ದಕ್ಷಿಣ ಕನ್ನಡ.. ಚಿಕ್ಕಮಗಳೂರು ಜನರೇ ಎಚ್ಚರ.. ಬೆಂಗಳೂರಿನಲ್ಲೂ ಸುರಿಯಲಿದೆ ಜೋರು ಮಳೆ

ದಕ್ಷಿಣ ಕನ್ನಡ.. ಚಿಕ್ಕಮಗಳೂರು ಜನರೇ ಎಚ್ಚರ.. ಬೆಂಗಳೂರಿನಲ್ಲೂ ಸುರಿಯಲಿದೆ ಜೋರು ಮಳೆ

ದಕ್ಷಿಣ ಕನ್ನಡ: ಇಂದು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ ಅಂತ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಒಳನಾಡಿನ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಿದೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 9ಸೆಂಟಿಮೀಟರ್ ಮಳೆಯಾಗಿದೆ. ಅಷ್ಟೇ ಅಲ್ಲ, ಪಣಂಬೂರು ಮಂಗಳೂರಿನಲ್ಲಿ 8 ಸೆಂಟಿಮೀಟರ್ ಮಳೆ, ಸುಬ್ರಹ್ಮಣ್ಯದಲ್ಲಿ 7 ಸೆಂಟಿಮೀಟರ್ ಮಳೆಯಾಗಿದೆ. ಸದ್ಯದ ಹವಾಮಾನದ ಸ್ಥಿತಿ ಸರ್ಕ್ಯೂಲೇಷಲ್​ ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಓರಿಸಾದಲ್ಲಿ ಇದ್ದು 5.8km ಎತ್ತರದಲ್ಲಿ ಇದೆ. ಸೌರಾಷ್ಟ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ, ಇದ್ರ ಪರಿಣಾಮ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿಯಲ್ಲಿ ವ್ಯಾಪಾಕ ಮಳೆಯಾಗಲಿದೆ ಅಂತ ಹೇಳಿದ್ದಾರೆ.

ಜುಲೈ 13ರಿಂದ ಜುಲೈ ‌17ರವರೆಗೆ ಮಳೆಯಾಗಲಿದೆ. ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ , ಚಿಕ್ಕಮಗಳೂರು,ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅರ್ಲಟ್ ನೀಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲ್ಬುರ್ಗಿ, ಯಾದಗಿರಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಕೊಟ್ಟಿದ್ದು, ಬೆಂಗಳೂರು ಜಿಲ್ಲೆಯಲ್ಲಿ ಮುಂದಿನ ಎರಡು ದಿನಾ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂತಲೂ,ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿಕೆ ನೀಡಿದ್ದಾರೆ.

 

The post ದಕ್ಷಿಣ ಕನ್ನಡ.. ಚಿಕ್ಕಮಗಳೂರು ಜನರೇ ಎಚ್ಚರ.. ಬೆಂಗಳೂರಿನಲ್ಲೂ ಸುರಿಯಲಿದೆ ಜೋರು ಮಳೆ appeared first on News First Kannada.

Source: newsfirstlive.com

Source link