ವಿಧವಾ ವೇತನ ಕೇಳಿ ಬಂದ ಮಹಿಳೆ ಮುಂದೆ ಪ್ಯಾಂಟ್​​ ಕಳಚಿದ್ನಾ ತಹಶೀಲ್ದಾರ್..?

ವಿಧವಾ ವೇತನ ಕೇಳಿ ಬಂದ ಮಹಿಳೆ ಮುಂದೆ ಪ್ಯಾಂಟ್​​ ಕಳಚಿದ್ನಾ ತಹಶೀಲ್ದಾರ್..?

ಬೆಳಗಾವಿ: ವಿಧವಾ ವೇತನ ಕೇಳಿ ಬಂದ ಮಹಿಳೆಯೊಂದಿಗೆ ಚಿಕ್ಕೋಡಿ ತಹಶೀಲ್ದಾರ್​ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ಪ್ರಕರಣವೊಂದು ಬಯಲಿಗೆ ಬಂದಿದೆ. ಹೀಗಾಗಿ, ಈ ಕೃತ್ಯ ಎಸಗಿದ ಚಿಕ್ಕೋಡಿ ತಹಶೀಲ್ದಾರ್​​​ ಅವರನ್ನು ಕೆಲಸದಿಂದ ವಜಾಗೊಳಿಸಿ ಎಂದು ಸರ್ಕಾರಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೌದು, ಮಹಿಳೆಯೊಬ್ಬರು ತನ್ನ ಗಂಡ ಸಾವನ್ನಪ್ಪಿದ್ದ ಬಳಿಕ ವಿಧವಾ ವೇತನಕ್ಕೆ ಅರ್ಜಿ ಹಾಕಲು ಬೆಳಗಾವಿಯ ಚಿಕ್ಕೋಡಿ ತಹಶೀಲ್ದಾರ್​​ ಕಚೇರಿಗೆ ಬಂದಿದ್ದಾರೆ. ಈ ವೇಳೆ ತನ್ನ ಕಚೇರಿಯಲ್ಲೇ ವಿಧವಾ ವೇತನ ಕೇಳಿ ಬಂದ ಮಹಿಳೆ ಮುಂದೆ ತಹಶೀಲ್ದಾರ್​​​​ ಪ್ಯಾಂಟ್​ ಕಳಚಿ ಅಸಭ್ಯವಾಗಿ ವರ್ತನೆ ತೋರಿದ್ದಾರೆನ್ನಲಾಗಿದೆ. ಆಗ ಮಹಿಳೆ ಚೀರಾಡುತ್ತಾ ತಹಶೀಲ್ದಾರ್​​ ಕಚೇರಿಯಿಂದ ಹೊರಬಂದಿದ್ದಾರಂತೆ.

blank

ಚಿಕ್ಕೋಡಿಯ ತಹಶೀಲ್ದಾರ್​​​​ ಡಿ.ಎಸ್​​ ಜಮಾದಾರ ಎಂಬಾತ ಈ ಕಾಮುಕ ಕೃತ್ಯ ಎಸಗಿದ್ದಾರಂತೆ. ಹೀಗೆಂದು ವಿಧವೆ ಮಹಿಳೆ ಮತ್ತಾಕೆ ಮಗ ತಹಶೀಲ್ದಾರ್​​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಹಶೀಲ್ದಾರ್​​​​ ಈ ಹಿಂದೆಯೂ ಹಲವು ಮಹಿಳೆಯರೊಂದಿಗೆ ಹೀಗೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಜತೆಗೆ ಈ ತಹಶೀಲ್ದಾರ್​​​ ಸುಮಾರು ಕಾಮಪುರಾಣ ಪ್ರಕರಣಗಳು ವರದಿಯಾಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಈತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆದ್ರೆ ಸತ್ಯಾಸತ್ಯತೆ ಏನು? ನಿಜಕ್ಕೂ ಆ ಅಧಿಕಾರಿ ತಪ್ಪು ಮಾಡಿದ್ರಾ? ಅಥವಾ ಈ ಪ್ರಕರಣ ಏನು? ಮುಂತಾದ ವಿವರಗಳು ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಹೊರಬರಬೇಕಿದೆ.

The post ವಿಧವಾ ವೇತನ ಕೇಳಿ ಬಂದ ಮಹಿಳೆ ಮುಂದೆ ಪ್ಯಾಂಟ್​​ ಕಳಚಿದ್ನಾ ತಹಶೀಲ್ದಾರ್..? appeared first on News First Kannada.

Source: newsfirstlive.com

Source link