ರೋಲ್ಸ್​ರಾಯ್ಸ್ ಸೇರಿ 8 ಐಶಾರಾಮಿ ಕಾರು ಮಾಲೀಕ.. ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಶಿವಸೇನೆ ನಾಯಕ

ರೋಲ್ಸ್​ರಾಯ್ಸ್ ಸೇರಿ 8 ಐಶಾರಾಮಿ ಕಾರು ಮಾಲೀಕ.. ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಶಿವಸೇನೆ ನಾಯಕ

ಮುಂಬೈ: ಮಹಾರಾಷ್ಟ್ರದ ಶಿವಸೇನಾ ಮುಖಂಡನೊಬ್ಬ ತನ್ನ ಬಳಿ 8 ಕೋಟಿ ಬೆಲೆಬಾಳುವ ಐಷಾರಾಮಿ ಕಾರ್ ರೋಲ್ಸ್ ರಾಯ್ಸ್​ನ್ನೇ ಇಟ್ಟುಕೊಂಡಿದ್ದರೂ 35,000 ರೂ ಬೆಲೆಯ ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಸಂಜಯ್ ಗಾಯ್ಕ್​ವಾಡ್ ಕರೆಂಟ್ ಕದ್ದು ಸಿಕ್ಕಿಬಿದ್ದಿರುವ ಆರೋಪಿ.

ಸಂಜಯ್ ಗಾಯ್ಕ್​ವಾಡ್ ವಿರುದ್ಧ ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ಕಂಪನಿ ಎಫ್​​ಐಆರ್ ದಾಖಲಿಸಿದೆ. ಎಮ್​ಎಸ್​ಇಡಿಸಿಎಲ್​ ಹೆಚ್ಚುವರಿ ಇಂಜಿನಿಯರ್ ಅಶೋಕ್ ಬುಂದೆ ಗಾಯ್ಕ್​ವಾಡ್ ಅವರ ನಿರ್ಮಾಣ ಹಂತದ ನಿವಾಸದ ಬಳಿ ಈ ವಿದ್ಯುತ್ ಕಳ್ಳತನವನ್ನ ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಈ ವೇಳೆ 34,840 ರೂ ಗಳ ವಿದ್ಯುತ್ ಬಿಲ್​ನ್ನು ಗಾಯ್ಕ್ ವಾಡ್ ಅವರಿಗೆ ಕಳುಹಿಸಲಾಗಿದ್ದು ಜೊತೆಗೆ 15,000 ಪೆನಾಲ್ಟಿ ವಿಧಿಸಲಾಗಿದೆ.

ಬಿಲ್ ಕಳುಹಿಸಿದ್ರೂ ಗಾಯ್ಕ್​ವಾಡ್ ಮೂರು ತಿಂಗಳ ನಂತರವೂ ಬಿಲ್​ ಪಾವತಿ ಮಾಡಿಲ್ಲವಾದ್ದರಿಂದ ಮಹಾತ್ಮ ಫುಲೆ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್ ದಾಖಲಿಸಲಾಗಿದೆ. ನಂತರ ಗಾಯ್ಕ್ ವಾಡ್​​ವಿದ್ಯುತ್ ಬಿಲ್ ಜೊತೆಗೆ ಪೆನಾಲ್ಟಿಯನ್ನೂ ಪಾವತಿಸಿದ್ದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.

The post ರೋಲ್ಸ್​ರಾಯ್ಸ್ ಸೇರಿ 8 ಐಶಾರಾಮಿ ಕಾರು ಮಾಲೀಕ.. ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಶಿವಸೇನೆ ನಾಯಕ appeared first on News First Kannada.

Source: newsfirstlive.com

Source link