ರಾಕ್​ಲೈನ್​ ಜೊತೆಗಿನ ಪೋಟೋ ಬಗ್ಗೆ ಇಲ್ಲ ಸಲ್ಲದ ಮಾತು; ಈ ಬಗ್ಗೆ ಸುಮಲತಾ ಹೇಳಿದ್ದೇನು?

ರಾಕ್​ಲೈನ್​ ಜೊತೆಗಿನ ಪೋಟೋ ಬಗ್ಗೆ ಇಲ್ಲ ಸಲ್ಲದ ಮಾತು; ಈ ಬಗ್ಗೆ ಸುಮಲತಾ ಹೇಳಿದ್ದೇನು?

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಮತ್ತು ರಾಕ್​ಲೈನ್​ ವೆಂಕಟೇಶ್ ಜೊತೆಗಿರುವ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೆ ರಾಕ್‌ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಅಲ್ಲದೇ ಯಾವುದೋ ಫೋಟೋಗಳನ್ನು ಇಟ್ಟುಕೊಂಡು ವೈರಲ್​ ಮಾಡ್ತಿದ್ದಾರೆ.. ಆ ಬಗ್ಗೆ ಮಾತನಾಡಲಾಗ್ತಿದೆ ಅಂತಾ ಕೂಡ ವಾಗ್ದಾಳಿ ನಡೆಸಿದ್ರು. ಇಂದು ಆ ವಿಚಾರ ಕುರಿತು ಸುಮಲತಾ ಪ್ರತಿಕ್ರಿಯಿಸಿದ್ದು, ನಾನು  ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇದೀನಿ. ಇಂಥಾ ಒಂದಲ್ಲ ಸಾವಿರಾರು, ಲಕ್ಷಾಂತರ ಫೋಟೋಸ್ ಇದೆ. ನಾವು ಸಿನಿಮಾದಲ್ಲಿ ಮಾಡಿದ ಹಾಡು ಡ್ಯಾನ್ಸ್ ಇದೆ. ಎಲ್ಲವುದನ್ನೂ ಹಾಕೋದಕ್ಕೆ ಹೇಳಿ ಎಂಟರ್ಟೈನ್ಮೆಂಟ್ ಆದ್ರೂ ಸಿಗುತ್ತೆ ಎಂದು ಸುಮಲತಾ ಖಾರವಾಗಿಯೇ ಹೇಳಿದ್ದಾರೆ.

The post ರಾಕ್​ಲೈನ್​ ಜೊತೆಗಿನ ಪೋಟೋ ಬಗ್ಗೆ ಇಲ್ಲ ಸಲ್ಲದ ಮಾತು; ಈ ಬಗ್ಗೆ ಸುಮಲತಾ ಹೇಳಿದ್ದೇನು? appeared first on News First Kannada.

Source: newsfirstlive.com

Source link