‘ಅರೇ ವಿಡಿಯೋನಾ.. ಇರೀ ಇರೀ ಬಂದೇ ಅಂತ, ಜಿಗಿದು ಬಂದ ಆನೆ ಮರಿ’

‘ಅರೇ ವಿಡಿಯೋನಾ.. ಇರೀ ಇರೀ ಬಂದೇ ಅಂತ, ಜಿಗಿದು ಬಂದ ಆನೆ ಮರಿ’

ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು, ನಾಯಿಗಳ ವಿಡಿಯೋ ಎಷ್ಟ್​ ನೋಡಿದ್ರೂ ಸಾಕಾಗಲ್ಲ. ದಿನ ನಾವು, ಅಂಥ ವಿಡಿಯೋಗಳನ್ನ ಇನ್​ಸ್ಟಾಗ್ರಾಮ,ಫೇಸ್​ಬುಕ್​ನಲ್ಲಿ ನೋಡಿ ಖುಷಿ ಪಡ್ತೀವಿ. ಅಂಥ್ರದಲ್ಲಿ, ಆನೆಗಳು ಕೂಡ ತುಂಬಾ ಖುಷಿ ಪಡಿಸ್ತಾವೆ. ದಿನದಿಂದ ದಿನಕ್ಕೆ ಆನೆಗಳ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ತುಂಬಾ ವೈರಲ್​ ಆಗ್ತಾಯಿರೋದನ್ನ ನಾವು ನೊಡ್ತಾಯಿದ್ದೀವಿ. ಇವತ್ತು ವೈರಲ್​ ಆಗಿರೋ ವಿಡಿಯೋನ ನೀವೂ ನೋಡಿದ್ರೆ, ‘ಎಷ್ಟ್​ ಮುದ್ದು ಇದು’ ಅಂತೀರ!.

ವಿಡಿಯೋ ಮಾಡ್ತಾಯಿದ್ದಾರೆ ಅನ್ನೋ ಖುಷಿ!

ಸಮೂಯಿ ಎಲೆಫಾಂಟ್​ ಹ್ಯಾವೆನ್​ ಅನ್ನೋ ಇನ್ಸ್​ಟಾ ಪೇಜ್​, ಥೈಲ್ಯಾಂಡ್​ನ ಕೋ ಸಾಮೂಯಿ ಅನ್ನೋ ಆನೆಗಳ ಶಿಬಿರದಲ್ಲಿ ಲೂನಾ ಅನ್ನೋ ಪುಟ್ಟ ಆನೆ ಮರಿ ತನ್ನ ಅಮ್ಮನ ಜೊತೆ ಆಟ ಆಡ್ತಾ ಎಗರಾಡ್ತಾ, ವಿಡಿಯೋ ಮಾಡ್ತಾಯಿದ್ದಾರೆ ಬಾ ಅಮ್ಮಾ! ಅಂತ ಹೇಳಿ, ಓಡಿ ಓಡಿ ಕ್ಯಾಮೆರಾ ಪರ್ಸನ್​ ಬಳಿ, ಬಂದು ಸೊಂಡಿಲನ್ನ ಅಲ್ಲಾಡಿಸಿ ವಾಪಸ್​ ಹೋಗಿರೋ ವಿಡಿಯೋ ಈಗ ತುಂಬಾ ವೈರಲ್​ ಆಗ್ತಾಯಿದೆ.

The post ‘ಅರೇ ವಿಡಿಯೋನಾ.. ಇರೀ ಇರೀ ಬಂದೇ ಅಂತ, ಜಿಗಿದು ಬಂದ ಆನೆ ಮರಿ’ appeared first on News First Kannada.

Source: newsfirstlive.com

Source link