ಅನಂತ್ ನಾಗ್​ಗೆ ಪದ್ಮ ಪ್ರಶಸ್ತಿ; ಅಭಿಯಾನ ಆರಂಭಿಸಿದ ರಿಶಬ್, ರಕ್ಷಿತ್ ಶೆಟ್ಟಿ

ಅನಂತ್ ನಾಗ್​ಗೆ ಪದ್ಮ ಪ್ರಶಸ್ತಿ; ಅಭಿಯಾನ ಆರಂಭಿಸಿದ ರಿಶಬ್, ರಕ್ಷಿತ್ ಶೆಟ್ಟಿ

ಬೆಂಗಳೂರು: ಹಿರಿಯ ನಟ ಅನಂತ್ ನಾಗ್​ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅಭಿಯಾನವೊಂದನ್ನ ಪ್ರಾರಂಭಿಸಿದ್ದಾರೆ.

blank

ಸೋಷಿಯಲ್ ಮೀಡಿಯಾದಲ್ಲಿ ಅನಂತ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತರ ಅಭಿಯಾನ ಪ್ರಾರಂಭಿಸಿರುವ ರಿಶಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ.. ಒಂದು ಒಕ್ಕಣೆಯನ್ನೂ ಬರೆದುಕೊಂಡಿದ್ದಾರೆ. ಒಕ್ಕಣೆಯಲ್ಲಿ ಪದ್ಮತ್ರಯ ಪ್ರಸ್ತಿಗಳಿಗೆ ಆಯ್ಕೆ ವಿಚಾರದಲ್ಲಿ ಪ್ರಜೆಗಳೇ ತೀರ್ಪುರಾಗಬೇಕೆಂದು ಪ್ರಧಾನಿಗಳು ಉದ್ದೇಶಿಸಿದ್ದಾರೆ. ಅರ್ಹ ಪ್ರತಿಭೆಗಳ ಕೈ ಸೇರಿದಾಗಲೇ ಪ್ರಶಸ್ತಿಗಳಿಗೆ ಶೋಭೆ.. ಅನಂತ್ ನಾಗ್ ಕೂಡ ಅಂತಹ ಪ್ರತಿಭೆಗಳಲ್ಲಿ ಒಬ್ಬರು. ನಾವೆಲ್ಲರೂ ಒಂದುಗೂಡಿ ಅನಂತ್ ನಾಗ್​ ಅವರನ್ನು ನಾಮ ನಿರ್ದೇಶಿಸೋಣ ಎಂದಿದ್ದಾರೆ.

AnanathnagForPadma ಎಂಬ ಹ್ಯಾಷ್​ಟ್ಯಾಗ್ ಬಳಸುವ ಮೂಲಕ ಎಲ್ಲರೂ ಇದಕ್ಕೆ ಬೆಂಬಲ ಸೂಚಿಸೋಣ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು ಅನಂತ್​ನಾಗ್ ಅವರ ಅಭಿಮಾನಿಗಳು ಪದ್ಮ ಪ್ರಶಸ್ತಿಯನ್ನ ಅನಂತ್ ನಾಗ್ ಅವರಿಗೆ ನೀಡಿ ಗೌರವಿಸುವಂತೆ ಒತ್ತಾಯಿಸಿದ್ದಾರೆ.

blank

The post ಅನಂತ್ ನಾಗ್​ಗೆ ಪದ್ಮ ಪ್ರಶಸ್ತಿ; ಅಭಿಯಾನ ಆರಂಭಿಸಿದ ರಿಶಬ್, ರಕ್ಷಿತ್ ಶೆಟ್ಟಿ appeared first on News First Kannada.

Source: newsfirstlive.com

Source link