಶ್ವರನ್​ ಕೂಡ ಟಫ್​ ಕಾಂಪಿಟೇಟರ್​​. ಆದರೂ ಪೃಥ್ವಿ ಶಾ-ದೇವದತ್​ ಪಡಿಕ್ಕಲ್​​ಗೆ ಬುಲಾವ್​ ನೀಡಿದ್ದು, ಹಲವು ಅನುಮಾನಗಳನ್ನ ಸೃಷ್ಟಿಸಿದೆ. ಹಾಗಾದ್ರೆ ಬಂಗಾಳ ಹುಡುಗನ ಹಿನ್ನೆಡೆಗೆ ಕಾರಣವೇನು?

ಇಂಗ್ಲೆಂಡ್​ ಎದುರಿನ ಟೆಸ್ಟ್​ ಸರಣಿಗೂ ಮುನ್ನ ಟೀಮ್​ ಇಂಡಿಯಾ, ಭಾರೀ ಸರ್ಕಸ್​ ನಡೆಸ್ತಿದೆ. ಇಂಜುರಿಗೆ ಒಳಗಾಗಿರುವ ಶುಭ್​ಮನ್​​ ಗಿಲ್​​ ಜಾಗಕ್ಕೆ, ಪೃಥ್ವಿ ಶಾ-ದೇವದತ್​ ಪಡಿಕ್ಕಲ್​​ರನ್ನ ಕರೆಸಿಕೊಳ್ಳೋಕೆ ಮ್ಯಾನೇಜ್​ಮೆಂಟ್​ ಬಯಸ್ತಿದೆ. ಅತ್ತ ಆಯ್ಕೆ ಸಮಿತಿ ಆರಂಭಿಕ ಸ್ಥಾನಕ್ಕೆ ಕೆ.ಎಲ್​​​.ರಾಹುಲ್​​, ಮಯಾಂಕ್​ ಅಗರ್ವಾಲ್​ ಮತ್ತು ಸ್ಟ್ಯಾಂಡ್‌ ಬೈ ಓಪನರ್ ಅಭಿಮನ್ಯು ಈಶ್ವರನ್ ಇದ್ದು, ಅವರೇ ಸಾಕು ಎಂದು ಅಭಿಪ್ರಾಯಪಟ್ಟಿದೆ. ಆದರೀಗ ಮ್ಯಾನೇಜ್​ಮೆಂಟ್​ ನಡೆ, ಈಶ್ವರನ್​​ರ ಸಾಮರ್ಥ್ಯವನ್ನ ಪ್ರಶ್ನಿಸುವಂತೆ ಮಾಡಿದೆ.

ಅಭಿಮನ್ಯು ಈಶ್ವರನ್​ ದೇಶಿ ಕ್ರಿಕೆಟ್​​ನಲ್ಲಿ, ಬಂಗಾಳ ರಣಜಿ ತಂಡ ಆರಂಭಿಕ ಆಟಗಾರ. ಆರಂಭಿಕನಾಗಿ ಫೆಂಟಾಸ್ಟಿಕ್ ಪರ್ಫಾಮೆನ್ಸ್​ ನೀಡಿರುವ 23 ವರ್ಷದ ಈಶ್ವರನ್​, ಗುಣಮಟ್ಟದ ಆಟಗಾರ ಕೂಡ ಹೌದು. ಜವಾಬ್ದಾರಿಯುತ ಆಟದ ಮೂಲಕ ಯಾವುದೇ ಸಂದರ್ಭದಲ್ಲಿ, ತಂಡಕ್ಕೆ ನೆರವಾಗುವ ಕ್ಲಾಸಿಕ್​ ಪ್ಲೇಯರ್​​. ಇಷ್ಟಿದ್ದರೂ ಇಂಗ್ಲೆಂಡ್​ನಲ್ಲಿ ಆಡುವಷ್ಟು ಯೋಗ್ಯರಲ್ಲ ಎಂದು ಟೀಮ್​ ಮ್ಯಾನೇಜ್​ಮೆಂಟ್​ ಅಭಿಪ್ರಾಯಪಟ್ಟಿದೆ.

ಇಂಗ್ಲಿಷ್ ಕಂಡೀಷನ್ಸ್​​ನಲ್ಲಿ ಆಡೋ ಸಾಮರ್ಥ್ಯ ಈಶ್ವರನ್​ಗಿಲ್ವಾ..?
ಈಶ್ವರನ್​​, ದೇಶಿ ಕ್ರಿಕೆಟ್​​ನಲ್ಲಿ ಸ್ಮಾರ್ಟ್​ ಕ್ರಿಕೆಟರ್​. ಆದರೆ ಇಂಗ್ಲೀಷ್​ ಕಂಡೀಷನ್ಸ್​​ನಲ್ಲಿ ಬ್ಯಾಟಿಂಗ್​ ಟೆಕ್ನಿಕ್, ಈಶ್ವರನ್​​ಗೆ ಮನವರಿಕೆಯಾಗಿಲ್ಲ. ತಂಡದ ನಿರ್ವಹಣೆ ಮತ್ತು ಪರಿಸ್ಥಿತಿಗಳನ್ನ ನಿಭಾಯಿಸುವುದರ ಬಗ್ಗೆ ಮ್ಯಾನೇಜ್​ಮೆಂಟ್,​ ಅನುಮಾನಗಳು ಹುಟ್ಟುಹಾಕಿದೆ. ಜೊತೆಗೆ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​​ಗೆ ಇನ್ನೂ ರೆಡಿಯಾಗಿಲ್ಲ. ಹಾಗಾಗಿ ಇಂಗ್ಲೆಂಡ್​ ಕಂಡೀಷನ್ಸ್​​ನಲ್ಲಿ ಎಲ್ಲವನ್ನೂ ಮೀರಿ ಆಡುವುದು ಕಷ್ಟ. ಇದರಿಂದ ಪೃಥ್ವಿ-ಪಡಿಕ್ಕಲ್​​ಗೆ, ಬುಲಾವ್​ ನೀಡಿತ್ತು ಮ್ಯಾನೇಜ್​ಮೆಂಟ್.

ಲಾಂಗರ್​ ಫಾರ್ಮೆಟ್​​ನಲ್ಲಿ ಕಳೆದೆರಡು ವರ್ಷಗಳಿಂದ ಸಾಕಷ್ಟು ಹೆಸರು ಗಳಿಸಿರುವ ಈಶ್ವರನ್​​​ಗೆ, ಇಂಗ್ಲೆಂಡ್​ನಲ್ಲಿ ಆಡೋ ಸಾಮರ್ಥ್ಯ ಕಡಿಮೆ ಎಂದು ಟೀಮ್​ ಮ್ಯಾನೇಜ್​ಮೆಂಟ್​ ಊಹಿಸಿದೆ. ಈಶ್ವರನ್​​, ರಾಹುಲ್​​ ದ್ರಾವಿಡ್​​ರಿಂದ​ ಮಾರ್ಗದರ್ಶನ ಕೂಡ ಪಡೆದಿದ್ದಾರೆ. ಅಂತಹ ಸ್ಮಾರ್ಟ್​ ಕ್ರಿಕೆಟಿಗನಿಗೆ ಅವಮಾನ ಮಾಡ್ತಿರೋದು ತಪ್ಪು ಅನ್ನೋದು, ಮಾಜಿ ಕ್ರಿಕೆಟಿಗರ ಅಭಿಪ್ರಾಯ.

The post ದೇಶಿ ಕ್ರಿಕೆಟ್​ನಲ್ಲಿ ಅಭಿಮನ್ಯು ಬೊಂಬಾಟ್ ಆಟ; ಟೀಂ ಇಂಡಿಯಾಗೆ ಮತ್ತೊಂದು ತಲೆಬಿಸಿ appeared first on News First Kannada.

Source: newsfirstlive.com

Source link