ಆಮ್​ ಆದ್ಮೀ ಪಾರ್ಟಿ ಕದ ತಟ್ಟಿದ ಪ್ರಿಯಾಂಕಾ ವಾದ್ರಾ ಆಪ್ತ

ಆಮ್​ ಆದ್ಮೀ ಪಾರ್ಟಿ ಕದ ತಟ್ಟಿದ ಪ್ರಿಯಾಂಕಾ ವಾದ್ರಾ ಆಪ್ತ

ನವದೆಹಲಿ: ಪಂಜಾಬ್‌ ಸಿಎಂ ಅಮರಿಂಧರ್‌ ಸಿಂಗ್‌ ಮತ್ತು ಕಾಂಗ್ರೆಸ್​​ ಮುಖಂಡ ನವಜೋತ್‌ ಸಿಂಗ್‌ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮನವೊಲಿಸಿದ ಬಳಿಕವೂ ನವಜೋತ್​​ ಸಿಂಗ್​​ ಸಿಧು ಪಂಜಾಬ್​​​​ ಕಾಂಗ್ರೆಸ್​ ಸರ್ಕಾರವನ್ನು ಟೀಕಿಸುವುದನ್ನು ನಿಲ್ಲಿಸಿಲ್ಲ. ಹೀಗಿರುವಾಗಲೇ ಸಿಧು ಇಂದು ಮಾಡಿರುವ ಸರಣಿ ಟ್ವೀಟ್​​​ಗಳು ಕಾಂಗ್ರೆಸ್​ಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ. ಮುಂದಿನ ದಿನಗಳಲ್ಲಿ ನವಜೋತ್ ಸಿಂಗ್​ ಸಿಧು ಆಮ್​ ಆದ್ಮಿ ಪಕ್ಷ ಸೇರಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಾಕಿದೆ.

blank

ಪಂಜಾಬ್​​ಗೆ ನಾನು ನೀಡಿದ ಕೊಡುಗೆಯನ್ನು ಆಮ್​ ಆದ್ಮಿ ಪಕ್ಷ ಯಾವಾಗಲೂ ಗುರುತಿಸುತ್ತಲೇ ಬಂದಿದೆ. 2017ಕ್ಕೆ ಮುನ್ನವೂ ಡ್ರಗ್ಸ್​ ಮಾಫಿಯಾ, ರೈತರ ಸಮಸ್ಯೆ, ಭ್ರಷ್ಟಚಾರದ ವಿರುದ್ಧ ನಾನು ಮಾಡಿದ ಹೋರಾಟ ಎಲ್ಲರಿಗೂ ಮಾದರಿ ಎಂದು ಆಪ್​ ಹೇಳಿದೆ. ನಾನು ಇಲ್ಲಿನ ರಾಜಕೀಯ ಬಿಕ್ಕಟ್ಟನ್ನು ಎದುರಿಸಿ ಪಂಜಾಬ್​​ ಮಾಡೆಲ್​​​​ಗಾಗಿ ಶ್ರಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದ ಯಾರು ಕೆಲಸ ಮಾಡಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಸಿಧು ಟ್ವೀಟ್​ ಮಾಡಿದ್ದಾರೆ.

ಇನ್ನು, ನವಜೋತ್​​ ಸಿಂಗ್​ ಸಿಧು ಮಾಡಿರುವ ಟ್ವೀಟ್​ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಸಿಧು ಆಮ್​ ಆದ್ಮಿ ಪಾರ್ಟಿ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ:  ನವಜೋತ್‌ ಸಿಂಗ್‌ ಸಿಧು ಭೇಟಿಗೆ ರಾಹುಲ್​​ ಗಾಂಧಿಯನ್ನು ಒಪ್ಪಿಸಿದ್ದು ಪ್ರಿಯಾಂಕ ಗಾಂಧಿ
​​

The post ಆಮ್​ ಆದ್ಮೀ ಪಾರ್ಟಿ ಕದ ತಟ್ಟಿದ ಪ್ರಿಯಾಂಕಾ ವಾದ್ರಾ ಆಪ್ತ appeared first on News First Kannada.

Source: newsfirstlive.com

Source link