ಕೊರೊನಾ ಕಷ್ಟಕಾಲದಲ್ಲೂ ₹30,000 ಕೋಟಿ ಟರ್ನ್ಓವರ್​ ಮಾಡಿದ ಪತಂಜಲಿ

ಕೊರೊನಾ ಕಷ್ಟಕಾಲದಲ್ಲೂ ₹30,000 ಕೋಟಿ ಟರ್ನ್ಓವರ್​ ಮಾಡಿದ ಪತಂಜಲಿ

ನವದೆಹಲಿ: ಕೊರೊನಾದಿಂದಾಗಿ ಜಾರಿ ಮಾಡಲಾಗಿದ್ದ ಲಾಕ್​​ಡೌನ್​ನಿಂದ ಬಹುತೇಕ ಸಂಸ್ಥೆಗಳು ನಷ್ಟ ಅನುಭವಿಸಿದ್ದರೆ ಇತ್ತ ಬಾಬಾ ರಾಮ್​ದೇವ್​ ನೇತೃತ್ವದ ಪತಂಜಲಿ ಗ್ರೂಪ್ 2020-21 ರಲ್ಲಿ 30,000 ಕೋಟಿ ವಹಿವಾಟು ನಡೆಸಿರೋದಾಗಿ ಘೋಷಿಸಿದೆ. ಇತ್ತೀಚೆಗೆ ಸಂಸ್ಥೆ ಸ್ವಾಧೀನಪಡಿಸಿಕೊಂಡ ರುಚಿ ಸೋಯಾದಿಂದಲೇ ವಾರ್ಷಿಕ 16,318 ಕೋಟಿ ಟರ್ನ್​ ಓವರ್​ ನಡೆಸಿದೆ ಎನ್ನಲಾಗಿದೆ.

ಅಲ್ಲದೇ 3-4 ವರ್ಷಗಳಲ್ಲಿ ತನ್ನ ಸಂಸ್ಥೆಗಳನ್ನ ಸಾಲರಹಿತ ಸಂಸ್ಥೆಗಳನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಬಾಬಾ ರಾಮ್​​ದೇವ್ ಹೇಳಿಕೆ ನೀಡಿದ್ದಾರೆ. 2020-21ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯೊಂದೇ ಒಟ್ಟು 9,783 ಕೋಟಿ ಟರ್ನ್​​ ಓವರ್​ ನಡೆಸಿದೆಯಂತೆ.

ಸಂಸ್ಥೆಗಳ ಟರ್ನ್​ ಓವರ್​..
ಪತಂಜಲಿ ನ್ಯಾಚುರಲ್ ಬಿಸ್ಕಟ್ಸ್- 650 ಕೋಟಿ
ಆಯುರ್ವೇದ ಆರ್ಮ್ ದಿವ್ಯ ಫಾರ್ಮಸಿ- 850 ಕೋಟಿ
ಪತಂಜಲಿ ಪರಿವಾಹನ್- 548 ಕೋಟಿ
ಪತಂಜಲಿ ಗ್ರಾಮೋದ್ಯೋಗ- 396 ಕೋಟಿ

The post ಕೊರೊನಾ ಕಷ್ಟಕಾಲದಲ್ಲೂ ₹30,000 ಕೋಟಿ ಟರ್ನ್ಓವರ್​ ಮಾಡಿದ ಪತಂಜಲಿ appeared first on News First Kannada.

Source: newsfirstlive.com

Source link