‘ಇನ್ಮುಂದೆ ಇಂಥ ಗೊಂದಲ ಬೇಡ’; ಖಾಸಗಿ ಹೋಟೆಲ್​ನಲ್ಲಿ ಮತ್ತೆ ಒಂದಾದ ದರ್ಶನ್-ಉಮಾಪತಿ

‘ಇನ್ಮುಂದೆ ಇಂಥ ಗೊಂದಲ ಬೇಡ’; ಖಾಸಗಿ ಹೋಟೆಲ್​ನಲ್ಲಿ ಮತ್ತೆ ಒಂದಾದ ದರ್ಶನ್-ಉಮಾಪತಿ

ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಯತ್ನ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ಇಬ್ಬರೂ ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಮಾತುಕತೆ ನಡೆಸಿ ಇಬ್ಬರೂ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅರುಣಾ ಕುಮಾರಿ ಎಂಬಾಕೆಯಿಂದ ಶ್ಯೂರಿಟಿ ವಿಚಾರದಲ್ಲಿ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗಿತ್ತು. ಈ ಮಧ್ಯೆ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಸ್ನೇಹಿತ ನಾಗವರ್ಧನ್ ದರ್ಶನ್ ಹಾಗೂ ಉಮಾಪತಿಯವರನ್ನ ಭೇಟಿಯಾಗಿ ಈ ಹಿಂದೆ ಅರುಣಾ ಕುಮಾರಿ ತಮಗೂ ಮೋಸ ಮಾಡಿದ್ದಾರೆಂದು ದಾಖಲೆಗಳನ್ನ ತೋರಿಸಿದ್ದಾರೆ ಎನ್ನಲಾಗಿದೆ.

blank

ಈ ಬೆನ್ನಲ್ಲೇ ದರ್ಶನ್ ಹಾಗೂ ಉಮಾಪತಿ ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿದ್ದು ಇಬ್ರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಾಣುವ ಸಾಧ್ಯತೆಗಳಿವೆ.

ಜನತಾ ಬಜಾರ್ ಬಳಿ ಇರೋ ಅಪಾರ್ಟ್​ಮೆಂಟ್ ಒಂದರಲ್ಲಿ ಇಬ್ಬರೂ ಮಾತುಕತೆ ನಡೆಸಿದ್ದು.. ಇನ್ನು ಮುಂದೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ತೀರ್ಮಾನಿಸಿಕೊಂಡಿದ್ದಾರೆ ಎನ್ನಲಾಗಿದೆ. ನಾಳೆ ಇಬ್ಬರೂ ಕುಳಿತು ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ.

ಸಂಧಾನದ ನಂತರ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ.. ನಾನು. ದರ್ಶನ್, ಹರ್ಷ, ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ನಡುವೆ ಇದ್ದ ಗೊಂದಲ ಇತ್ಯರ್ಥವಾಗಿದೆ. ಈ ಪ್ರಕರಣಕ್ಕೆ ಇಲ್ಲಿಗೇ ಅಂತ್ಯ ಹಾಡ್ತೇವೆ. ಆದರೆ ನಾವೆಲ್ಲ ಸೇರಿ ಆರೋಪಿ ಅರುಣಾ ಕುಮಾರಿ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ. ಯಾಕಂದ್ರೆ ಆ ಲೇಡಿಯನ್ನು ಬಿಟ್ರೆ ಬೇರೆಯವರಿಗೂ ಮೋಸ ಮಾಡ್ತಾಳೆ. ಅವಳಿಗೆ ಕಾನೂನು ಹೋರಾಟದ ಮೂಲಕ ತಕ್ಕ ಪಾಠ ಕಲಿಸ್ತೀವಿ ಎಂದಿದ್ದಾರೆ.

The post ‘ಇನ್ಮುಂದೆ ಇಂಥ ಗೊಂದಲ ಬೇಡ’; ಖಾಸಗಿ ಹೋಟೆಲ್​ನಲ್ಲಿ ಮತ್ತೆ ಒಂದಾದ ದರ್ಶನ್-ಉಮಾಪತಿ appeared first on News First Kannada.

Source: newsfirstlive.com

Source link