ಅವಳಿ ನಗರದಲ್ಲಿ ಹೆಚ್ಚಾದ ಮರ್ಡರ್ ಕೇಸ್​; ರೌಡಿಶೀಟರ್​ಗಳಿಗೆ ಶಾಕ್ ಕೊಟ್ಟ ಪೊಲೀಸ್

ಅವಳಿ ನಗರದಲ್ಲಿ ಹೆಚ್ಚಾದ ಮರ್ಡರ್ ಕೇಸ್​; ರೌಡಿಶೀಟರ್​ಗಳಿಗೆ ಶಾಕ್ ಕೊಟ್ಟ ಪೊಲೀಸ್

ಹುಬ್ಬಳ್ಳಿ: ರೌಡಿಶೀಟರ್​​ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಲಾಭುರಾಮ್ ರೌಡಿಶೀಟರ್​​ಗಳಿಗೆ ವಾರ್ನ್ ಮಾಡಿದ್ದಾರೆ.

ಛೋಟಾ ಮುಂಬೈ ಎಂದೇ ಕರೆಯಲಾಗುವ ಅವಳಿ ನಗರದಲ್ಲಿ ಲಾಕ್​ಡೌನ್​ ಓಪನ್​ ಆದಾಗಿನಿಂದ ಹತ್ಯೆ ಪ್ರಕರಣಗಳು ಜಾಸ್ತಿಯಾಗಿದೆ ಎನ್ನಲಾಗಿದೆ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ನಗರದ ರೌಡಿಗಳ ಮನೆಗೆ ಕಮಿಷನರ್ ವಾರ್ನ್ ಮಾಡಿದ್ದಾರೆ. ಈ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹು-ಧಾ ನಗರದ 570ಕ್ಕೂ ಹೆಚ್ಚು ಜನ ರೌಡಿಗಳ ಬಳಿ ಇದ್ದ ತಲ್ವಾರ್, ಮಚ್ಚು, ಚಾಕುಗಳನ್ನ ವಶಕ್ಕೆ ಪಡೆದಿದ್ದಾರೆ.

The post ಅವಳಿ ನಗರದಲ್ಲಿ ಹೆಚ್ಚಾದ ಮರ್ಡರ್ ಕೇಸ್​; ರೌಡಿಶೀಟರ್​ಗಳಿಗೆ ಶಾಕ್ ಕೊಟ್ಟ ಪೊಲೀಸ್ appeared first on News First Kannada.

Source: newsfirstlive.com

Source link