ವಿಧಾನಸೌಧಕ್ಕೆ ಇರೋ ಸೇಫ್ಟಿ, KRS​​ಗೆ ಯಾಕಿಲ್ಲ; ಮತ್ತೆ ಕಿಡಿಕಾರಿದ ಸುಮಲತಾ

ವಿಧಾನಸೌಧಕ್ಕೆ ಇರೋ ಸೇಫ್ಟಿ, KRS​​ಗೆ ಯಾಕಿಲ್ಲ; ಮತ್ತೆ ಕಿಡಿಕಾರಿದ ಸುಮಲತಾ

ಮಂಡ್ಯ: ಇಂದು ಕೆಆರ್​ಎಸ್​ ಡ್ಯಾಂ ಬಿರುಕು ಮತ್ತು ಅಕ್ರಮ ಗಣಿಗಾರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಂಸದೆ ಸುಮಲತಾ ಅಂಬರೀಶ್​​ ಮಾಧ್ಯಮದವರೊಂದಿಗೆ ಮಾತಾಡಿದರು. ರಾಜ್ಯ ಸರ್ಕಾರಕ್ಕೆ ಸುಮಾರು 1,200 ಕೋಟಿ ರಾಜಧನ ಬಂದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಗಳಿಗೆ ಹಲವು ಬಾರಿ ದಂಡ ಹಾಕಿದ್ದಾರೆ. ಅಧಿಕಾರಿಗಳು ನೋಟಿಸ್ ಕೊಟ್ರೂ ಸಹ ಯಾರೂ ಕೂಡ ರಾಜಧನ ಕಟ್ಟಿಲ್ಲ. ಈವರೆಗೆ ರಾಜಧನ ಕಲೆಕ್ಟ್ ಮಾಡುವಂತ ಕೆಲಸ ಕೂಡ ಆಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು.. ನನಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳ ಲೋಪ ಎದ್ದು ಕಾಣಿಸುತ್ತಿದೆ. ಯಾರು ಯಾರಿಗೆ ದಂಡ ಹಾಕಿದ್ದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೊಡಲಿಲ್ಲ. ಜಿಲ್ಲಾಧಿಕಾರಿಗೆ ರಾಜಧನ ಸಂಗ್ರಹಿಸುವಂತೆ ಸೂಚನೆ ನೀಡಿದ್ದೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಅಧಿಕಾರಿಗಳು ಮಾತ್ರ ಅಲ್ಲಿ ಏನೂ ನಡೆಯುತ್ತಿಲ್ಲ ಅಂತಾರೆ. ಈ ಕುರಿತು ಸಚಿವರಿಗೆ ಮಾಹಿತಿ ನೀಡುತ್ತೇನೆ ಎಂದರು.

ಇದನ್ನೂ ಓದಿ: ಇಷ್ಟು ದಿನ ಸಂಸದೆ ಸುಮಲತಾ ಎಲ್ಲಿ ಮಲ್ಕೊಂಡಿದ್ರು? ನಾಲಿಗೆ ಹರಿ ಬಿಟ್ಟ ಜೆಡಿಎಸ್​ ಮುಖಂಡ

ರಾಜಧನ ಕಲೆಕ್ಟ್ ಮಾಡೋಕೆ ಅಧಿಕಾರಿಗಳು 3 ತಿಂಗಳ ಅವಧಿ ಕೇಳಿದ್ದಾರೆ. ಅದಷ್ಟು ಬೇಗ ರಾಜಧನ ಕಲೆಕ್ಟ್ ಮಾಡಬೇಕು. 1,200 ಕೋಟಿಯಲ್ಲಿ ಒಂದು ಕೋಟಿಯನ್ನೂ ಸಹ ಕೊಟ್ಟಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಅಧಿಕಾರಿಗಳಿಗೆ ಯಾರದಾದ್ರೂ ಒತ್ತಡ ಇದ್ರೆ ಲಿಖಿತ ರೂಪದಲ್ಲಿ ಕೊಡಿ ಅಂತಾ ಕೇಳಿದ್ದೇನೆ. ಜಿಲ್ಲೆಯಲ್ಲಿ ರಾಜಧನ ಕಟ್ಟಿದ್ರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆಆರ್​​ಎಸ್​​ ಡ್ಯಾಂಗೆ ಕಲ್ಲು ಹೊಡೆಯದಂತೆ ಸುಮಲತಾಗೆ ನಿಖಿಲ್​ ಸಲಹೆ

ವಿಧಾನಸೌಧಕ್ಕಿರೋ ಭದ್ರತೆ, ಕೆಆರ್​ಎಸ್​ಗೆ ಯಾಕಿಲ್ಲ

ಇನ್ನು, ವಿಧಾನಸೌದಕ್ಕೆ ಇರೋ ಸೇಫ್ಟಿ, KRS ಡ್ಯಾಂಗೆ ಯಾಕಿಲ್ಲ..? ಕೆಆರ್​ಎಸ್​​ಗೆ ಯಾವುದೇ ಅಪಾಯವಿಲ್ಲ ಎಂದು ಒಂದು ಸರ್ಟಿಫಿಕೇಟ್ ಕೊಡಿ ಎಂದರೆ ಇಲ್ಲ ಅನ್ನುತ್ತಾರೆ. ಮಹಾರಾಜರು ಕಟ್ಟಿದ ಕೆಆರ್​ಎಸ್​ ಡ್ಯಾಂ ಅಪಾಯದಲ್ಲಿದೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಿಧಾನಸೌದದಲ್ಲಿ ಏನಾದ್ರೂ ಆದಲ್ಲಿ ಮಾತ್ರ ಓಡಿ ಹೋಗುತ್ತಾರೆ ಎಂದು ಕೆಂಡಕಾರಿದರು.

The post ವಿಧಾನಸೌಧಕ್ಕೆ ಇರೋ ಸೇಫ್ಟಿ, KRS​​ಗೆ ಯಾಕಿಲ್ಲ; ಮತ್ತೆ ಕಿಡಿಕಾರಿದ ಸುಮಲತಾ appeared first on News First Kannada.

Source: newsfirstlive.com

Source link