ಸಿಲಿಕಾನ್​ ಸಿಟಿಯಲ್ಲಿ ವಾಲಿದ ಮೂರು​ ಅಂತಸ್ತಿನ ಕಟ್ಟಡ : BWSSB ಇದಕ್ಕೆ ಹೊಣೆ ಎಂದ ಮಾಲೀಕರು

ಸಿಲಿಕಾನ್​ ಸಿಟಿಯಲ್ಲಿ ವಾಲಿದ ಮೂರು​ ಅಂತಸ್ತಿನ ಕಟ್ಟಡ : BWSSB ಇದಕ್ಕೆ ಹೊಣೆ ಎಂದ ಮಾಲೀಕರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೂರಂತಸ್ತಿನ ಕಟ್ಟಡ ವಾಲಿರೋ ಘಟನೆ ರಾಜಾಜಿನಗರ 6 ನೇ ಬ್ಲಾಕ್​ನಲ್ಲಿ ನಡೆದಿದೆ. ಗೋವಿಂದರಾಜು ಎಂಬುವರಿಗೆ ಸೇರಿದ ಕಟ್ಟಡ ಸಂಪೂರ್ಣವಾಗಿ ವಾಲಿದೆ.

ಬಿಡಬ್ಲ್ಯುಎಸ್ಎಸ್​ಬಿ ಕಾಮಗಾರಿ ವೇಳೆ ಬಿಲ್ಡಿಂಗ್ ಪಾಯ ಡ್ಯಾಮೇಜ್ ಆಗಿದೆ. ಪಾಯದ ಕಲ್ಲು ಕಿತ್ತಿದ್ದರಿಂದ ಕಟ್ಟಡ ವಾಲಿದ್ದು, ಎರಡೂ ಕಡೆ ಸದ್ಯ ರಸ್ತೆಯನ್ನ ಪೊಲೀಸರು ಬಂದ್ ಮಾಡಿದ್ದಾರೆ. ಸ್ಥಳಕ್ಕೆ ಎಂಜಿಯರ್​ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಿಲ್ಡಿಂಗ್​ಗೆ ಕಬ್ಬಿಣದ ರಾಡ್​ಗಳಿಂದ ಸಪೋರ್ಟ್ ಕೊಡಲಾಗಿದೆ. ಇನ್ನು, ಅಕ್ಕಪಕ್ಕದ ಮನೆಯವರು, ಬಿಲ್ಡಿಂಗ್​ ನಮ್ಮ ಶೆಡ್​ ಮೇಲೆ ಬೀಳಲಿದೆ, ದಯವಿಟ್ಟಯ ಸರಿಪಡಿಸಿ ಅಂತ ಕಣ್ನೀರಿಡುತ್ತಿದ್ದಾರೆ.

ಈ ಮನೆ‌ ಗೋವಿಂದರಾಜು ಎಂಬುವರಿಗೆ ಸೇರಿದ್ದು, ಬಿಲ್ಡಿಂಗ್ ಕ್ರ್ಯಾಕ್ ಆಗಿದ್ದು ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆಯಿದೆ. ಮಾಲೀಕರಿಗೆ ಕಾಲ್​ ಮಾಡಿದ್ರೆ, ಅವ್ರು  BWSSB ಅವ್ರು ಪೈಪ್ ಅಳವಡಿಸುವಾಗ ಆಗಿರೋ ಘಟನೆಯಿದು, ನೇರವಾಗಿ ಪಾಯಕ್ಕೆ ಟಚ್ ಮಾಡಿದ್ದಾರೆ.. ಈಗಾಗಲೇ BWSSB ಗೆ ಕಂಪ್ಲೇಂಟ್ ಕೊಟ್ಟಿದ್ದೇವೆ. ಸರಿ ಮಾಡಿಕೊಡ್ತೀವಿ ಅಂದಿದ್ದಾರೆ ಅಂತ ನ್ಯೂಸ್​ಫಸ್ಟ್​ಗೆ ಹೇಳಿಕೆ ನೀಡಿದ್ದಾರೆ.

The post ಸಿಲಿಕಾನ್​ ಸಿಟಿಯಲ್ಲಿ ವಾಲಿದ ಮೂರು​ ಅಂತಸ್ತಿನ ಕಟ್ಟಡ : BWSSB ಇದಕ್ಕೆ ಹೊಣೆ ಎಂದ ಮಾಲೀಕರು appeared first on News First Kannada.

Source: newsfirstlive.com

Source link