ರಾಜಸ್ಥಾನದ ಕೆಲವೆಡೆ ದಿಢೀರ್ ನಿಷೇಧಾಜ್ಞೆ; ಕುತೂಹಲ ಮೂಡಿಸಿದ ಸರ್ಕಾರದ ನಡೆ

ರಾಜಸ್ಥಾನದ ಕೆಲವೆಡೆ ದಿಢೀರ್ ನಿಷೇಧಾಜ್ಞೆ; ಕುತೂಹಲ ಮೂಡಿಸಿದ ಸರ್ಕಾರದ ನಡೆ

ರಾಜಸ್ಥಾನ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ನಿಷೇಧಾಜ್ಞೆ ಹೇರಲಾಗಿದೆ. ಭಾರತ-ಪಾಕಿಸ್ತಾನ ಗಡಿ ಪ್ರದೇಶ ಮತ್ತು ಶ್ರೀ ಗಂಗಾನಗರ್, ಕರಣ್​​ಪುರ್, ರಾಯ್​ಸಿಂಗ್ ನಗರ್, ಅನುಪಗರ್​ ಮತ್ತು ಘರ್ಸಾನ ಬ್ಲಾಕ್​ಗಳಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು ಈ ನಿಷೇಧಾಜ್ಞೆ ಸೆಪ್ಟೆಂಬರ್ 11 ರವರೆಗೆ ಮುಂದುವರೆಯಲಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

144 ಸೆಕ್ಷನ್ ಜಾರಿಯಲ್ಲಿರುವ ಈ ಅವಧಿಯಲ್ಲಿ ಸಂಜೆ 7 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸುವಂತಿಲ್ಲ ಅಥವಾ ಬ್ಯಾಂಡ್​ಗಳನ್ನು ಬಾರಿಸುವಂತಿಲ್ಲ. ರೈತರು ಈ ವೇಳೆ ಸಂಚರಿಸಲು ಬಾರ್ಡರ್ ಪೋಸ್ಟ್ ಆಫೀಸರ್ ಅಥವಾ ಸಶಸ್ತ್ರ ಸಿಬ್ಬಂದಿಯಿಂದ ಅನುಮತಿ ಪಡೆಯಬೇಕೆಂದು ಹೇಳಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಷೇಧಾಜ್ಞೆ ಸಂಬಂಧ ಆದೇಶ ಹೊರಡಿಸಿದ್ದು ನಿನ್ನೆಯಿಂದಲೇ ಆದೇಶ ಜಾರಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

The post ರಾಜಸ್ಥಾನದ ಕೆಲವೆಡೆ ದಿಢೀರ್ ನಿಷೇಧಾಜ್ಞೆ; ಕುತೂಹಲ ಮೂಡಿಸಿದ ಸರ್ಕಾರದ ನಡೆ appeared first on News First Kannada.

Source: newsfirstlive.com

Source link