ವಿಷಾಹಾರ ಸೇವನೆ ದುರಂತ; ಸಾವು-ಬದುಕಿನ ಹೋರಾಟ ನಿಲ್ಲಿಸಿದ 16 ರ ಬಾಲಕಿ

ವಿಷಾಹಾರ ಸೇವನೆ ದುರಂತ; ಸಾವು-ಬದುಕಿನ ಹೋರಾಟ ನಿಲ್ಲಿಸಿದ 16 ರ ಬಾಲಕಿ

ಚಿತ್ರದುರ್ಗ: ಜಿಲ್ಲೆಯ ಇಸಾಮುದ್ರದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಇಬ್ಬರು ಅಸ್ವಸ್ಥಗೊಂಡ ಘಟನೆ ನಡೆದಿತ್ತು.

ವಿಷಾಹಾರ ಸೇವಿಸಿ ಅನಾರೋಗ್ಯಕ್ಕೊಳಗಾಗಿದ್ದ 16 ವರ್ಷದ ಬಾಲಕಿ ರಮ್ಯಳನ್ನ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಬಾಲಕಿಯೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಬಾಲಕಿ ಸಾವಿನಿಂದ ವಿಷಾಹಾರ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ವಿಷಪೂರಿತ ಆಹಾರ ಸೇವಿಸಿ ಮೂವರ ದುರ್ಮರಣ; ಇಬ್ಬರು ಗಂಭೀರ

The post ವಿಷಾಹಾರ ಸೇವನೆ ದುರಂತ; ಸಾವು-ಬದುಕಿನ ಹೋರಾಟ ನಿಲ್ಲಿಸಿದ 16 ರ ಬಾಲಕಿ appeared first on News First Kannada.

Source: newsfirstlive.com

Source link