ಕೇವಲ 500 ರೂಪಾಯೀಲಿ ಮದುವೆಯಾದ್ರು ಸೇನಾ ಮೇಜರ್ ಮತ್ತು ಮಹಿಳಾ ಜಡ್ಜ್​​

ಕೇವಲ 500 ರೂಪಾಯೀಲಿ ಮದುವೆಯಾದ್ರು ಸೇನಾ ಮೇಜರ್ ಮತ್ತು ಮಹಿಳಾ ಜಡ್ಜ್​​

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕು ಎನ್ನುವ ಗಾದೆ ಮಾತಿದೆ. ಇದರರ್ಥ ತಿನ್ನೋಕೆ ತಿಂಡಿಯಿಲ್ಲ ಅಂದ್ರೂ ಜನರ ಶೋಕಿಗೇನು ಕಡಿಮೆಯಿಲ್ಲ ಎಂಬುದು. ಕೊರೋನಾ ಟೈಮಲ್ಲಂತೂ ಹಲವರು ಕೆಲಸ ಕಳೆದುಕೊಂಡರು, ಒಂದೊತ್ತು ಊಟಕ್ಕೂ ಪರಾಡಿದರು. ಹೀಗಿದ್ದರೂ ಜನ ಮಾತ್ರ ಸಾಲ ಮಾಡಿ ಅದ್ದೂರಿಯಾಗಿ ಮದುವೆಯಾದ ಕಥೆಗಳು ಎಷ್ಟೊ. ಮದುವೆ ಅನ್ನೋದು ಪ್ರತಿಷ್ಠೆ ವಿಚಾರ, ಯಾವುದೇ ಕಾರಣಕ್ಕೂ ಕಾಂಪ್ರಮೈಸ್​​ ಇಲ್ಲ ಅನ್ನೋರು ಇವರು. ಇಂಥವರ ಮಧ್ಯೆ ದುಡ್ಡಿದ್ರೂ ತುಂಬ ಸರಳವಾಗಿ ಮದುವೆಯಾಗೋ ಮೂಲಕ ಎಲ್ಲರಿಗೂ ಮಾದರಿಯಾದ ದಂಪತಿ ಕಥೆ ಇಲ್ಲಿದೆ ನೋಡಿ.

ಹೌದು, ಅದ್ದೂರಿ ಮದುವೆ ಮಾಡೋಕೆ ನೀರಿನಂತೆ ಹಣ ವ್ಯಯಿಸೋ ಜನರ ಮಧ್ಯೆ ಈ ದಂಪತಿ ನಡೆ ಮಾತ್ರ ಎಲ್ಲರಿಗೂ ಮಾದರಿ. ಮಧ್ಯಪ್ರದೇಶದ ಭೂಪಾಲ್​​ ಮೂಲದ ಸೇನಾಧಿಕಾರಿ ಮತ್ತು ಮಹಿಳಾ ಜಡ್ಜ್​​ ಎಂಬುವರು ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ಕೇವಲ 500 ರೂಪಾಯಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಭೋಪಾಲ್​​ ನಿವಾಸಿ ಶಿವಾಂಗಿ ಜೋಶಿ ಮತ್ತು ಅನಿಕೇತ್ ಚತುರ್ವೇದಿ ಯಾವುದೇ ಆಂಡಬರವಿಲ್ಲದೇ ಮದುವೆಯಾಗುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದಲೇ ಕುಟುಂಬಸ್ಥರ ಅನುಮತಿ ಪಡೆದು ಜಡ್ಡ್ ಮುಂದೆಯೇ ಕೋರ್ಟ್​ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಸಮಾಜಕ್ಕೆ ದಂಪತಿ ಸಂದೇಶ

ಸದ್ಯ ಅನಿಕೇತ್​​​ ಲಡಾಖ್​​ನಲ್ಲಿ ಭಾರತೀಯ ಸೇನೆಯಲ್ಲಿದ್ದಾರೆ. ಶಿವಾಂಗಿ ಸಿಟಿ ಮೆಜಿಸ್ಟ್ರೇಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಎಂಗೇಜ್​​ಮೆಂಟ್​ ಮಾಡಿಕೊಂಡಿದ್ದ ಇವರು ಈಗ ಸರಳ ಮದುವೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ.

The post ಕೇವಲ 500 ರೂಪಾಯೀಲಿ ಮದುವೆಯಾದ್ರು ಸೇನಾ ಮೇಜರ್ ಮತ್ತು ಮಹಿಳಾ ಜಡ್ಜ್​​ appeared first on News First Kannada.

Source: newsfirstlive.com

Source link