‘ನನ್ನ ತಪ್ಪಿದ್ದರೆ ಜನ ಬುದ್ಧಿ ಕಲಿಸಲಿ ತಿದ್ಕೊತೀನಿ..ಬೇಡ ಅಂದ್ರೆ ಟಾಟಾ ಹೇಳಿ ಹೋಗ್ತೀನಿ’

‘ನನ್ನ ತಪ್ಪಿದ್ದರೆ ಜನ ಬುದ್ಧಿ ಕಲಿಸಲಿ ತಿದ್ಕೊತೀನಿ..ಬೇಡ ಅಂದ್ರೆ ಟಾಟಾ ಹೇಳಿ ಹೋಗ್ತೀನಿ’

ಮಂಡ್ಯ: ನಾನು ಈ ಮಣ್ಣಿನ ಸೊಸೆ ನನಗೆ ಈ ಮಣ್ಣಿನ ಮೇಲೆ ಅಧಿಕಾರ ಇದೆ, ನಿಮಗೆ ನಾನು ಬೇಡ ಎನಿಸಿದಾಗ ಹೇಳಿ ಟಾಟಾ ಹೇಳಿ ಹೋಗ್ತೀನಿ.. ತಪ್ಪಿದ್ದರೇ ಹೇಳಿ ತಿದ್ದಿಕೊಳ್ತೀನಿ. ನಾನು ಪಾರ್ಲಿಮೆಂಟ್​ನಲ್ಲಿದ್ದಾಗ ಸುಮಲತಾ ಎಲ್ಲಿ ಕಾಣ್ತಿಲ್ಲಾ ಅಂತಾರೆ..ಇಲ್ಲಿ ಬಂದರೇ ನನ್ನ ವಿರುದ್ಧ ಟೀಕೆ ಮಾಡ್ತಾರೆ ..ಹಾಗಾದರೆ ನಾನು ಎಲ್ಲಿಗೆ ಹೋಗಬೇಕು.?ಎಂದು ಸಂಸದೆ ಸುಮಲತಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇಂದು ಮಂಡ್ಯದಲ್ಲಿ ಮನ್ಮುಲ್ ಹಗರಣ ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ರೈತ ಸಂಘಟನೆ ಹಾಗೂ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಸುಮಲತಾ ಮಾತನಾಡಿದ್ದಾರೆ.

ಮಂಡ್ಯದ ಸ್ವಾಭಿಮಾನಿ ಜನಕ್ಕೆ ಆತ್ಮೀಯ ನಮಸ್ಕಾರಗಳನ್ನ ತಿಳಿಸಿ ಮಾತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಅನ್ಯಾಯ,ಅಕ್ರಮದ ಕುರಿತು ಏನೇ ಮಾತನಾಡಿದರು ರಾಜಕೀಯ ಬಣ್ಣ ಕಟ್ತಾರೆ. ಸುಮಲತಾಗೆ ರಾಜಕಾರಣ ಹೊಸದು ಎನ್ನುವ  ರಾಜಕೀಯ ವಿರೋಧಿಗಳಿಗೆ ಟಾಂಗ್​ ನೀಡಿದ್ದು ಹೌದು ನನಗೆ ರಾಜಕೀಯ ಹಾಗೂ ಭ್ರಷ್ಟಾಚಾರ ಹೊಸದೇ..ನಾನು ಚಿತ್ರರಂಗದಲ್ಲಿದ್ದವಳು ಅಲ್ಲಿ ಈ ರೀತಿಯ ಭ್ರಷ್ಟಾಚಾರ ಅಕ್ರಮ ನೋಡಿಲ್ಲಾ..ಎಂದಿದ್ದಾರೆ.

ನನ್ನ ತಪ್ಪಿದ್ದರೆ ಜನ ಬುದ್ಧಿ ಕಲಿಸಲಿ

ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದ ಸುಮಲತಾ -ಇಂದು ಗುದ್ದಲಿ ಪೂಜೆ

ರೈತ ಸಂಘದವರು ನನಗೆ ಚುನಾವಣಾ ಸಮಯದಲ್ಲಿ ಬೆಂಬಲ ಕೊಟ್ಟಿದ್ರಿ. ನಾನು ಅದನ್ನು ಮರೆಯುವುದಿಲ್ಲಾ ನಾನು ಹೋದ ಕಡೆ ಎಲ್ಲ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಬೇಕು ಅಂತಾ ಹೇಳಿದ್ರೂ. ಆ ಪ್ರಕಾರ ಧ್ವನಿ ಎತ್ತಿ ಅವರಿಗೆ ನೆರವಾಗಿದ್ದೇನೆ ಆದರೂ ಮಾತು ಮಾತಿಗೂ ಜನ ಬುದ್ದಿ ಕಲಿಸ್ತಾರೆ, ಬುದ್ದಿ ಕಲಿಸ್ತಾರೆ ಅಂತಾರೇ.. ಆಯ್ತು ನನ್ನ ತಪ್ಪು ಇದ್ದರೆ ಜನ ಅವಶ್ಯವಾಗಿ ಬುದ್ದಿ ಕಲಿಸಲಿ ಎಂದಿದ್ದಾರೆ.

ಮೈಷುಗರ್ ಕಾರ್ಖಾನೆ ವಿಚಾರ ಕುರಿತು ಮಾತನಾಡಿದ ಅವರು ಖಾಸಗೀಕರಣ ಆಗಬೇಕು ಅಂತ ನಾನು ಎಲ್ಲೂ ಹೇಳಿಲ್ಲ.. ಎಂದಿದ್ದಾರೆ. ಸರ್ಕಾರ ನೂರಾರು ಕೋಟಿ ಸುರಿದರು ಕಾರ್ಖಾನೆ ಅಭಿವೃದ್ಧಿ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ರು.. ಅದನ್ನೇ ಮಾಧ್ಯಮಗಳ ಮುಂದೆ ಹೇಳಿದ್ದೆ.. ಯಾವ ರೀತಿಯಲ್ಲಾದ್ರು ಕಾರ್ಖಾನೆ ಆರಂಭಿಸಿ ಎಂದು ಸರ್ಕಾರದ ಬಳಿ ಮನವಿ ಕೂಡ ಮಾಡಿದ್ದೆ.. ಆದರೆ ಮೈಷುಗರನ್ನ ನಮ್ಮವರಿಗೆ ಕೊಡಲು ಸ್ಕೆಚ್ ಹಾಕಿದ್ದೆ ಅಂತ ಆರೋಪ ಮಾಡಿದರು. ಈ ವಿಚಾರವಾಗಿ ಜನಗಳೆಲ್ಲ ಒಂದು ನಿರ್ಧಾರಕ್ಕೆ ಬನ್ನಿ, ನೀವು ಏನು ಹೇಳ್ತಿರೋ ಅದನ್ನೇ ನಾನು ಸರ್ಕಾರದ ಬಳಿ ಮಾತನಾಡುತ್ತೇನೆ ಎಂದಿದ್ದಾರೆ.

ಇನ್ನು ಕ್ಷೇತ್ರದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಮಾತನಾಡಿದ ಅವರು.ಅಕ್ರಮ ಗಣಿಗಾರಿಕೆ ಬಗ್ಗೆ ನಾನು, ಮಾತೆತ್ತಿದರೆ ಸಾಕು ಪಕ್ಷಬೇಧ ಮರೆತು ನನ್ನ ಮೇಲೆ ದಾಳಿಗಿಳಿಯುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ಈ ಕುರಿತು ಮಾಹಿತಿಯೇ ಇಲ್ಲ ಅಂತಾರೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಅವರಿಗೆ ಯಾಕೆ ನೀವು ಈ ಕುರಿತು ಮಾಹಿತಿ ಹೇಳಲಿಲ್ಲ ಎಂದು ಪರೋಕ್ಷ ಟಾಂಗ್​ ನೀಡಿದ್ದಾರೆ.

ಮಂಡ್ಯದವರು ಮುಗ್ಧರು ಅಂತ ಅನ್ಕೊಂಡಿದ್ದಿರಾ?
ಮಾತೆತ್ತಿದರೆ ಮಂಡ್ಯದವರು ಮುಗ್ಧರು ಅಂತ ಹೇಗೆ ಬೇಕಾದರು ಮೋಸ ಮಾಡುಬಹುದು ಅನ್ನೋದೇ ನಿಮ್ಮ ಅಭಿಪ್ರಾಯ ಆಗಿದ್ದರೆ ಮರೆತು ಬಿಡಿ. ಸಾವಿನ ಮನೆಗೆ ಹೋಗಿ ಒಂದಷ್ಟು ಕಾಸು ಕೊಟ್ಟು ಪಬ್ಲಿಸಿಟಿ ತಗೊಳ್ಳೊ ನಿಮ್ಮ ಸಾವಿನ ರಾಜಕಾರಣಕ್ಕೆ ಧಿಕ್ಕಾರ. ರೈತ ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ  ಹತ್ಯೆಗಳು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಂಡ್ಯದ ಗುರುತೇ ಸ್ವಾಭಿಮಾನ.. ಹಾಗಾಗಿ ಎಲ್ಲರೂ ಒಗ್ಗಾಟ್ಟಾಗಿ ಹೋರಾಡಿ ನ್ಯಾಯ ಒದಗಿಸಿಕೊಳ್ಳೋಣ ಎಂದಿದ್ದಾರೆ. ಮನ್‌ಮುಲ್ ಹಗರಣದ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಜಿಲ್ಲೆಯ ರೈತರಿಗೆ ಪ್ರತಿ ವಿಷಯದಲ್ಲೂ ಅನ್ಯಾಯವಾಗುತ್ತಿದೆ..ದಯವಿಟ್ಟು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡ್ತೀನಿ ಪಾರದರ್ಶಕವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

The post ‘ನನ್ನ ತಪ್ಪಿದ್ದರೆ ಜನ ಬುದ್ಧಿ ಕಲಿಸಲಿ ತಿದ್ಕೊತೀನಿ..ಬೇಡ ಅಂದ್ರೆ ಟಾಟಾ ಹೇಳಿ ಹೋಗ್ತೀನಿ’ appeared first on News First Kannada.

Source: newsfirstlive.com

Source link