‘ನನಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಅಂದಿದ್ದಳು’.. ಅರುಣಾ ಕುಮಾರಿ ವಿರುದ್ಧ ಹೊಸ ಬಾಂಬ್

‘ನನಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಅಂದಿದ್ದಳು’.. ಅರುಣಾ ಕುಮಾರಿ ವಿರುದ್ಧ ಹೊಸ ಬಾಂಬ್

ಬೆಂಗಳೂರು: ಅರುಣಾ ಕುಮಾರಿ ವಿಚಾರವಾಗಿ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಜೊತೆಗೆ ನಾಗವರ್ಧನ್ ಎಂಬುವವರು ಸುದ್ದಿಗೋಷ್ಠಿ ನಡೆಸಿ ಕೆಲವು ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ. ಈ ಹಿಂದೆ ಅರುಣಾ ಕುಮಾರಿ ನನಗೂ ಲಕ್ಷಾಂತರ ರೂ ಮೋಸ ಮಾಡಿದ್ದಾರೆಂದು ಹೇಳಿದ್ದಾರೆ.

ನಾಗವರ್ಧನ್ ಹೇಳಿದ್ದೇನು..?

2015 ಸೆಪ್ಟೆಂಬರ್​ ಅಂತ್ಯದಲ್ಲಿ ನನಗೆ ಇಂಥದ್ದೇ ಒಂದು ಅನುಭವವಾಗಿದೆ, ಅವರೊಂದಿಗೆ ನನಗೆ ಈ ಹಿಂದೆ ಒಡನಾಟವಿತ್ತು. ಫೇಸ್​ಬುಕ್​ ಮೂಲಕ ಪರಿಚಯವಾಗಿತ್ತು..ಫಿಲಂನಲ್ಲಿ ಚಾನ್ಸ್ ಕೊಡ್ತೀನಿ.. ನನ್ನ ತಂದೆ ನಂದಿನಿ ಡೈರಿನಲ್ಲಿ ಮ್ಯಾನೇಜರ್ ಆಗಿದ್ದಾರೆ ಎಂದಿದ್ದರು. ನಾನೂ ನಂಬಿಕೊಂಡಿದ್ದೆ. ತೆಲುಗು ಸ್ಟಾರ್ ಸಿನಿಮಾನ ಕನ್ನಡದಲ್ಲಿ ರೀಮೇಕ್ ಮಾಡಿ ನಿಮ್ಮನ್ನ ಹೀರೋ ಮಾಡ್ತೀನಿ ಅಂದಿದ್ದರು. ಕನಕಪುರ ರಸ್ತೆಯಲ್ಲಿ 10-12 ಕೋಟಿ ಕನ್ಸ್​ಟ್ರಕ್ಷನ್ ಪ್ರಾಜೆಕ್ಟ್ ಕೊಡಿಸ್ತೀನಿ ಎಂದಿದ್ದರು. ನಾವೂ ಸರಿ ಅಂತ ಮುಂದೆ ಹೋದ್ವಿ. ಇದಾದ ನಂತರ ಫ್ಯಾಮಿಲಿನಲ್ಲಿ ಥ್ರೆಟ್ ಇದೆ ಅಂತ ಶುರು ಮಾಡಿದ್ದರು. ತನ್ನ ಹೆಸರು ನಂದಿತಾ ಅಂತ ಹೇಳಿದ್ದರು. ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಫೆಬ್ರವರಿ 2016 ರ ವರೆಗೆ ನನಗೆ ಆಕೆಯ ಪರಿಚಯ ಇತ್ತು.

blank

ದರ್ಶನ್ ಮತ್ತು ಉಮಾಪತಿ ವಿಚಾರದಲ್ಲಿ ನಡೆಯುತ್ತಿರುವುದನ್ನ ಗಮನಿಸಿ ಫುಲ್​ಸ್ಟಾಪ್ ಹಾಕೋಣ ಅಂತ ನಾಗೇಂದ್ರ ಪ್ರಸಾದ್ ಅವರಿಗೆ ಹೇಳಿದೆ.

ನನ್ನ ಜೊತೆಯಲ್ಲಿದ್ದ ಹಲವು ಸ್ನೇಹಿತರನ್ನ ಈಕೆ ಬೇರ್ಪಡಿಸಿದ್ದಾಳೆ.. ಯಾವುದೇ ವ್ಯಕ್ತಿಯನ್ನ ಪರಿಚಯ ಮಾಡಿಕೊಳ್ಳೋ ಮೊದಲು ಅವರ ಸುತ್ತ ಇರುವವರ ಮಾಹಿತಿಯನ್ನ ಈಕೆ ಕಲೆ ಹಾಕ್ತಾಳೆ. ಅವರ ಮಾಹಿತಿ ಇವರಿಗೆ ಇವರ ಮಾಹಿತಿ ಅವರಿಗೆ ನೀಡಿ ಗೊಂದಲ ಮೂಡಿಸ್ತಿದ್ದಾಳೆ. ಹೀಗೆ ನಮಗೂ ಗೊಂದಲ ಮೂಡಿಸಿದ್ದಳು ಎಂದಿದ್ದಾರೆ.

The post ‘ನನಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಅಂದಿದ್ದಳು’.. ಅರುಣಾ ಕುಮಾರಿ ವಿರುದ್ಧ ಹೊಸ ಬಾಂಬ್ appeared first on News First Kannada.

Source: newsfirstlive.com

Source link