‘ಮತ್ತೆ ಲಾಕ್​ಡೌನ್​ ಮಾಡ್ಬೇಕಾಗುತ್ತೆ’ ಜನರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಸಚಿವ ಸುಧಾಕರ್?

‘ಮತ್ತೆ ಲಾಕ್​ಡೌನ್​ ಮಾಡ್ಬೇಕಾಗುತ್ತೆ’ ಜನರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಸಚಿವ ಸುಧಾಕರ್?

ಚಿಕ್ಕಬಳ್ಳಾಪುರ: ಕೇರಳ ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕೋರೋನಾ ಹೆಚ್ಚಾಗ್ತಿದೆ, ಜನರೇ ಬಹಳ ಎಚ್ಚರಿಕೆಯಿಂದ ಇರಬೇಕು‌ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಇದನ್ನ ನಾವು ಬಹಳ ಸೂಕ್ಷವಾಗಿ ಪರಿಗಣಿಸಬೇಕು. ಕೆಲ ರಾಜ್ಯಗಳಲ್ಲಿ ೨ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಅನ್ಲಾಕ್ ಮಾಡಿರುವ ಉದ್ದೇಶ ಸಂಪೂರ್ಣ ಕೋರೋನಾ ನಿರ್ಮೂಲನೆ ಆಗಿದೆ ಅಂತಲ್ಲ.ಜ ನಜೀವನ ಅಸ್ತವ್ಯಸ್ಥ ಆಗಬಾರದು ಜೀವನೋಪಾಯ ತೊಂದರೆ ಆಗಬಾರದು ಅಂತ ಅನ್ಲಾಕ್ ಮಾಡಿದ್ದೀವಿ, ತಪ್ಪಾಗಿ ಅರ್ಥೈಸಿಕೊಂಡು ವಿರುದ್ಧವಾಗಿ ನಡೆದುಕೊಂಡರೆ ಮತ್ತೆ ಅಪಾಯ ಎದುರಾಗುತ್ತೆ. ದೇವಸ್ಥಾನ ಧಾರ್ಮಿಕ ಸ್ಥಳಗಳಲ್ಲಿ ಪೂಜೆಗೆ ಮಾತ್ರ ಅವಕಾಶವಿದೆ. ಜಾತ್ರೆ ರಥೋತ್ಸವ ದೊಡ್ಡ ಸಮಾರಂಭ ಮಾಡುವ ಹಾಗಿಲ್ಲ.ಮದುವೆ ಗಳಲ್ಲೂ ಸಹ 100ಜನ ಮಾತ್ರ ಇರಬೇಕು. 500-10000 ಜನ ಸೇರಿರೋದು ಸರ್ಕಾರದ ಗಮನಕ್ಕೆ ಬಂದಿದೆ. ಇದು, ಹೀಗೆ ಮುಂದುವರೆದರೆ ಮತ್ತೆ ಸರ್ಕಾರದಿಂದ‌ ಕಠಿಣ ಕ್ರಮ ಮಾಡೋದು ಅನಿವಾರ್ಯ ಅಂತ ಜಿಲ್ಲೆಯಲ್ಲಿ ಸುಧಾಕರ್​ ಹೇಳಿದ್ದಾರೆ.

The post ‘ಮತ್ತೆ ಲಾಕ್​ಡೌನ್​ ಮಾಡ್ಬೇಕಾಗುತ್ತೆ’ ಜನರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ ಸಚಿವ ಸುಧಾಕರ್? appeared first on News First Kannada.

Source: newsfirstlive.com

Source link