ಶರದ್​​ ಪವಾರ್​ ಬೆನ್ನಲ್ಲೇ ಪ್ರಶಾಂತ್​​ ಕಿಶೋರ್​​ ರಾಹುಲ್​ ಗಾಂಧಿಯನ್ನು ಭೇಟಿ

ಶರದ್​​ ಪವಾರ್​ ಬೆನ್ನಲ್ಲೇ ಪ್ರಶಾಂತ್​​ ಕಿಶೋರ್​​ ರಾಹುಲ್​ ಗಾಂಧಿಯನ್ನು ಭೇಟಿ

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ ಸರ್ಕಾರವನ್ನು ಹೇಗಾದರೂ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥ ಪ್ರಶಾಂತ್​​ ಕಿಶೋರ್ ಇತ್ತೀಚೆಗೆ ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​​ರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ಬೆನ್ನಲ್ಲೀಗ ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿಯವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಹುಲ್​ ಗಾಂಧಿಯವರ ಭೇಟಿ ವೇಳೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಮುಂದಿನ ಚುನಾವಣೆ ವೇಳೆ ರಾಷ್ಟ್ರೀಯ ಮೋರ್ಚಾ ಶುರು ಮಾಡೋಣ ಎಂಬ ವಿಚಾರ ಪ್ರಸ್ತಾಪಿಸಿದ್ದಾರಂತೆ. ಹಾಗೆಯೇ ಪಂಜಾಬ್​​​ ಸಿಎಂ ಅಮರೀಂದರ್​ ಸಿಂಗ್​​​​ ಮತ್ತು ನವಜೋತ್​ ಸಿಂಗ್​ ನಡುವಿನ ತಿಕ್ಕಾಟ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

blank

ಮುಂದಿನ ವರ್ಷ ಪಂಜಾಬ್​​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಾರಿಯೂ ಕಾಂಗ್ರೆಸ್​ ಗೆಲ್ಲುವ ಅವಕಾಶವಿದೆ. ಆದ್ದರಿಂದ ಪಂಜಾಬ್​ ಕಾಂಗ್ರೆಸ್​ನಲ್ಲಿರುವ ಬಂಡಾಯ ಶಮನ ಮಾಡುವಂತೆ; ಮುಂದಿನ ಚುನಾವಣೆ ಗೆಲ್ಲಲು ಬೇಕಾದ ತಂತ್ರ ರೂಪಿಸುವಂತೆ ರಾಹುಲ್​​ ಗಾಂಧಿ ಪ್ರಶಾಂತ್​ ಕಿಶೋರ್​ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪ್ರಶಾಂತ್​​ ಕಿಶೋರ್​​ ಇತ್ತೀಚೆಗೆ ಎರಡು ಬಾರಿ ಎನ್​ಸಿಪಿ ಮುಖ್ಯಸ್ಥ ಶರದ್​​ ಪವಾರ್​​ರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು. ಇದರ ಬೆನ್ನಲ್ಲೇ ಈಗ ರಾಹುಲ್​​ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್​​ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಭಾರೀ ಕುತೂಹಲ ಮೂಡಿಸಿದೆ.

The post ಶರದ್​​ ಪವಾರ್​ ಬೆನ್ನಲ್ಲೇ ಪ್ರಶಾಂತ್​​ ಕಿಶೋರ್​​ ರಾಹುಲ್​ ಗಾಂಧಿಯನ್ನು ಭೇಟಿ appeared first on News First Kannada.

Source: newsfirstlive.com

Source link