ಮತ್ತೊಮ್ಮೆ ಘರ್ಜಿಸಲಿದೆ ಬಂಗಾಳದ ಹುಲಿ; ತೆರೆ ಮೇಲೆ ಬರ್ತಿದೆ ಸೌರವ್​​ ಲೈಫ್ ಸ್ಟೋರಿ

ಮತ್ತೊಮ್ಮೆ ಘರ್ಜಿಸಲಿದೆ ಬಂಗಾಳದ ಹುಲಿ; ತೆರೆ ಮೇಲೆ ಬರ್ತಿದೆ ಸೌರವ್​​ ಲೈಫ್ ಸ್ಟೋರಿ

ನವದೆಹಲಿ: ಸೌರವ್ ಗಂಗೂಲಿ.. ಈ ಹೆಸರು ಕೇಳಿದ್ರೆ ಸಾಕು ಇಂದಿಗೂ ಒಂದು ಜನರೇಶನ್ ಕ್ರಿಕೆಟ್​ ಪ್ರೇಮಿಗಳ ಎದೆ ಉಬ್ಬುತ್ತೆ.. ರೋಮಾಂಚನವಾಗುತ್ತೆ.. ಸೋತು ಸುಣ್ಣವಾಗಿದ್ದ ಭಾರತೀಯ ಕ್ರಿಕೆಟ್​​​ಗೆ ಬರೀ ಗೆಲುವಿನ ಲಯಕ್ಕೆ ತಂದಿದ್ದು ಮಾತ್ರವಲ್ಲ.. ನಾವ್ಯಾರಿಗೂ ಕಮ್ಮೀ ಇಲ್ಲ ಅನ್ನೋ ಅದಮ್ಯ ಆತ್ಮ ವಿಶ್ವಾಸ ತುಂಬಿದ್ದು ಇದೇ ಸೌರವ್ ಗಂಗೂಲಿ.. ಅಂಥ ಸೌರವ್​ ಗಂಗೂಲಿಯನ್ನೇ ತಂಡದಿಂದ ಕೈ ಬಿಟ್ಟಾಗ ಕಣ್ಣೀರು ಹಾಕದೇ ಇದ್ದ ಕ್ರಿಕೆಟ್ ಪ್ರೇಮಿಗಳಿರಲಿಲ್ಲ.. ಕ್ರಿಕೆಟ್​ ನೋಡುವುದನ್ನೇ ಬಿಟ್ಟವರಿಗೂ ಕಡಿಮೆ ಏನಿಲ್ಲ.. ಇಂಥ ದಾದಾ ಈಗ ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ ಟೀಂ ಇಂಡಿಯಾಕ್ಕೆ ಅಂಥದ್ದೇ ಖದರ್ ತಂದಿದ್ದಾರೆ. ಅವರ ಸ್ಟೋರಿ ಯಾವ ಸಿನಿಮಾಗೂ ಕಮ್ಮೀ ಇಲ್ಲ.. ಇಂಥ ಸೌರವ್ ಆತ್ಮ ಚರಿತ್ರೆ ಯಾಕೆ ತೆರೆ ಮೇಲೆ ಬರ್ತಿಲ್ಲ? ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಜರುದ್ದೀನ್, ಸಚಿನ್ ತೆಂಡುಲ್ಕರ್​​, ಎಂ.ಎಸ್‌ ಧೋನಿ  ಇವರೆಲ್ಲರ ಆತ್ಮ ಚರಿತ್ರೆ ಚಲನಚಿತ್ರವಾಗಿ ಬಂದಿದ್ದೂ ಆಯ್ತು.. ಅದ್ರಲ್ಲೂ ಎಂ.ಎಸ್​ ಧೋನಿ ಚಿತ್ರವಂತೂ ಸೂಪರ್​ ಡೂಪರ್ ಹಿಟ್ ಆಗಿ ಸುಶಾಂತ್ ಸಿಂಗ್ ರಾಜಪೂತ್​ರನ್ನ ಸೂಪರ್​ ಸ್ಟಾರ್ ಆಗಿಸಿದ್ದೂ ಆಯ್ತು. ಇಷ್ಟೆಲ್ಲ ಆದ ಮೇಲೆ ಸೌರವದ್ ಸಿನಿಮಾ ಯಾಕೆ ಬರ್ತಿಲ್ಲ? ಅಂತಾ ಅವರ ಅಭಿಮಾನಿಗಳಿಗೆ ಪ್ರಶ್ನೆ ಕಾಡುತ್ತಲೇ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆ ನಿರೀಕ್ಷೆ ಸವಿಯಾಗುವ ಸಮಯ ಬಂದಾಗಿದೆ.

ಹೌದು, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿಯವರ ಬಯೋಪಿಕ್​​ ಸಿನಿಮಾ ಸದ್ಯದಲ್ಲೇ ಸೆಟ್ಟೇರುತ್ತಿದೆ ಎನ್ನಲಾಗಿದೆ. ತಮ್ಮ ಬಯೋಪಿಕ್​ ಸಿನಿಮಾಗೆ ಖುದ್ದು ದಾದಾನೇ ಅನುಮತಿ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

blank

ನನ್ನ ಬಯೋಪಿಕ್​ ಮಾಡಲು ಅನುಮತಿ ನೀಡಿದ್ದೇನೆ. ಸಿನಿಮಾದ ನಿರ್ದೇಶಕ ಯಾರು ಎಂದು ಈಗಲೇ ಹೇಳೋದಿಲ್ಲ. ನನ್ನ ಬಯೋಪಿಕ್​​ ಹಿಂದಿಯಲ್ಲಿ ಮೂಡಿ ಬರಲಿದೆ. ಸದ್ಯದಲ್ಲೇ ಸಿನಿಮಾ ಕುರಿತಾದ ಎಲ್ಲಾ ವಿಚಾರಗಳು ಫೈನಲ್​ ಆಗಲಿವೆ ಎಂದರು ದಾದಾ.

blank

ಇನ್ನು, ದಾದಾ ಬಯೋಪಿಕ್​ ಸಿನಿಮಾಗೆ ದೊಡ್ಡ ಪ್ರೌಡಕ್ಷನ್​ ಹೌಸ್​​ವೊಂದು 200-250 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದೇಳಲಾಗುತ್ತಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ಜಾರಿಯಲ್ಲಿದೆ. ಸೌರವ್​ ಗಂಗೂಲಿ ಪಾತ್ರದಲ್ಲಿ ರಣಬೀರ್​ ಕಪೂರ್​ ನಟಿಸುವ ಸಾಧ್ಯತೆ ಇದೆ.

 

The post ಮತ್ತೊಮ್ಮೆ ಘರ್ಜಿಸಲಿದೆ ಬಂಗಾಳದ ಹುಲಿ; ತೆರೆ ಮೇಲೆ ಬರ್ತಿದೆ ಸೌರವ್​​ ಲೈಫ್ ಸ್ಟೋರಿ appeared first on News First Kannada.

Source: newsfirstlive.com

Source link