ದೊಡ್ಡ ದೇವಸ್ಥಾನ ಅಲ್ಲ ಚಿಕ್ಕ ಚಿಕ್ಕ ದೇವಸ್ಥಾನ ಸ್ಫೋಟಕ್ಕೆ ಉಗ್ರರ ಸ್ಕೆಚ್; ಅರೆಸ್ಟ್ ಆಗಿದ್ದರಿಂದ ತಪ್ಪಿತು ದುರಂತ

ದೊಡ್ಡ ದೇವಸ್ಥಾನ ಅಲ್ಲ ಚಿಕ್ಕ ಚಿಕ್ಕ ದೇವಸ್ಥಾನ ಸ್ಫೋಟಕ್ಕೆ ಉಗ್ರರ ಸ್ಕೆಚ್; ಅರೆಸ್ಟ್ ಆಗಿದ್ದರಿಂದ ತಪ್ಪಿತು ದುರಂತ

ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ಲಖನೌನಲ್ಲಿ ಉಗ್ರರು ಕುಕ್​ವೇರ್ ಬಾಂಬ್ ಸ್ಫೋಟಿಸಲು ನಡೆಸಿದ್ದ ಪ್ಲಾನ್​ನ್ನು ಎಟಿಎಸ್ ಅಧಿಕಾರಿಗಳು ಬಯಲಿಗೆಳೆದಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಲಾಗಿದ್ದು ಇವರ ಬಂಧನವಾಗದಿದ್ದಲ್ಲಿ ದೊಡ್ಡ ಮಟ್ಟದ ಅನಾಹುತವೇ ನಡೆಯುತ್ತಿತ್ತು ಎನ್ನಲಾಗಿದೆ.

ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಮಿನ್ಹಾಜ್ ಅಹ್ಮದ್ ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ಅಲ್​ಖೈದಾ ಸಂಘಟನೆಗೆ ಜನರನ್ನ ಆಕರ್ಷಿಸುವ ಕೆಲಸ ಮಾಡುತ್ತಿದ್ದನಂತೆ. ಹಲವು ವರ್ಷಗಳ ಕಾಲ ಸೈಲೆಂಟ್ ಉಗ್ರನಾಗಿ ಕೆಲಸ ಮಾಡಿದ್ದ ಈತ ಶ್ರೀನಗರದಲ್ಲಿ ಟ್ರೈನಿಂಗ್ ಪಡೆದಿದ್ದ ಎನ್ನಲಾಗಿದೆ. ಅಲ್ಲಿಂದ ಬಂದು ಲಖನೌನಲ್ಲಿ ಸಣ್ಣ ಸಣ್ಣ ದೇವಸ್ಥಾನಗಳಲ್ಲಿ ಕುಕ್​ವೇರ್ ಬಾಂಬ್ ಸ್ಫೋಟಿಸಲು ಮುಂದಾಗಿದ್ದನಂತೆ. ಟೆಲಿಗ್ರಾಮ್ ಆ್ಯಪ್ ಮೂಲಕ ಈತ ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದ.. ಈತನ ಅಕೌಂಟ್​​ಗೆ ಇತ್ತೀಚೆಗೆ ಒಂದಿಷ್ಟು ಹಣವೂ ಬಂದಿತ್ತು ಎನ್ನಲಾಗಿದೆ.

The post ದೊಡ್ಡ ದೇವಸ್ಥಾನ ಅಲ್ಲ ಚಿಕ್ಕ ಚಿಕ್ಕ ದೇವಸ್ಥಾನ ಸ್ಫೋಟಕ್ಕೆ ಉಗ್ರರ ಸ್ಕೆಚ್; ಅರೆಸ್ಟ್ ಆಗಿದ್ದರಿಂದ ತಪ್ಪಿತು ದುರಂತ appeared first on News First Kannada.

Source: newsfirstlive.com

Source link