ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿಗೊಳಗಾಗಿದ್ದ ವಿದ್ಯಾರ್ಥಿನಿಗೆ ಮತ್ತೆ ಪಾಸಿಟಿವ್​

ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿಗೊಳಗಾಗಿದ್ದ ವಿದ್ಯಾರ್ಥಿನಿಗೆ ಮತ್ತೆ ಪಾಸಿಟಿವ್​

ಕೇರಳ: ಭಾರತದಲ್ಲೇ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಗೆ ಒಂದು ವರ್ಷ 6 ತಿಂಗಳ ನಂತರ ಎರಡನೇ ಬಾರಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಕೊರೊನಾ ಕೇಸ್​ ಪತ್ತೆಯಾಗಿ 1 ವರ್ಷ, ಈವರೆಗೆ 1.07 ಕೋಟಿ ಪ್ರಕರಣ ದಾಖಲು

ಚೀನಾದ ವುಹಾನ್ ನಗರದಿಂದ ವಾಪಸ್ ಆಗಿದ್ದ ಕೇರಳದ ತ್ರಿಸ್ಸುರ್ ಜಿಲ್ಲೆಯ ವಿದ್ಯಾರ್ಥಿನಿಗೆ 2020ರ ಜನವರಿ 30ರಂದು ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ದೇಶದಲ್ಲಿ ಇದು ಮೊದಲ ಕೊರೊನಾವೈರಸ್ ಸೋಂಕಿನ ಪ್ರಕರಣವಾಗಿತ್ತು. ಈ ವಿದ್ಯಾರ್ಥಿನಿ ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ, ಎರಡನೇ ಬಾರಿ ಸೋಂಕು ತಗುಲಿದ್ದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: ದೇಶದ ಮೊದಲ ಕೊರೊನಾ ಸೋಂಕಿತ ರೋಗಿ ಗುಣಮುಖ..!? ಗುಡ್​ನ್ಯೂಸ್​ಗಾಗಿ ವೇಯ್ಟಿಂಗ್..!

ನಾನು ದೆಹಲಿಗೆ ಹೋಗುವುದಕ್ಕೂ ಮೊದಲು ನಡೆಸಿದ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ RT-PCR ತಪಾಸಣೆಯಲ್ಲಿ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ನನಗೆ ಕೆಲವು ಸೋಂಕಿನ ಲಕ್ಷಣಗಳಿದ್ದು, ಸದ್ಯ ಹೋಂ ಐಸೋಲೇಷನ್​ನಲ್ಲಿದ್ದು ಆರಾಮ್​ ಆಗಿದ್ದೀನಿ ಅಂತ ಹೇಳಿದ್ದಾರೆ.

The post ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿಗೊಳಗಾಗಿದ್ದ ವಿದ್ಯಾರ್ಥಿನಿಗೆ ಮತ್ತೆ ಪಾಸಿಟಿವ್​ appeared first on News First Kannada.

Source: newsfirstlive.com

Source link