ನಿಮ್ಮ ಬಳಿ ಹಳೆಯ 1 ರೂ. ನೋಟಿದ್ಯಾ? ಅಯ್ಯೋ ಹಾಗಿದ್ರೆ ನೀವು 7 ಲಕ್ಷ ಗಳಿಸಬಹುದು..!

ನಿಮ್ಮ ಬಳಿ ಹಳೆಯ 1 ರೂ. ನೋಟಿದ್ಯಾ? ಅಯ್ಯೋ ಹಾಗಿದ್ರೆ ನೀವು 7 ಲಕ್ಷ ಗಳಿಸಬಹುದು..!

ನಿಮಗೆ ಹಳೇ ಕಾಯಿನ್​ಗಳನ್ನ ಸಂಗ್ರಹಿಸುವ ಹವ್ಯಾಸ ಇದೆಯಾ..? ನಿಮ್ಮ ಬಳಿ ತುಂಬಾ ಹಿಂದೆ ಚಲಾವಣೆಯಲ್ಲಿದ್ದ ಕಾಯಿನ್​ಗಳು, ನೋಟುಗಳು ಇವೆಯೇ..? ಹಾಗಾದ್ರೆ ನೀವು ಲಕ್ಷಾಧಿಪತಿಗಳಾಗೋಕೆ.. ಅಷ್ಟೇ ಯಾಕೆ ಅದೃಷ್ಟ ಖುಲಾಯಿಸಿದ್ರೆ ಕೋಟ್ಯಾಧಿಪತಿಯಾಗೋಕೆ ಇಲ್ಲೊಂದು ಚಾನ್ಸ್ ಇದೆ. ಇತ್ತೀಚೆಗೆ ₹1 ರ ನೋಟ್ ಬರೋಬ್ಬರಿ 7 ಲಕ್ಷದವರೆಗೆ ಹರಾಜಾಗಿತ್ತು, ನೀವೂ ಕೂಡ ಇಂಥ ಅದೃಷ್ಠವಂತರಾಗಬಹುದು.

ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ₹1, ₹2, ₹5 ರೂಪಾಯಿಗಳನ್ನ ಆನ್​ಲೈನ್​ನಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಹರಾಜು ಕರೆಯೋ ಮೂಲಕ ಕೂತಲ್ಲೇ ಲಕ್ಷಾಂತರ ಹಣ ಗಳಿಸಿದವರ ಬಗ್ಗೆ ಇತ್ತೀಚೆಗೆ ವರದಿಗಳಾಗ್ತಿರೋ ಬೆನ್ನಲ್ಲೇ ಇದೀಗ ಇಂಥ ಹಳೇ ಕರೆನ್ಸಿ ಹೊಂದಿರುವವರಿಗೆ ಅದೃಷ್ಟದ ಬಾಗಿಲು ತೆರೆದಿದೆ.

ಕಳೆದ 26 ವರ್ಷಗಳ ಹಿಂದೆ ಭಾರತ ಸರ್ಕಾರ ₹1 ರ ನೋಟು ಮುದ್ರಣವನ್ನ ನಿಲ್ಲಿಸಿತ್ತು. ನಂತರ ಜನವರಿ 2015 ರಲ್ಲಿ ಮರುಮುದ್ರಣದ ಮೂಲಕ ಹೊಸಬಗೆಯ ನೋಟುಗಳ ಪರಿಚಯ ಮಾಡಿತು.

ಯಾವೆಲ್ಲ ನೋಟುಗಳು ನಿಮ್ಮ ಬಳಿ ಇದ್ದರೆ ಲಕ್ಷಾಧೀಶರಾಗೋದು ಗ್ಯಾರಂಟೀ ಗೊತ್ತಾ?

  • ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ರಾಜ್ ಆಡಳಿತದಲ್ಲಿ ಅಂದ್ರೆ 1935 ರ ಸಮಯದಲ್ಲಿ ಮುದ್ರಣವಾದ ₹1 ರ ನೋಟು ನಿಮ್ಮ ಬಳಿ ಇದ್ರೆ ನೀವು ಲಕ್ಷಾಧಿಪತಿಗಳು ಎಂದುಕೊಳ್ಳಿ. ಆದ್ರೆ ಈ ನೋಟಿನ ಮೇಲೆ ಅಂದಿನ ಗೌರ್ನರ್ ಜೆ. ಡಬ್ಲೂ ಕೆಲ್ಲಿ ಅವರ ಸಹಿ ಇರಬೇಕು.. ಇದು ಕಂಡೀಷನ್..
  • ನಂತರದಲ್ಲಿ 1957 ರಲ್ಲಿ ಹಾಗೂ 1966ರಲ್ಲಿ ಮುದ್ರಣವಾದ 1 ರೂಪಾಯಿ ನೋಟು ಇದ್ದರೂ ಝಣ ಝಣ ಕಾಂಚಾಣ ಗ್ಯಾರಂಟೀ.. ಯಾಕಂದ್ರೆ.. 1957ರಲ್ಲಿ ಮುದ್ರಣವಾದ ₹1 ರ ನೋಟು ₹57,000 ಕ್ಕೆ ಹರಾಜಾಗಲಿದೆ. ಇನ್ನು 1966 ರಲ್ಲಿ ಮುದ್ರಣವಾದ ₹1 ರ ನೋಟು ₹45,000 ರೂಗಳಿಗೆ ಹರಾಜಾಗಲಿವೆ.

ಇಂಥ ನೋಟುಗಳು ನಿಮಗೆ ಸಿಕ್ಕಿದ್ದಲ್ಲಿ ನೀವು ಕಾಯಿನ್ ಬಜಾರ್ ವೆಬ್​ಸೈಟ್​ನಲ್ಲ್ಲಿ ನಿಮ್ಮದೇ ಒಂದು ಖಾತೆ ತೆರೆದು ನಿಮ್ಮ ಮಾಹಿತಿಯನ್ನು ಫೀಡ್ ಮಾಡಿ ಇಂಥ ಇಂಥ ನೋಟುಗಳು ಅಥವಾ ಹಳೇ ಕಾಯಿನ್​ಗಳನ್ನ ಮಾರಾಟ ಮಾಡಬಹುದಾಗಿದೆ. ಕಾಯಿನ್ ಅಥವಾ ನೋಟಿನ ಫೋಟೋ ಹಾಕಿ ಅದಕ್ಕೆ ನೀವು ಬಯಸುವ ಬೆಲೆಯನ್ನ ನಮೂದಿಸಬಹುದು.. ಆಸಕ್ತಿಯಿದ್ದವರು ನಿಮ್ಮನ್ನು ನೇರವಾಗಿ ಭೇಟಿಯಾಗಿ ಅದನ್ನ ಖರೀದಿಸಲಿದ್ದಾರೆ.

The post ನಿಮ್ಮ ಬಳಿ ಹಳೆಯ 1 ರೂ. ನೋಟಿದ್ಯಾ? ಅಯ್ಯೋ ಹಾಗಿದ್ರೆ ನೀವು 7 ಲಕ್ಷ ಗಳಿಸಬಹುದು..! appeared first on News First Kannada.

Source: newsfirstlive.com

Source link