ಮತ್ತೆ ಒಂದಾದ ದರ್ಶನ್, ಉಮಾಪತಿ

ಬೆಂಗಳೂರು: 25 ಕೋಟಿ ರೂ. ವಂಚನೆ ಪ್ರಕರಣದಿಂದಾಗಿ ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಮಧ್ಯೆ ಉಂಟಾಗಿರುವ ಸಮಸ್ಯೆ ಸುಖಾಂತ್ಯವನ್ನು ಕಂಡಿದ್ದು, ಇಬ್ಬರು ಭೇಟಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿದಂದ ಭಾರೀ ಚರ್ಚೆಯಾಗುತ್ತಿದ್ದಂತಹ 25 ಕೋಟಿ ರೂ. ವಂಚನೆ ಪ್ರಕರಣ ಸುಖಾಂತ್ಯವನ್ನು ಕಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿವಾದದ ಬಳಿಕ ಒಂದಾದ ದರ್ಶನ್ ಮತ್ತು ಉಮಾಪತಿ ಕಹಿ ಘಟನೆ ಮರೆತು ಒಂದಾಗಿದ್ದಾರೆ. ನಟ ಮತ್ತು ನಿರ್ಮಾಪಕ, ಸ್ನೇಹಿತರೆಲ್ಲಾ ಒಂದಾಗಿದ್ದಾರೆ. ದರ್ಶನ್ ರವರ ಮನೆಯಲ್ಲಿ ಉಮಾಪತಿ ಭೇಟಿಯಾಗಿದ್ದಾರೆ.

ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. 15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕರಾದ ಉಮಾಪತಿ ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿತ್ತು. ಈ ಕುರಿತಾಗಿ ದರ್ಶನ್ ದೂರು ದಾಖಲಿಸಿದ್ದರು.

The post ಮತ್ತೆ ಒಂದಾದ ದರ್ಶನ್, ಉಮಾಪತಿ appeared first on Public TV.

Source: publictv.in

Source link