‘ಟವರ್​ನಿಂದ ವೈರಸ್​ ಬಂದು ಚಿನ್ನ ತಿಂದುಹಾಕುತ್ತೆ’ ಅಂತ ಕಥೆ ಕಟ್ಟಿದ್ದಳಂತೆ ಅರುಣಾ ಕುಮಾರಿ

‘ಟವರ್​ನಿಂದ ವೈರಸ್​ ಬಂದು ಚಿನ್ನ ತಿಂದುಹಾಕುತ್ತೆ’ ಅಂತ ಕಥೆ ಕಟ್ಟಿದ್ದಳಂತೆ ಅರುಣಾ ಕುಮಾರಿ

ಬೆಂಗಳೂರು: ಅರುಣಾ ಕುಮಾರಿ ನನಗೂ ಮೋಸ ಮಾಡಿದ್ದಾಳೆಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಸ್ನೇಹಿತ ನಾಗವರ್ಧನ್.. ಅರುಣಾ ಕುಮಾರಿ ನನಗೆ ಸ್ಯಾಟಲೈಸ್.. ಟವರ್ ಮೂಲಕ ವೈರಸ್ ಬಂದು ಚಿನ್ನ ತಿಂದು ಹಾಕುತ್ತೆ ಅಂತ ಕಥೆ ಕಟ್ಟಿ ನನ್ನಿಂದ ಚಿನ್ನ, ಹಣ ಪಡೆದಿದ್ದಾಳೆ ಎಂದು ಆರೋಪಿಸಿದ್ದಾರೆ.

blank

ನಾನು ನಾಗೇಂದ್ರ ಪ್ರಸಾದ್ 4-5 ವರ್ಷದಿಂದ ಒಡನಾಟ ಕಳೆದುಕೊಂಡಿದ್ವಿ.. ಅದಕ್ಕೆ ಅವಳೇ ಕಾರಣ.. ಇವರ ಫ್ಲಾಟ್ ಒಂದನ್ನ ಸೇಲ್ ಮಾಡಲು ಅವಳನ್ನ ಕರೆದುಕೊಂಡು ಹೋಗಿದ್ದೆ. ಇವರ ಜೊತೆಯಲ್ಲಿ ಇದ್ದಾಗಲೇ ನನಗೆ 15 ಲಕ್ಷ ಲಾಸ್ ಆಗಿದೆ. ನನ್ನ ಜ್ಯುವೆಲರ್ಸ್ ಸೇರಿ ನನ್ನಿಂದ 6 ಲಕ್ಷ ತಗೊಂಡಿದ್ದಾಳೆ. ಟವರ್​ಗಳ ಮೂಲಕ ವೈರಸ್ ಬರುತ್ತೆ ಅಂತ ಕಥೆ ಕಟ್ಟಿ ನನ್ನ ಚಿನ್ನವನ್ನೆಲ್ಲ ಕಸಿದುಕೊಂಡಳು.. ಭಯ, ತೊದಲಿಕೆ ಅವಳ ಬಳಿ ಇಲ್ಲ.. ಸ್ಪಷ್ಟತೆ ಇಂದ ಮಾತಾಡ್ತಾಳೆ. ಅವಳ ಬಗ್ಗೆ ತಿಳಿದುಕೊಳ್ಳೋಕೆ ಮೂರ್ನಾಲ್ಕು ತಿಂಗಳ ಸಮಯ ಹಿಡಿಯಿತು. ನನ್ನ ಫ್ರೆಂಡ್ಸ್ ಹತ್ರಾನೂ 1 ಲಕ್ಷ ಫೈನಾನ್ಸ್ ಕೊಡಿಸಿದ್ದೆ ಎಂದಿದ್ದಾರೆ.

The post ‘ಟವರ್​ನಿಂದ ವೈರಸ್​ ಬಂದು ಚಿನ್ನ ತಿಂದುಹಾಕುತ್ತೆ’ ಅಂತ ಕಥೆ ಕಟ್ಟಿದ್ದಳಂತೆ ಅರುಣಾ ಕುಮಾರಿ appeared first on News First Kannada.

Source: newsfirstlive.com

Source link