ಮಗನ ಸಾಧನೆ ಕಂಡು ಎದೆ ತುಂಬಿ ಕೊಂಡಾಡಿದ ಪ್ರಿಯಾಂಕಾ ವಾದ್ರಾ ದಂಪತಿ

ಮಗನ ಸಾಧನೆ ಕಂಡು ಎದೆ ತುಂಬಿ ಕೊಂಡಾಡಿದ ಪ್ರಿಯಾಂಕಾ ವಾದ್ರಾ ದಂಪತಿ

ನವದೆಹಲಿ: ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಫೋಟೋಗ್ರಫಿಯಲ್ಲಿ ಸಾಧನೆ ಮಾಡಲು ಮುಂದಾಗಿದ್ದು ಇದೇ ಜುಲೈ 11ರಿಂದ 17 ರವರೆಗೆ ನವದೆಹಲಿಯ ಬಿಕನೇರ್ ಹೌಸ್​ನಲ್ಲಿ ತಾನು ಸೆರೆಹಿಡಿದ ಚಿತ್ರಗಳನ್ನ ಪ್ರದರ್ಶನಕ್ಕಿಟ್ಟಿದ್ದಾರೆ. ಈ ಈವೆಂಟ್​ಗೆ ಡಾರ್ಕ್ ಪರ್ಸೆಪ್ಷನ್ ಎಂದು ಹೆಸರಿಟ್ಟಿದ್ದಾರೆ.

blank

ಪುತ್ರ ರೈಹಾನ್ ತನ್ನದೇ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಿಯಾಂಕಾ ಗಾಂಧಿ ಮಗನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪುತ್ರನ ಫೋಟೋ ಎಕ್ಸಿಬಿಷನ್​ನಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಗಾಂಧಿ ಮಗನ ಜೊತೆಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ಫೋಟೊವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನನ್ನ ಮಗ ತನ್ನದೇ ಹಾದಿಯನ್ನ ಹುಡಕಿಕೊಂಡು ತನ್ನ ಗುರಿ ತಲುಪು ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ. ಅವನ ಮೊದಲ ಎಕ್ಸಿಬಿಷನ್ ‘ಡಾರ್ಕ್ ಪರ್ಸೆಪ್ಷನ್.. ಬೆಳಕು, ಬಯಲು ಮತ್ತು ಸಮಯದ ಪ್ರದರ್ಶನ’ ಸದ್ಯ ನವದೆಹಲಿಯ ಬಿಕನೇರ್ ಹೌಸ್ ಬಳಿ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ತಂದೆ ರಾಬರ್ಟ್ ವಾದ್ರಾ ಕೂಡ ಮಗನ ಹೊಸಹಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಗನ ಪೋಟೋಗ್ರಫಿಯನ್ನ ಹಾಡಿಹೊಗಳಿದ್ದಾರೆ. ನಾನು ಯಾವಾಗಲೂ ಅವನ ಜೊತೆಗಿರುತ್ತೇನೆ ಎಂದಿದ್ದಾರೆ.

The post ಮಗನ ಸಾಧನೆ ಕಂಡು ಎದೆ ತುಂಬಿ ಕೊಂಡಾಡಿದ ಪ್ರಿಯಾಂಕಾ ವಾದ್ರಾ ದಂಪತಿ appeared first on News First Kannada.

Source: newsfirstlive.com

Source link