ನಕ್ಷತ್ರ ಪುಂಜಗಳ ನಡುವೆ ಸಂಚರಿಸುವ ಕನಸು ನನಸಾಗಿಸಿಕೊಂಡ ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್

ನಕ್ಷತ್ರ ಪುಂಜಗಳ ನಡುವೆ ಸಂಚರಿಸುವ ಕನಸು ನನಸಾಗಿಸಿಕೊಂಡ ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್

ವಿಶ್ವದಲ್ಲಿ ಮತ್ತೊಂದು ಇತಿಹಾಸವೇ ಸೃಷ್ಟಿಯಾಗಿದೆ. ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದಾರೆ ಈ ಕೋಟ್ಯಾಧಿಪತಿ ಉದ್ಯಮಿ. ಇವರು ಭೂಮಿಯ ಮೇಲೆ ಸುತ್ತಾಟ ನಡೆಸಿಲ್ಲ. ಬದಲಾಗಿ ನಭೋಮಂಡಲದಲ್ಲಿ ಪ್ರವಾಸಕ್ಕೆ ಚಾಲನೆ ನೀಡಿ ಶಹಬ್ಬಾಷ್ ಎನಿಸಿಕೊಂಡಿದ್ದಾರೆ. ಈ ಕೋಟ್ಯಾಧಿಪತಿ ಉದ್ಯಮಿಯೇ ರಿಚರ್ಡ್ ಬ್ರಾನ್ಸನ್. ಇವರು ನಡೆಸಿದ ಅದ್ಭುತ ಯಾನದ ಒಂದು ಡಿಟೇಲ್ ರಿಪೋರ್ಟ್ ನ್ನ ಈ ಸ್ಟೋರಿಯಲ್ಲಿ ನೀಡಿದ್ದಿವಿ.

blank

ವಿಶ್ವದ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್. ಇವರ ಹೆಸರು ಕೇಳದವರೇ ಇಲ್ಲ. ಇವರು ಸಾಮಾನ್ಯ ಉದ್ಯಮಿಯಲ್ಲ. ಸಾಹಸಿ ಉದ್ಯಮಿ. ಇವರು ಸದಾ ಒಂದಿಲ್ಲೊಂದು ಸಾಹಸ ಮಾಡ್ತಾನೇ ಇರ್ತಾರೆ. ಹೆವಿ ರಿಸ್ಕ್ ತೆಗೆದುಕೊಂಡು ತಮ್ಮ ಕನಸುಗಳನ್ನು ಈಡೇರಿಸಿಕೊಳ್ತಾರೆ ರಿಚರ್ಡ್ ಬ್ರಾನ್ಸನ್. ನಿಖರವಾದ ಗುರಿಯೊಂದಿಗೆ ಪ್ರಯಾಣ ಮಾಡ್ತಾರೆ ಈ ಬ್ರಾನ್ಸನ್. ಮೊದ ಮೊದಲು ಇವರಿಗೂ ಗುರಿ ತಪ್ತಾ ಇತ್ತು. ಆದ್ರೆ ಇವರು ಛಲದಂಕ ಮಲ್ಲ. ಅಂದುಕೊಂಡಿದ್ದನ್ನು ಮಾಡಿಯೇ ತೋರಿಸುವ ಅಸಾಮಿ. ಮಹಾನ್ ಕನಸುಗಾರ. ಕೋಟಿ ಕೋಟಿ ಹಣ ಇದ್ರೂ ಕುಳಿತಲ್ಲಿಯೇ ವೈಭೋಗದ ಜೀವನ ನಡೆಸಬೇಕು ಅನ್ನೋದು ಇವರಿಗಿಲ್ಲ. ಏನೇ ಮಾಡಿದರೂ ಇವರದ್ದೊಂದು ಸಾಹಸ. ಈ ಸಾಹಸದ ಭಾಗವೇ ಈಗ ಮಾಡಿರುವ ಗಗನ ಪ್ರವಾಸ. ಮೊದಲೆಲ್ಲ ಉಪಗ್ರಹ ಹಾರಿಸಲೋ, ಸಂಶೋಧನೆ ನಡೆಸಲೋ, ಸರ್ಕಾರದ ವತಿಯಿಂದ ಗಗನ ಯಾನಿಗಳನ್ನು ಕಳಿಸಿ ಕೊಡಲಾಗ್ತಿತ್ತು.  ಭಾರತದ ಕಲ್ಪನಾ ಚಾವ್ಲಾ ನಿಮಗೆ ನೆನಪಿರಬಹುದು. ಆದ್ರೆ ಈ ರಿಚರ್ಡ್ ಬ್ರಾನ್ಸನ್ ತಾವೇ ಗಗನ ಪ್ರವಾಸ ಆಯೋಜಿಸಿ ಸಕ್ಸಸ್ ಆಗಿದ್ದಾರೆ.

ಕಂಡ ಕನಸು ನನಸು ಮಾಡಿಕೊಂಡ ಸಾಹಸಿ ಉದ್ಯಮಿ ಬ್ರಾನ್ಸನ್

ಎಷ್ಟೋ ಜನರಿಗೆ ತನ್ನ ಕನಸಿನ ಪ್ರವಾಸ ಅಂತ ಕೆಲವು ಪ್ರದೇಶಗಳು ಇದ್ದಾವೆ. ತಾವು ಸಿಂಗಾಪೂರಕ್ಕೆ ಹೋಗ್ಬೇಕು, ಸ್ವಿಜರ್ ಲ್ಯಾಂಡ್ ಹೋಗ್ಬೆಕು, ಮಾಲ್ಡೀವ್ಸ್ ಹೋಗ್ಬೇಕು ಅಂತ ದಿನ ಪ್ಲಾನ್ ಮಾಡ್ತಾನೆ ಇರ್ತಾರೆ. ಕೆಲುವೊಮ್ಮೆ ಆ ಪ್ಲಾನ್ ಗಳು ಸಕ್ಸಸ್ ಆಗ್ತವೆ, ಕೆಲುವೊಮ್ಮೆ ಎಲ್ಲೂ ಹೋಗದೆ ಎಲ್ಲ ಪ್ಲಾನ್ ನಿಂತು ಹೋಗ್ತಾವೆ. ಆದ್ರೆ ಎಂದಾದರೊಮ್ಮೆ ನಾವು ನಮ್ಮ ಕನಸಿನ ಜಾಗ, ಡ್ರೀಂ ಡೆಸ್ಟೀನೇಷನ್ ಗೆ ತಲುಪೆ ತಲುಪುತ್ತಿವಿ ಅಂತ ಮನಸಿನಲ್ಲೆ ಗಾಢವಾದ ಆಕಾಂಕ್ಷೆಗಳನ್ನು ಹೊತ್ತಿರುತ್ತಾರೆ. ಹಾಗೆ ಈ ರಿಚರ್ಡ್ ಬ್ರಾನ್ಸನ್ ಗೆ ಇದ್ದ ಕನಸು ನಕ್ಷತ್ರ ಪುಂಜಗಳ ನಡುವೆ ಸಂಚರಿಸಬೇಕು ಅನ್ನೋದು. ನಭೋ ಮಂಡಲದಲ್ಲಿ ತೇಲಾಡಿಕೊಂಡು ಒಂದಿಷ್ಟು ಹೊತ್ತು ಕಳೀಬೇಕು ಅನ್ನೋ ರಿಚರ್ಡ್ ಆಸೆ ನೆರವೇರಿದೆ. ನಕ್ಷತ್ರ ಪುಂಜಗಳ ನಡುವೆ ಅದ್ಭುತವಾದ ಅನುಭವ ಪಡೆದುಕೊಂಡು ಬಂದಿದ್ದಾರೆ ಬ್ರಾನ್ಸನ್. ಯೆಸ್​ ಇವರು ನಡೆಸಿದ ಗಗನ ಪ್ರವಾಸ ಈಗ ವಿಶ್ವವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದೆ.

70 ವರ್ಷದ ರಿಚರ್ಡ್​ರ ಪುಟ್ಟ ಕನಸು ದೊಡ್ಡದಾಗಿ ನನಸಾಯ್ತು

ಸರ್ ರಿಚರ್ಡ್ ಬ್ರಾನ್ಸನ್ ರವರ ಬಗ್ಗೆ ಹೇಳ್ತಾ ಹೋದ್ರೆ ಬಹಳಷ್ಟಿದೆ. ಅವರ ಒಂದೊಂದು ಕನಸುಗಳನ್ನು ನನಸಾಗಿಸಿಕೊಂಡು ಬಂದ ಅವರ ಜರ್ನಿ ನಿಜಕ್ಕೂ ರೋಚಕ. ರಾಟ್ಸ್ ಟು ರಿಚ್ಚಸ್ ಅಂತರಲ್ಲ ಹಾಗೆ ಹಂತ ಹಂತವಾಗಿ ಬೆಳೆದು ನಿಂತವರು. ವಿಮಾನ ಆಕಾಶದಲ್ಲಿ ಹಾರುವುದನ್ನು ನೋಡಿ, ಅಂತಹ ವಿಮಾನವನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಬಹು ದೊಡ್ಡ ಆಸೆ ಹೊತ್ತಿದ್ದ ರಿಚರ್ಡ್ ಕಾಲ ಕಳೆದಂತೆ ಅಂತಹ ಎಷ್ಟೊ ವಿಮಾನಗಳನ್ನು ತನ್ನದಾಗಿಸಿಕೊಂಡಿದ್ದರು. ಹೌದು ಅಮೆರಿಕಾದ ವರ್ಜಿನ್ ಏರ್ ಲೈನ್ಸ್ ನ ಮಾಲೀಕ ಸರ್ ರಿಚರ್ಡ್ ಬ್ರಾನ್ಸನ್. ತನ್ನ ಜೀವಮಾನದಲ್ಲಿ ಏನ್ನಾದರು ಅಡ್ವೆಂಚರ್ ಮಾಡ್ತಲೇ ಇರ್ಬೇಕು ಎನ್ನುವ ಹೆಬ್ಬಯಕೆ ಆತನನ್ನು ಕಾಡ್ತಾನೆ ಇತ್ತು. ಆಗ ಅವರಿಗೆ ನೆನಪಿನಲ್ಲಿ ಉಳಿದಿದ್ದೆ ಚಿಕ್ಕ ವಯಸ್ಸಿನ ಕನಸು ಬಾಹ್ಯಾಕಾಶ ಯಾತ್ರೆ. ಅದೆಷ್ಟೋ ವರ್ಷಗಳ ಪರಿಶ್ರಮದ ಬಳಿಕ ತನ್ನ 70ನೇ ವಯಸ್ಸಗೆ ಆ ಹೆಬ್ಬಯಕೆ ನನಸಾಗಿದೆ. ಯಶಸ್ವಿಯಾಗಿ ಅಂತರಿಕ್ಷಯಾನವನ್ನು ಮುಗಿಸಿ ಬಂದಿದ್ದಾರೆ ರಿಚರ್ಡ್ ಆ್ಯಂಡ್ ಟೀಂ.

ವಿಶ್ವದ ಸ್ಪೇಸ್ ರೇಸ್​ನಲ್ಲಿ ಗೆದ್ದ 6 ಜನ ಅಂತರಿಕ್ಷಯಾನಿಗಳು

ಹೌದು! ಬಾಹ್ಯಾಕಾಶ ತಲುಪುವುದು ಅಷ್ಟು ಸುಲಭದ ವಿಚಾರವೇ ಅಲ್ಲ. ಈ ಒಂದು ಪ್ರವಾಸಕ್ಕೆ ನಾಸಾ ಸೇರಿದಂತೆ ಭಾರತದ ಇಸ್ರೋ ಮತ್ತು ಹಲವು ಬಾಹ್ಯಾಕಾಶ ಸಂಸ್ಥೆಗಳು ರೇಸ್ ನಲ್ಲಿದ್ದವು. ಆದರೆ ರಿಚರ್ಡ್ ಖಾಸಗಿಯಾಗಿ ತನ್ನ 5 ಜನ ಆಂತರಿಕ್ಷಯಾನಿಗಳ ಟೀಂ ಜೊತೆ ಭೂಮಿಯನ್ನ ದಾಟಿ ಅಂತರಿಕ್ಷದ ಪ್ರವಾಸ ಮಾಡಿ ಮುಗಿಸಿಯೇ ಬಿಟ್ಟಿದ್ದಾರೆ.

blank

ರಿಚರ್ಡ್ ಬ್ರಾನ್ಸನ್ ಅವರೇ ಸಂಸ್ಥಾಪಿಸಿದ ವರ್ಜಿನ್​ ಗ್ಯಾಲಕ್ಟಿಕ್ (Virgin Galactic) ​ ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಮ್​ಎಸ್​ ಯುನಿಟಿ (VMS Unity) ಗಗನ ನೌಕೆಯಲ್ಲಿ ನೆನ್ನೆ ರಾತ್ರಿ ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಹೊಸ ಇತಿಹಾಸವನ್ನೆ ಬರೆದಿದ್ದಾರೆ. ಇವರ ಈ ಅಂತರಿಕ್ಷಯಾನಕ್ಕೆ ವಿಶ್ವವೇ ಬೆರಗಾಗಿ, ಇಡಿ ಟೀಂಗೆ ಶುಭ ಕೋರುತ್ತಿದ್ದಾರೆ.

ಸ್ಪೇಸ್ ಪ್ಲೈಟ್ ಗೆ ರಿಚರ್ಡ್ ತಾಯಿಯ ಹೆಸರು ನಾಮಕರಣ

ತಾನು ಚಿಕ್ಕ ಹುಡುಗನಾದಾಗಿನಿಂದ ತನ್ನ ತಾಯಿ ರಿಚರ್ಡ್ ರಲ್ಲಿ ಬಾಹ್ಯಾಕಾಶದ ಕನಸುಗಳನ್ನು ಹುಟ್ಟಿಸಿದ್ದಾರೆ. ಆ ಅಂತರಿಕ್ಷದ ಕಲ್ಪನೆಯನ್ನು ಕಥೆಗಳಲ್ಲಿ ಹೇಳಿ, ರಿಚರ್ಡ್ ರ ಬಾಹ್ಯಾಕಾಶದ ಕನಸಿಗೆ ಉತ್ತೆಜಿಸಿದ್ದಾರೆ. ಇದೆ ಕಾರಣಕ್ಕೆ ತನ್ನ ಕನಸಿನ ಯಾತ್ರೆಗೆ, ರಿಚರ್ಡ್ ಅವರ ತಾಯಿಯ ಹೆಸರನ್ನೆ ನಾಮಕರಣ ಮಾಡಿದ್ದಾರೆ. ಇದೆ ವಿ.ಎಮ್.ಎಸ್ ಯುನಿಟಿಯಲ್ಲಿ ನಭದಿಂದ ಭೂಮಿಗೆ ಲ್ಯಾಂಡ್ ಆಗಿ ತನ್ನ ಕನಸನ್ನು ಸಾಕಾರಗೊಳಿಸಿದ್ದಾರೆ.

ಜಂಟಿ ಪ್ಲೈಟ್ ಗಳಿಂದ ಟೇಕ್ ಆಫ್, ಒಂಟಿಯಾಗಿ ರಿಟರ್ನ್

ವಿಎಮ್​ಎಸ್​ ಯುನಿಟಿ ಒಂದು ಪ್ರಯಾಣಿಕರ ರಾಕೆಟ್​ ವಿಮಾನ. ಬಾಹ್ಯಾಕಾಶ ಪ್ರವಾಸಕ್ಕಾಗಿ ಎಂದೇ ವರ್ಜಿನ್​ ಗ್ಯಾಲಕ್ಟಿಕ್ ಕಂಪನಿಯಿಂದ ವಿನ್ಯಾಸಗೊಳಿಸಲಾಗಿದೆ. ಭೂಮಿಯಿಂದ ಹೊರ ದಾಟಿ 59 ಕೀಲೋ ಮೀಟರ್ ವರೆಗೆ ಪ್ರಯಾಣ ಮಾಡಬೇಕು ಎನ್ನುವುದು ರಿಚರ್ಡ್ ಅವರ ಪ್ಲಾನ್. ಈ ಪ್ಲಾನ್ ನಡೆಯ ಬೇಕೆಂದರೆ ಸಾಕಷ್ಟು ಇಂಧನದ ಅಗತ್ಯ ಬೀಳುತ್ತದೆ. ಅದಕ್ಕಾಗಿಯೇ, ಜಂಟಿ ವಿಮಾನ ತಂತ್ರಜ್ಞಾನವನ್ನು ವರ್ಜಿನ್ ಸಂಸ್ಥೆ ಡಿಸೈನ್ ಮಾಡಿದೆ. ಇದು ಅವಳಿ ವಿಮಾನ, ಎರಡು ಅವಳಿಗೂ ಪ್ರತ್ಯೇಕ ಇಂಜಿನ್ ಗಳಿರುತ್ತದೆ. ಇವೆರಡರ ಮದ್ಯೆ ವಿಎಮ್​ಎಸ್​ ಯುನಿಟಿ ರಾಕೆಟ್ ಅನ್ನು ಅಳವಡಿಸಲಾಗಿದೆ. ಮೊದಲಿಗೆ ಈ ಅವಳಿ ವಿಮಾನ ನೆಲದಿಂದ ಬಹು ದೂರ ಆಕಾಶಕ್ಕೆ ವಿ.ಎಮ್.ಎಸ್ ರಾಕೆಟ್ ಅನ್ನು ಕರೆದೊಯ್ಯುತ್ತದೆ. ಈ ಪ್ರಾಯಾಣದಲ್ಲಿ ಎರಡು ಇಂಜಿನ್ ಮಾತ್ರ ಚಾಲ್ತಿಯಲ್ಲಿರುತ್ತೆ. ನಡು ಆಕಾಶದ ಮದ್ಯೆ ರಾಕೆಟ್ ಅವಳಿ ವಿಮಾನದಿಂದ ದೂರಾಗಿ, ತನ್ನ ಇಂಜಿನ್ ಮೂಲಕ ಆಕಾಶವನ್ನು ದಾಟಿ ಬಾಹ್ಯಾಕಾಶಕ್ಕೆ ಮುನ್ನುಗ್ಗುತ್ತದೆ.

ನೆಲೆದಿಂದ ನಭಕ್ಕೆ ನಡೆದ ಸುದೀರ್ಘ ಜರ್ನಿ ಹೇಗಿತ್ತು ಗೊತ್ತಾ ?

ಭಾನುವಾರ ಸಂಜೆ 6.30ಕ್ಕೆ ‘ವಿಎಸ್‌ಎಸ್‌ ಯುನಿಟಿ’ ಮತ್ತು ಅದನ್ನು ಆಗಸಕ್ಕೆ ಕೊಂಡೊಯ್ಯುವ ‘ವಿಎಂಎಸ್‌ ಈವ್‌’ ಹಾರಾಟ ಆರಂಭಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಹಾರಾಟವನ್ನು 2 ಗಂಟೆ ಮುಂದೂಡಲಾಯಿತು. ಹೀಗಾಗಿ ರಾತ್ರಿ 8.15ರ ವೇಳೆಗೆ ನ್ಯೂ ಮೆಕ್ಸಿಕೋದಿಂದ 6 ಯಾತ್ರಿಗಳನ್ನು ಹೊತ್ತ ವಿಎಸ್‌ಎಸ್‌ ಯುನಿಟಿ ನೌಕೆಯನ್ನು ವಿಎಸ್‌ಎಸ್‌ ಈವ್‌ ವಿಮಾನ ಆಗಸಕ್ಕೆ ಕೊಂಡೊಯ್ಯಿತು. ಸಂಚಾರ ಆರಂಭಿಸಿ ಕೆಲ ನಿಮಿಷಗಳಲ್ಲಿ 50 ಸಾವಿರ ಅಡಿ ಎತ್ತರಕ್ಕೆ ತಲುಪಿದ ಬಳಿಕ ಈವ್‌ ನೌಕೆಯಿಂದ ಯುನಿಟಿ ಪ್ರತ್ಯೇಕಗೊಂಡಿತು. ನೌಕೆಯು ಭೂಮಿಯಿಂದ 3 ಲಕ್ಷ ಅಡಿಗಳ ಎತ್ತರ ತಲುಪಿದ ಬಳಿಕ ಬ್ರಾನ್ಸನ್‌ ಸೇರಿ ಎಲ್ಲ 6 ಮಂದಿ ಯಾತ್ರಿಕರು 4 ನಿಮಿಷಗಳ ಕಾಲ ನಿರ್ವಾತದ ಅನುಭವ ಪಡೆದು ಆನಂದ ಪುಳಕಿತರಾದರು. ಬಳಿಕ ವಿಎಸ್‌ಎಸ್‌ ಯುನಿಟ್‌ ನೌಕೆಯ ಮೂಲಕವೇ ಎಲ್ಲಾ ಆರು ಜನರು ಭೂಮಿಗೆ ಹಿಂದಿರುಗಿದರು.

ಗಗನಯಾತ್ರಿಯಾಗಿ ಅದ್ಭುತಯಾನದಲ್ಲಿ ಭಾರತೀಯಳು ಭಾಗಿ
ಆಂಧ್ರ ಮೂಲದ ಶಿರಿಶಾ ಬಾಂಡ್ಲಾ ದೇಶದ ಹೆಮ್ಮೆಯ ಆಸ್ಟ್ರಾನಾಟ್

ಈ ಪ್ರವಾಸದಲ್ಲಿ ಇಬ್ಬರು ಪೈಲೆಟ್​ ಸೇರಿ ರಿಚರ್ಡ್ ಜೊತೆ 3 ಜನ ಆಸ್ಟ್ರಾನಾಟ್ ಗಳು ಅಂತರಿಕ್ಷಯಾನದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿ ಭಾರತದ ಹೆಮ್ಮೆಯ ಶಿರಿಶಾ ಬಾಂಡ್ಲಾರವರು ಕೂಡ ಒಬ್ಬರು. ಈಗಾಗಲೇ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಇಬ್ಬರು ಬಾಹ್ಯಾಕಾಶ ತಲುಪಿದ ಭಾರತೀಯ ಮಹಿಳೆಯರಾಗಿ ಪ್ರಚಲಿತರಾಗಿದ್ದರು. ಈ ಪಟ್ಟಿಗೆ ಬಾಹ್ಯಾಕಾಶ ಪ್ರವಾಸ ಕೈಗೊಂಡ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹಿರಿಮೆಗೆ ಶಿರಿಶಾ ಬಾಂಡ್ಲಾ ಪಾತ್ರರಾಗಿದ್ದಾರೆ. ಶಿರಿಶಾ ಮೂಲತಃ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಟೆಕ್ಸಾಸ್​​ನ ಹೂಸ್ಟನ್​​ನಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿದ್ದಾರೆ. ಶಿರಿಶಾ ಅವರು ಜನವರಿ 2021 ರಲ್ಲಿ ವರ್ಜಿನ್‌ ಗ್ಯಾಲಾಕ್ಟಿಕ್‌ ಸಂಸ್ಥೆಗೆ ಸರ್ಕಾರಿ ವ್ಯವಹಾರ ಮತ್ತು ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದರು. ಇದೀಗ ಗುಂಟೂರಿನಿಂದ ಗಗನದವರೆಗೆ ತೆರಳಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಇವರ ಈ ದೈರ್ಯ ಸಾಹಸ ಮೆಚ್ಚಿ ಭಾರತದ ಹಲವು ರಾಜಕಾರಣಿಗಳು ಶುಭ ಕೋರಿದ್ದರೆ.

ಬಾಹ್ಯಾಕಾಶ ಪ್ರವಾಸ ಮಾಡಲು ಇದೆ ಎಲ್ಲರಿಗೂ ಅವಕಾಶ

ಯೋಜನೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರಿಚರ್ಡ್ ತಾವೆ ಮೊದಲಿಗರಾಗಿ ಹಾರಾಟ ನಡೆಸಿ ಬಂದಿದ್ದಾರೆ. ವಾಸ್ತವವಾಗಿ ಈ ಹಾರಾಟದಲ್ಲಿ ಬ್ರಾನ್ಸನ್‌ ಸಾಗುವ ಯೋಜನೆ ಮೊದಲಿಗೆ ಇರಲಿಲ್ಲ. ಆದರೆ ಈ ಒಂದು ಪ್ರವಾಸವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಬೇಕು, ಎಲ್ಲರೂ ಈ ಪ್ರವಾಸವನ್ನು ತಮ್ಮ ಲೈಫ್ ಟೈಮ್ ನಲ್ಲಿ ಒಮ್ಮೆಯಾದರು ಅನುಭವಿಸಬೇಕು ಎನ್ನುವ ಮನೋಭಾವದಿಂದ ತಾವೆ ಖದ್ದಾಗಿ ಹೋಗಿ ಬಂದಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಿಂದ ಈ ಪ್ರವಾಸದ ಬಗ್ಗೆ ಇನಷ್ಟು ಮಾಹಿತಿ ಹೊರ ಹಾಕಲಿದ್ದಾರೆ ರಿಚರ್ಡ್. ಅಲ್ಲದೆ ಒಮ್ಮೆ ಪ್ರವಾಸ ಮಾಡಲು ಒಬ್ಬರಿಗೆ 2.5 ಲಕ್ಷ ಡಾಲರ್ ಹಣವನ್ನು ನಿಗಧಿಸಿದ್ದಾರೆ. ಮುಂದಿನ ಬಾಹ್ಯಾಕಾಶ ಪ್ರವಾಸಕ್ಕೆ ಈಗಾಗಲೇ ಹಲವು ಉದ್ಯಮಿಗಳು, ಹಾಲಿವುಡ್ ಸ್ಟಾರ್ಸ್ ಗಳು ಸೇರಿ 600 ಅಪ್ಲಿಕೇಷನ್​ಗಳು ಕಾಯ್ದಿರಿಸಿದ್ದಾರೆ. ಆದರೆ ಮುಂದಿನ ಜರ್ನಿಯ ಪ್ರವಾಸಿಗ ಎಂದು ಅಮೇಜಾನ್ ಮಾಲೀಕ ಜೆಫ್‌ ಬೆಜೋಸ್‌ ರನ್ನು ವರ್ಜಿನ್ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ರಿಚರ್ಡ್ ರವರು ಕೈಗೊಂಡ ಈ ಪ್ರವಾಸ ಮುಂದೆ ಬಾಹ್ಯಾಕಾಶ ಪ್ರವಾಸೋಧ್ಯಮಕ್ಕೆ ಒಂದು ಮೈಲುಗಲ್ಲು ಎಂದರೆ ತಪ್ಪಾಗಲಾರದು.

blank

ಆಕಾಶವನ್ನು ಮೀರಿ ಏನಿರ ಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಬುಕ್ ಗಳಲ್ಲಿ ಇರುವುದನ್ನು ಕೇಳಿ, ಸ್ಯಾಟಿಲೈಟ್ ತೋರಿದ ದೃಶ್ಯಗಳನ್ನು ನೋಡಿ ನಮ್ಮದೇ ಆದ ಕಲ್ಪನಾ ಲೋಕದಲ್ಲಿ ಎಲ್ಲರು ಆ ಒಂದು ಲೋಕವನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಇದೀಗ ಎಲ್ಲವೂ ನನಸಾಗುವ ಕಾಲ ಹತ್ತಿರಬಂದಿದೆ. ಎಷ್ಟೋ ವರ್ಷ ಈ ಒಂದು ಪ್ರವಾಸಕ್ಕೆ ಹಲವು ಸಂಸ್ಥೆ ಸೆಣಸಾಡಿದ್ದು. ಸತತ 17 ವರ್ಷಗಳ ಶ್ರಮದಿಂದ ಈ ಪ್ರವಾಸ ಯಶಸ್ವಿಯಾಗಿದೆ. ಈ ಪ್ರವಾಸ ಮುಗಿದ ಬಳಿಕ 4 ಜನ ಗಗನಯಾನಿಗಳನ್ನು ಅಧಿಕೃತವಾಗಿ ಆಸ್ಟ್ರೋನಟ್ ಎಂದು ಘೋಷಿಸಿ, ಶಾಫೇಂನ್ ಸಿಡಿಸಿ ರಿಚರ್ಡ್ ಸಂತಸ ವ್ಯಕ್ತ ಪಡಿಸಿದರು. ಇವರ ಈ ಸಾಧನೆಗೆ, ಎಷ್ಟೋ ವರ್ಷದ ಕನಸಿಗೆ ದೇಶ-ವಿದೇಶದಿಂದ ಅಭಿನಂದನೆಗಳು ವ್ಯಕ್ತವಾಗ್ತ ಇದೆ. ಇನ್ನು ಹಲವುರು ಈ ಪ್ರವಾಸದಲ್ಲಿ ಭಾಗಿಯಾಗಲು ಕಾತುರರಾಗಿದ್ದಾರೆ.

ಬಾಹ್ಯಾಕಾಶದ ಈ ಒಂದು ಪ್ರಯಾಣ, ಎಲ್ಲರಿಗೂ ಆಚ್ಚರಿ ಮೂಡಿಸಿದೆ. ಅಂತರಿಕ್ಷದಲ್ಲಿ ಏನೆಲ್ಲ ಇದೆ, ನಾವು ಪಾಠಗಳಲ್ಲಿ ಓದಿದ್ದು ಎಷ್ಟು ಸತ್ಯಾ ? ಅಲ್ಲೋಂದು ಲೋಕ ಹೇಗಿದೆ ನೋಡಲೆ ಬೇಕು ಎನ್ನುವ ಕಾತುರತೆ ಎಲ್ಲರಲ್ಲೂ ಹೆಚ್ಚಿಸಿದೆ. ಈ ಒಂದು ಸಾಹಸಕ್ಕೆ ಕೈಹಾಕಿದ ರಿಚರ್ಡ್ ಬ್ರಾನ್ಸನ್ ರವರಿಗೆ ವಿಶ್ವವೇ ಸಲಾಮ್ ಹೊಡಿತಾ ಇದೆ.

The post ನಕ್ಷತ್ರ ಪುಂಜಗಳ ನಡುವೆ ಸಂಚರಿಸುವ ಕನಸು ನನಸಾಗಿಸಿಕೊಂಡ ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್ appeared first on News First Kannada.

Source: newsfirstlive.com

Source link