ಇರಾಕ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 64 ಮಂದಿ ಸಜೀವ ದಹನ

ಇರಾಕ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 64 ಮಂದಿ ಸಜೀವ ದಹನ

ಇರಾಕ್​ನ ಕೋವಿಡ್ ಕೇರ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 64 ಮಂದಿ ಸಜೀವದಹನವಾಗಿರುವ ಘಟನೆ ನಡೆದಿದೆ. ಇನ್ನು ಈ ದುರಂತದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇರಾಕ್​ನ ಅಲ್​ ಹುಸೇನ್ ಟೀಚಿಂಗ್ ಹಾಸ್ಟಿಟಲ್​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಸದ್ಯ ಬೆಂಕಿ ನಂದಿಸಲಾಗಿದೆ ಎಂಬ ಮಾಹಿತಿ ಇದೆ. ಆಕ್ಸಿಜನ್ ಟ್ಯಾಂಕ್​ ಬ್ಲಾಸ್ಟ್​ ಆದ ಹಿನ್ನೆಲೆ ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಹೊಸ ಕೋವಿಡ್ ವಾರ್ಡ್​​ನ್ನು ಕಳೆದ ಮೂರು ತಿಂಗಳ ಹಿಂದಷ್ಟೇ ತೆರೆಯಲಾಗಿತ್ತು.. ವಾರ್ಡ್​ನಲ್ಲಿ 70 ಬೆಡ್​ಗಳ ಸಾಮರ್ಥ್ಯವಿತ್ತು..ಕಟ್ಟಡದೊಳಗೆ ಮತ್ತೊಂದಿಷ್ಟು ಮಂದಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

The post ಇರಾಕ್​ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 64 ಮಂದಿ ಸಜೀವ ದಹನ appeared first on News First Kannada.

Source: newsfirstlive.com

Source link