ನಮ್ಮೂರ ಶ್ಯಾನುಭೋಗ.. ನನಗೆ ಲಾ ಓದಿಸಬೇಡ ಅಂತ ನಮ್ಮಪ್ಪನಿಗೆ ಹೇಳಿದ್ದ.. ಆದ್ರೆ..!

ನಮ್ಮೂರ ಶ್ಯಾನುಭೋಗ.. ನನಗೆ ಲಾ ಓದಿಸಬೇಡ ಅಂತ ನಮ್ಮಪ್ಪನಿಗೆ ಹೇಳಿದ್ದ.. ಆದ್ರೆ..!

ಬಾಗಲಕೋಟೆ: ಬದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ.. ನಮ್ಮೂರಲ್ಲೊಬ್ಬ ಶ್ಯಾನಭೋಗ ಇದ್ದ.. ನಮ್ಮಪ್ಪನಿಗೆ ಹೇ.. ಲಾ(ವಕೀಲಕೆ) ಓದಿಸಬೇಡ ನಿನ್ನ ಮಗನ್ನ ಕೂಲಿಯಾಗಿಬಿಡ್ತಾನೆ ಅಂದಿದ್ದ. ಲಾ.. ಕುರುಬರಿಗೆಲ್ಲ ಹತ್ತಲ್ಲಯ್ಯ, ಅದು ಮೇಲ್ಜಾತಿಯವರಿಗೆ ಹತ್ತೋದು ಅಂತಿದ್ದ ಎಂದಿದ್ದಾರೆ.

ಊರೆಲ್ಲಾ ಪಂಚಾಯತಿ ಸೇರಿಸಿ, ಲಾ ಕಾಲೇಜ್​ಗೆ ಸೇರ್ಕೊಂಡೆ

ನಮ್ಮಪ್ಪ ನನ್ನ, ಲಾ ಕಾಲೇಜ್​ಗೆ ಸೇರಿಸಬಾರದು ಅನ್ಕೊಂಡಿದ್ದ. ಊರಿಗೆಲ್ಲ ಪಂಚಾಯತಿ ಸೇರಿಸಿ, ಲಾ ಕಾಲೇಜ್​ಗೆ ಸೇರ್ಕೊಂಡೆ. ಸಮಾಜದಲ್ಲಿ ಇಂತಹ ದಾರಿ ತಪ್ಪಿಸೋರು ಇರ್ತಾರೆ‌. (ಇಟ್ ಈಸ್ ನಾಟ್ ಹೆರಿಡೇಟರಿ) ವಂಶ ಪಾರಂಪರೆ ಯಲ್ಲಿ) ಇಟ್ ಈಸ್ ಆನ್ ಅಕ್ವೈರ್ಡ್ ಕ್ಯಾರೆಕ್ಟರ್. ಪ್ರತಿಯೊಬ್ಬರೂ ಸಹ ಬುದ್ದಿವಂತಿಕೆಯನ್ನ ಬೆಳೆಸಿಕೊಳ್ಳಲು ಸಾಧ್ಯ. ಮೇಷ್ಟ್ರುಗಳೆಲ್ಲ ಮೇಲ್ಜಾತಿಯವರೇ ಇದ್ದಾರಾ ಬಾಬಾಸಾಹೇಬ್ ಅಂಬೇಡ್ಕರ್ ಮೇಲ್ಜಾತಿಯಲ್ಲಿ ಹುಟ್ಟಿದ್ದಾ..? ಈ ದೇಶಕಂಡ ಮೇಧಾವಿಗಳಲ್ಲಿ ಅಂಬೇಡ್ಕರ್ ಒಬ್ಬರು. ರಾಮಾಯಣ, ಮಹಾಭಾರತ ಬರೆದವರು ಮೇಲ್ಜಾತಿಯಲ್ಲಿ ಹುಟ್ಟಿದ್ದಾ..? ಅವರೆಲ್ಲ ಮಹಾಭಾರತ, ರಾಮಾಯಣದಂತಹ ಕಾವ್ಯ ಬರೆದಿಲ್ವಾ. ಕಾಳಿದಾಸ ಯಾವ ಜಾತಿಯಲ್ಲಿ ಹುಟ್ಟಿದ್ದು.. ಬುದ್ಧಿವಂತಿಕೆ ಯಾರ ಸ್ವತ್ತೂ ಅಲ್ಲ.. ನಾನು ಪ್ರೈಮರಿ ಸ್ಕೂಲ್ ಓದುವಾಗ, ಏ ಎಮ್ಮೆ, ಕುರಿ ಮೇಯಿಸು ಹೋಗು ಅಂತಿದ್ರು ಎಂದಿದ್ದಾರೆ.

blank

ನನ್ನ ಹೆಂಡತಿ ಮಕ್ಕಳು ಸುಖವಾಗಿದ್ರೆ ಸಾಕು ಅನ್ನೋದಲ್ಲ.. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು..

ಲ್ಯಾಂಡ್ ಆರ್ಮಿಯವರು ನಾಳೆ ಇಂದ ಶುರುಮಾಡ್ತೀವಿ ಅಂತಾ ಹೇಳಿದ್ದಾರೆ. ಕೆಲ ಸರ್ವಾಜನಿಕರು, ನೌಕರ ಸಂಘದವ್ರು, ಹಳೆಯ ವಿದ್ಯಾರ್ಥಿಗಳು ಪೀಠೋಪಕರಣ ಕೊಡಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಶಿಕ್ಷಣ ಅಂದ್ರೆ ಕೆಲವೇ ಜನರಿಗೆ ಅಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಸಿಗಬೇಕು. ಜ್ಞಾನ ಬೆಳವಣಿಗೆಯಾಗಬೇಕು. ಬದುಕು ಅರ್ಥವಾಗಬೇಕು. ಯಾರಿಗೆ ಜ್ಞಾನ ಬೆಳವಣಿಗೆಯಾಗಿರುತ್ತೆ, ಅವರಿಗೆ ಮಾತ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಪ್ರತಿಯೊಬ್ಬರಿಗೂ ಕೂಡ ಸಮಾಜದ ಋಣ ಇರುತ್ತೆ. ನೀವೆಲ್ಲ ಸಮಾಜದ ಋಣ ತೀರಿಸಬೇಕು. ಪ್ರತಿಯೊಬ್ಬರಿಗೂ ಜವಾಬ್ದಾರಿ ಇರಬೇಕು. ಬರೀ ಎಂಎ ಓದಿದೆ, ಎಂ.ಕಾಂ ಮಾಡಿದೆ, ಪಿಎಚ್​ಡಿ ಮಾಡಿದೆ.. ನನ್ನ ಹೆಂಡತಿ ಮಕ್ಕಳು ಸುಖವಾಗಿದ್ರೆ ಸಾಕು ಅನ್ನೋದಲ್ಲ. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಅದು ಬದುಕಿನ ಉದ್ದೇಶ, ಅಂತಹ ಬದುಕು ಕಟ್ಟಿಕೊಳ್ಳೋ ಶಿಕ್ಷಣ ಸಿಗಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ನೀತಿ ಪಾಠ ಮಾಡಿದರು.

ಜಾತಿ ಹೋಗದೇನೆ ಸಮಾನತೆ ಬರಲ್ಲ. ಜ್ಞಾನ ವಿಕಾಸ ಆಗದೇನೆ, ನಿಮಗೆ ಇನ್ನೊಂದ ಧರ್ಮದ ಬಗ್ಗೆ ಸಹಿಷ್ಣುತೆ ಬರಲ್ಲ

ಸಮಾಜದಲ್ಲಿ ಜಾತಿ ಇದೆ. ಓದಿದವರು ದಯವಿಟ್ಟು ಜಾತಿ ಮಾಡಬೇಡಿ. ಜಾತಿರಹಿತ ಸಮಾಜ ನಿರ್ಮಾಣ ಸಂವಿಧಾನದ ಆಶಯ. ವರ್ಗರಹಿತ ಸಮಾಜ ಆಗಬೇಕು. ಸರ್ವಧರ್ಮಗಳ ಸಮನ್ವಯ ಇರಬೇಕು. ಜಾತಿ ಹೋಗದೇನೆ ಸಮಾನತೆ ಬರಲ್ಲ. ಜ್ಞಾನ ವಿಕಾಸ ಆಗದೇನೆ, ನಿಮಗೆ ಇನ್ನೊಂದ ಧರ್ಮದ ಬಗ್ಗೆ ಸಹಿಷ್ಣುತೆ ಬರಲ್ಲ. ಒಂದು ವರ್ಗದ ಜನ, ಬರೀ ಧರ್ಮ ಧರ್ಮ ಅಂತಾರೆ.. ನಮ್ಮ ಧರ್ಮ ಇಟ್ಟಕೊಳ್ಳಿ ಅಪ್ಪ, ಬೇರೆ ಧರ್ಮ ವಿರೋಧ ಮಾಡಬೇಡಿ.

ಅಂಗಿ, ಚಡ್ಡಿ ಯಾಕೆ ಇಲ್ಲ ಅಂದ್ರೆ.. ಎಲ್ಲದಕ್ಕೂ ಹಣೆ ಬರಹ ಅಂತಾರೆ. ದೇವರು ಏನಾದರೂ ಚಡ್ಡಿ ಹಾಕಬೇಡ ಅಂತಾನಾ..?

ಪರಧರ್ಮ ಸಹಿಷ್ಣುತೆ ಇರಬೇಕು. ಮನುಷ್ಯತ್ವ ಬೆಳೆಸಿಕೊಂಡರೆ ಮಾತ್ರ ನಿಜವಾದ ನಾಗರಿಕರು. ನಮ್ಮ ಜಾತಿ ನಮ್ಮ ಜಾತಿ ಅಂತ ಹಳ್ಳಿಯಲ್ಲಿ ಬಡಿದಾಡಿಕೊಳ್ಳಬಾರದು. ಇವನಾರವ ಇವನಾರವ ಎನ್ನುವ ಬಸವಣ್ಣನ ವಚನ ಉಲ್ಲೇಖಿಸಿದ ಸಿದ್ದರಾಮಯ್ಯ.. ಮೌಢ್ಯಗಳು, ಕಂದಾಚಾರಗಳು ಇರಬಾರದು. ಅಂಗಿ, ಚಡ್ಡಿ ಯಾಕೆ ಇಲ್ಲ ಅಂದ್ರೆ.. ಎಲ್ಲದಕ್ಕೂ ಹಣೆ ಬರಹ ಅಂತಾರೆ. ದೇವರು ಏನಾದರೂ ಚಡ್ಡಿ ಹಾಕಬೇಡ ಅಂತಾನಾ..? ಆಗಿದ್ರೆ ಅದು ಯಾವ ದೇವರು..? ಬುದ್ಧ, ಬಸವ, ಅಂಬೇಡ್ಕರ್ ಅವರನ್ನ ಓದಬೇಕು.. ಬುದ್ದಿವಂತಿಕೆ ಯಾರಪ್ಪನ ಸೊತ್ತಲ್ಲ. ಸಮಾಜದಲ್ಲಿ ದಾರಿ ತಪ್ಪಿಸೋರು ಇರ್ತಾರೆ. ಪ್ರತಿಯೊಬ್ಬರೂ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ರಾಮಾಯಣ, ಮಹಾಭಾರತ ಬರೆದವರು ಮೇಲ್ಜಾತಿಯಲ್ಲಿ ಹುಟ್ಟಿದವರಾ? ಬುದ್ಧಿವಂತಿಕೆ ಜಾತಿಯಿಂದ ಬಂದಿದ್ದಲ್ಲ. ಅದನ್ನ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು. ಎಲ್ಲರೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

The post ನಮ್ಮೂರ ಶ್ಯಾನುಭೋಗ.. ನನಗೆ ಲಾ ಓದಿಸಬೇಡ ಅಂತ ನಮ್ಮಪ್ಪನಿಗೆ ಹೇಳಿದ್ದ.. ಆದ್ರೆ..! appeared first on News First Kannada.

Source: newsfirstlive.com

Source link